Cinisuddi Fresh Cini News 

“ಕಾರ್ತಿಕ್ ಸ್ಟುಡಿಯೋ”ದಲ್ಲಿ ಸಿನಿಮಾಗಳ ಸುರಿಮಳೆ

ಸ್ಯಾಂಡಲ್ ವುಡ್ ನಲ್ಲಿ ಚಿತ್ರ ಚಟುವಟಿಕೆಗಳು ಕೊರೋನಾ ಹಾವಳಿಯಿಂದ ಸ್ತಬ್ಧವಾಗಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರ ಚಿತ್ರ ಚಟುವಟಿಕೆಯ ಕೆಲಸಗಳು ಆರಂಭವಾಗಿದೆ. ಆ ನಿಟ್ಟಿನಲ್ಲಿ ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ರ ಕಾರ್ತಿಕ್ ಸ್ಟುಡಿಯೋದಲ್ಲಿ ಸಿನಿಮಾಗಳ ಸುರಿಮಳೆ ಆರಂಭಗೊಂಡಿದೆ.

ಕಳೆದ 4 ದಿನಗಳಿಂದ 8 ಚಿತ್ರಗಳು ಬುಕ್ ಆಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಚಿತ್ರೀಕರಣ ಮುಗಿಯುತ್ತಿದ್ದಂತೆ ಪೋಸ್ಟ್ ಪ್ರೊಡಕ್ಷನ್ ಪ್ಯಾಕೇಜ್ ಗೆoದು ಕಾರ್ತಿಕ್ ಸ್ಟುಡಿಯೋಗೆ ಚಿತ್ರಗಳು ಸಾಲು ಸಾಲಾಗಿ ಬರುತ್ತಿವೆ. ಈಗಾಗಲೇ “ಸಿಂಧೂರ” , “ಮರೆಯದೆ ಕ್ಷಮಿಸು” , “ಇಲ್ಲಿದೆ ಏನೋ ಸಮಸ್ಯೆ” , “ಸೈರಾ” , “ಎಲ್ಲಿ ಜಾರಿತೋ ಮನಸ್ಸು” , “ನವಾಬ” , “ಘಾಟ್ ಸೆಕ್ಷನ್” ಹಾಗೂ ಹಿಂದಿಯ “ಹಲೋ ಕೌನ್” ಚಿತ್ರಗಳು ಕಾರ್ತಿಕ್ ಸ್ಟುಡಿಯೊದಲ್ಲಿ ಕೆಲಸವನ್ನು ಆರಂಭಿಸಿದೆ.

ಈ ಸ್ಟುಡಿಯೊ ಬಹಳಷ್ಟು ಬ್ಯೂಸಿ ಆಗಿದ್ದು , ಪೋಸ್ಟ್ ಪ್ರೊಡಕ್ಷನ್ ಕೆಲಸಗಳಾದ ಮ್ಯೂಸಿಕ್ , ಟೋಟಲ್ ಫಿಲ್ಮ್ ಪ್ಯಾಕೇಜ್ , ಡಬ್ಬಿಂಗ್, ರೀ- ರೆಕಾರ್ಡಿಂಗ್, ಮಿಕ್ಸಿಂಗ್, ಸಾಂಗ್ ರೆಕಾರ್ಡಿಂಗ್ , ಕ್ಯಾಮೆರಾ , ಶೂಟಿಂಗ್ ಯೂನಿಟ್ ಸೇರಿದಂತೆ ಹಲವು ಕೆಲಸಗಳು ಚುರುಕುಗೊಂಡಿದೆ.

ಸುಮಧುರ ಸಂಗೀತವನ್ನು ನೀಡುವುದರ ಜೊತೆಗೆ ಚಿತ್ರಗಳಿಗೆ ಸಾಹಿತಿಯವನ್ನು ಬರೆಯುತ್ತಾ ಚಿತ್ರತoಡದವರಿಗೆ ಬೆನ್ನೆಲುಬಾಗಿ ನಿಂತಿದ್ದು , ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಸಹಕಾರಿಯಾಗಿ ಸಂಗೀತ ನಿರ್ದೇಶಕ ಹಾಗೂ ಸ್ಟುಡಿಯೋದ ಮಾಲೀಕ ಕಾರ್ತಿಕ್ ವೆಂಕಟೇಶ್ ಕೂಡ ಕೆಲಸ ಮಾಡುತ್ತಿದ್ದಾರೆ.

ಸುಮಾರು 11 ವರ್ಷಗಳಲ್ಲಿ ಸುಮಾರು ನೂರಕ್ಕೂ ಅಧಿಕ ಚಿತ್ರಗಳು ಕೆಲಸ ಕಾರ್ತಿಕ್ ಸ್ಟುಡಿಯೋದಲ್ಲಿ ನಡೆದಿದ್ದು , ಈಗಾಗಲೇ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಂಗೀತ ನೀಡಿದ್ದು ಇನ್ನು ಹುಲಿಹೈದ, ಒಲವ ಹಾದಿಯಲ್ಲಿ, ಮಧುರಂ ಮಿಲನಂ ಮೌನಂ, ಅಯ್ಯನಗುಡಿ, ಚೆಲುವಿನ ಚಂದಿರ, ಪಂಚಮುಖಿ, ರಿಯಲ್ ಎಸ್ಟೇಟ್ ಸೇರಿದಂತೆ ಇನ್ನು ಹಲವಾರು ಚಿತ್ರಗಳು ಬರಬೇಕಿದೆ.

ವಿಶೇಷವೆಂದರೆ ಮಧುರಂ ಮಿಲನಂ ಮೌನಂ ಎಂಬ ವಿನೂತನ ಸಂಗೀತ ಪ್ರಯೋಗದ ಚಿತ್ರಕ್ಕೆ ಸಾರಥ್ಯ ವಹಿಸಿಕೊಂಡು ಸರಿಪ ಮೂರೇ ಸ್ವರದಲ್ಲಿ ಹಾಡೊಂದನ್ನು ಕಂಪೋಸ್ ಮಾಡಿರುವುದು ವಿಶೇಷವಾಗಿದೆ. ಇದಕ್ಕೆ ಯಾಹೋ ಪ್ರಿಯ ರಾಗ ಎಂದು ಕೂಡ ಕಾರ್ತಿಕ್ ನಾಮಕರಣ ಮಾಡಿದ್ದಾರೆ. ಖ್ಯಾತ ಗಾಯಕ , ಗಾಯಕಿಯರು ಕೂಡ ಇವರ ಸ್ಟುಡಿಯೋದಲ್ಲಿ ಹಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಬಹಳಷ್ಟು ಕನಸುಗಳನ್ನು ಹೊತ್ತುಕೊಂಡಿದ್ದು , ಬರುವಂತ ಹೊಸಬರು , ಹಳಬರು ನಿರ್ಮಾಪಕ , ನಿರ್ದೇಶಕರಿಗೆ ಸಹಕಾರಿಯಾಗುವಂತಹ ಸುಸಜ್ಜಿತ ಸ್ಟುಡಿಯೋವನ್ನು ನಿರ್ಮಿಸಿಕೊಂಡು ಪ್ರಿ- ಪ್ರೊಡಕ್ಷನ್, ಪೋಸ್ಟ್- ಪ್ರೊಡಕ್ಷನ್ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದು ಸ್ಕ್ರಿಪ್ಟ್‍ನಿಂದ ಚಿತ್ರ ಬಿಡುಗಡೆಯಾಗುವವರೆಗೂ ಎಲ್ಲ ಸೌಲಭ್ಯಗಳನ್ನು ಮಾಡಿಕೊಡುವ ಮೂಲ ಉದ್ದೇಶವನ್ನು ಇವರು ಹೊಂದಿದ್ದಾರೆ.

ಹಾಗಾಗಿಯೇ ಇವರ ಸ್ಟುಡಿಯೋಗೆ ಬಹಳಷ್ಟು ಚಿತ್ರಗಳು ಈಗ ಸಾಲು ಸಾಲಾಗಿ ಬರುತ್ತಿದ್ದು , ಈಗಾಗಲೇ 8 ಚಿತ್ರಗಳು ಮುಂಗಡ ಅಡ್ವಾನ್ಸ್ ಮಾಡಿ ತನ್ನ ಕೆಲಸವನ್ನು ಆರಂಭಿಸಿದೆ. ಇನ್ನೂ ಸುಮಾರು 10ಕ್ಕೂ ಹೆಚ್ಚು ಚಿತ್ರಗಳ ಮಾತುಕತೆ ಕೂಡಾ ನಡೆಯುತ್ತಿದೆಯಂತೆ. ಒಟ್ಟಿನಲ್ಲಿ ಕಾರ್ತಿಕ್ ವೆಂಕಟೇಶ್ ಸ್ಟುಡಿಯೋ ಈಗ ಬಿಝಿಯಾಗಿದ್ದು ಬಹಳಷ್ಟು ನಿರ್ಮಾಪಕರಿಗೆ ಅನುಕೂಲ ಮಾಡಿಕೊಡುತ್ತಿದೆಯoತೆ.

Share This With Your Friends

Related posts