Cinisuddi Fresh Cini News Tv / Serial 

ಕಸ್ತೂರಿ ನಿವಾಸದಲ್ಲಿ ಸಪ್ತಪದಿ ಸಂಭ್ರಮ, ಕಾವ್ಯಾಂಜಲಿಯಲ್ಲಿ ಮಂಡ್ಯ ರಮೇಶ್

# ಕಸ್ತೂರಿ ನಿವಾಸ :
ಉದಯ ಟಿವಿಯಲ್ಲಿ ಸಂಜೆ ೭ಕ್ಕೆ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಇತ್ತಿಚಿಗಷ್ಟೆ ೫೦೦ರ ಸಂಭ್ರಮ ಆಚರಿಸಿಕೊಂಡಿತು. ಇದೇ ಸಂತಸದಲ್ಲಿ ಈಗ ಮದುವೆ ಸಂಭ್ರಮದ ವಿಶೇಷ ಸಂಚಿಕೆಗಳನ್ನು ವೀಕ್ಷಕರಿಗಾಗಿ ಬಿತ್ತರಿಸುತ್ತಿದೆ.ರಾಘವ್ ಬದುಕಲ್ಲಿ ಪ್ರಾರಂಭವಾಗುತ್ತಿದೆ ಹೊಸ ಅಧ್ಯಾಯ . ಖುಷಿಯ ಜೊತೆಗೆ ರಾಘವ್ ಸಪ್ತ ಹೆಜ್ಜೆಗಳಿಡೊ ಶುಭಗಳಿಗೆಗೆ ಸಜ್ಜಾಗುತ್ತಿದೆ ಕಸ್ತೂರಿ ನಿವಾಸ.

ರಾಘವ ಖುಷಿಯ ವಿವಾಹ ಮಹೋತ್ಸವಕ್ಕೆ ಈಡಿ ಮನೆ ಕಳೆ ಕಟ್ಟುತ್ತಿದೆ. ಇದೇ ಸಂದರ್ಭದಲ್ಲಿ ಮೃದಲಾ ವಿಶೇಷವಾಗಿ ಎಂಟ್ರಿ ಕೊಟ್ಟಿದ್ದಾರೆ.ಅಮೃತಾ ರಾಮಮೂರ್ತಿ ಈ ಸಂದರ್ಭದಲ್ಲಿ ಆಗಮಿಸಿದ್ದು ಏಕೆ ಎಂಬುದು ಕೂತಹಲವಿದೆ. ಮೃದಲಾ ಪಾತ್ರ ಈ ಸಮಯದಲ್ಲಿ ಏನನ್ನು ತಿರುವು ಕಾಣುತ್ತದೆ ಎಂಬುದನ್ನು ಸಂಚಿಕೆಯಲ್ಲಿ ನೋಡಬಹುದು.

ಶಾಸ್ರ್ತೋಕ್ತವಾಗಿ ಮದುವೆ ಕಾರ್ಯಕ್ರಮನ್ನು ನಡಿಸಲಾಗಿದೆ. ಬಳೆ ಶಾಸ್ತ್ರ , ಅರಿಶಿನ ಶಾಸ್ತ್ರ , ಮೆಹೆಂದಿ ಹೀಗೆ ನೈಜ ರೀತಿಯಲ್ಲಿ ನೆರವೇರಿಸಿದ್ದಾರೆ.
ಈ ಕಲ್ಯಾಣೋತ್ಸವದಲ್ಲಿ ಸಂಗೀತ ಮತ್ತು ನೃತ್ಯದ ರಂಗು ಎರಡು ಇದೆ. ವಿಶೇಷವೆಂದರೆ ಖಡಕ್ ರೆಟ್ರೊ ಲುಕ್‌ನಲ್ಲಿ ಈಡಿ ಫ್ಯಾಮಿಲಿ ನೃತ್ಯ ಮಾಡುತ್ತಾರೆ. ಕಸ್ತೂರಿನಿವಾಸದ ಈಡಿ ತಂಡ ಹಾಡು – ನೃತ್ಯದೊಂದಿಗೆ ಸಪ್ತಪದಿಯ ಕಂತುಗಳಿಗೆ ಸಾಕ್ಷಿಯಾಗಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.ರಾಘವ್ ಖುಷಿ ಮದುವೆ ಗೆ ಜೊತೆಯಾಗ್ತಿದ್ದಾರೆ ಯಾರಿವಳು ಧಾರಾವಾಹಿಯ ಮಾಯ ಮತ್ತು ನಿಖಿಲ್ , ಹಾಗು ಕಾವ್ಯಾಂಜಲಿಯ ಎರಡು ಸೂಪರ್ ಹಿಟ್ ಜೋಡಿಗಳು. ಇದೆಲ್ಲದರ ನಡುವೆ ಕಥೆಯಲ್ಲಿ ವಿಶೇಷ ತಿರುವುಗಳು ಸೇರಿವೆ , ಅಡೆಚಣೆಗಳು ನಡುವೆ ಹೇಗೆ ನಡೆಯತ್ತೆ ಈ ಶುಭಕಾರ್ಯಅನ್ನುವುದೆ ಕಥಾ ಹಂದರ.
ರಂಗೇರಿತ್ತಿರೊ ಈ ವಿವಾಹ ಸಂಭ್ರಮ ಸೋಮವಾರದಿಂದ ಶನಿವಾರದ ವರೆಗೆ ಸಂಜೆ ೭ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

# ಕಾವ್ಯಾಂಜಲಿ:
ಉದಯ ಟಿವಿಯ ಜನಪ್ರಿಯ ಧಾರಾವಾಹಿಯಾದ ಕಾವ್ಯಾಂಜಲಿ ತನ್ನ ವಿಶಿಷ್ಟ ಕಥಾಹಂದರದಿಂದ ಜನರ ಮನಸನ್ನು ಗೆದ್ದು ೩೦೦ ಸಂಚಿಕೆಗಳನ್ನ ಪೂರೈಸಿದೆ.

ಪ್ರಸ್ತುತ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಮೋಸ್ಟ್‌ರೊಮ್ಯಾಂಟಿಕ್‌ ಲವ್‌ಸ್ಟೋರಿ ಅಂದ್ರೆ ಕಾವ್ಯಾಂಜಲಿ ಅನ್ನೋದು ಮನೆಮಾತಾಗಿದೆ. ಆದ್ರೆ ಕೇವಲ ಪ್ರೀತಿಯ ಪರಿಧಿಗಷ್ಟೇ ತನ್ನ ಕಥೆಯನ್ನ ಸೀಮಿತ ಮಾಡಿಕೊಳ್ಳದೆ, ಭಾವನಾತ್ಮಕವಾಗಿ ಸಹ ಸಂಬಂಧಗಳ ಸೂಕ್ಷ್ಮತೆಯನ್ನೂ ಎಳೆಎಳೆಯಾಗಿ ಬಿಚ್ಚಿಟ್ಟು ಪ್ರೇಕ್ಷಕರನ್ನು ಮನರಂಜಿಸುತ್ತಿದೆ.

ಮೊದಲಿಂದಲೂ ಹೊಸ ಹೊಸ ಪ್ರಯತ್ನಗಳಿಗೆ ಹೆಸರಾಗಿರುವಂತ ತಂಡ ಗೋವಾ ನಂತರ ಮೊನ್ನೆ ಮೊನ್ನೆಯಷ್ಟೆ “ರೆಟ್ರೋ” ಸ್ಟೈಲ್ನಲ್ಲಿ ಸಣ್ಣ ಝಲಕ್‌ಕೂಡಾ ನೀಡಿತ್ತು. ಇದಕ್ಕಾಗಿ ಪಾತ್ರಧಾರಿಗಳಾದ ದರ್ಶಕ್ ಗೌಡ ಮತ್ತು ವಿದ್ಯಶ್ರೀ ಜಯರಾಂ ವೈಯಕ್ತಿಕ ಆಸಕ್ತಿವಹಿಸಿ ಸಂಪೂರ್ಣ ತಯಾರಿಯೊಂದಿಗೆ ದೃಶ್ಯಕ್ಕೆ ಜೀವ ತುಂಬಿದ್ದರು. ಇದೀಗ ಮಡಿಕೇರಿಯ ನಿಸರ್ಗದ ಮಡಿಲಲ್ಲಿ ಚಳಿ ಗಾಳಿ ಮಳೆಯ ನಡುವೆಯೂ ಯಶಸ್ವಿಯಾಗಿ ಶೂಟಿಂಗ್‌ಮುಗಿಸಿದೆ.

ಈಗ ಕಥೆಯ ಪ್ರಮುಖ ಪಾತ್ರವಾದ ಸುಶಾಂತ್‌ಜನ್ಮರಹಸ್ಯವನ್ನ ಬೇಧಿಸೋಕೆ ನಾಯಕಿ ಅಂಜಲಿ ಪಣ ತೊಟ್ಟು ಗಂಡನ ಜೊತೆ ಮಡಿಕೇರಿಗೆ ಪಯಣ ಬೆಳೆಸಿದ್ದಾಳೆ. ಸ್ನೇಹಕ್ಕೆ ಕಟ್ಟುಬಿದ್ದು ಸುಶಾಂತ್‌ಕೈ ಹಿಡಿದ ಅಂಜಲಿ ಮುಂಗಾರಿನ ಚಳಿಯಲ್ಲಿ ಸುಶಾಂತ್‌ಮೇಲೆ ಪ್ರೀತಿ ಮಳೆ ಸುರಿಸೋಕೆ ತಯಾರಾಗಿದ್ದಾಳೆ.

ಕಾವ್ಯಾಂಜಲಿ “ಪ್ರೀತಿ ಮುಂಗಾರು” ಪ್ಯಾಕೇಜಲ್ಲಿ ಮತ್ತೊಂದು ಸರ್ಪ್ರೈಸ್‌ಇದೆ. ಅದು ಮಂಡ್ಯ ರಮೇಶ್.ವಿಭಿನ್ನ ಪಾತ್ರಗಳಿಗೆ ಜೀವ ತುಂಬಿರುವಂತಹ ನಟ ಮಂಡ್ಯ ರಮೇಶ್‌ಇಲ್ಲಿ ಜೋಡಿ ಜೀವಗಳ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದ್ದಾರೆ. ಹಿಂದೆಂದೂ ಮಾಡದಂತ ಪಾತ್ರವಿದು ಅಂತಾರೆ ಈ ಪ್ರಬುದ್ಧ ನಟ. ಮುಪ್ಪಿನ ಅಂಚಲ್ಲಿ ತನ್ನ ಕಡೆಯ ದಿನಗಳನ್ನ ಕಳೆಯುತ್ತಿರೊ ಕಾರ್ಯಪ್ಪ ವೃತ್ತಿಯಿಂದ ಒಬ್ಬ ಫೋಟೋಗ್ರಾಫರ್‌ಆಗಿರುತ್ತಾರೆ.

ಕಥೆಯಲ್ಲಿ ಅಂಜಲಿ ಹುಡುಕುತ್ತಿರೊ ಫೋಟೋವೊಂದರ ಹಿನ್ನೆಲೆಯನ್ನ ಪರಿಚಯಿಸೋದು ಇದೇ ಕಾರ್ಯಪ್ಪ. ಏನಿದು ನಂಟು? ಅಸಲಿಗೆ ಕಾರ್ಯಪ್ಪನಿಗೆ ತಿಳಿದಿರೊ ಸತ್ಯ ಅಂಜಲಿಗೆ ತಿಳಿಯುತ್ತಾ? ಸುಶಾಂತ್‌ಜನ್ಮರಹಸ್ಯ ಅವನಿಗೆ ತಿಳಿಯುತ್ತಾ? ಅನ್ನೊ ಸಾಕಷ್ಟು ಕುತೂಹಲಕಾರಿ ಸಂಗತಿಗಳನ್ನ ಹೊತ್ತು ತರ್ತಿದೆ ಕಾವ್ಯಾಂಜಲಿ ಧಾರಾವಾಹಿ.

ಮಂಡ್ಯ ರಮೇಶ್‌ ವಿಶೇಷ ಸಂಚಿಕೆಗಳು ಸೋಮವಾರದಿಂದ ಶನಿವಾರ ರಾತ್ರಿ ೮.೩೦ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ..

Related posts