Cinisuddi Fresh Cini News 

ಕಪಾಲಿ ಮೋಹನ್ ಸಾವಿಗೆ ಕಾರಣವೇನು…?

ಚಿತ್ರೋದ್ಯಮದ ಬಹಳಷ್ಟು ಮಂದಿಯ ನಿಕಟ ಸಂಪರ್ಕ ಹೊಂದಿದ್ದ ಉದ್ಯಮಿ ಹಾಗೂ ನಿರ್ಮಾಪಕ ಕಪಾಲಿ ಮೋಹನ್ ನೇಣಿಗೆ ಶರಣಾಗಿದ್ದಾರೆ. ನಗರದ ಪೀಣ್ಯ ಬಳಿ ಇರುವ ಬಸವೇಶ್ವರ ಬಸ್ ಸ್ಟ್ಯಾಂಡ್ ಬಳಿ ಇರುವ ಸುಪ್ರೀಂ ಹೋಟೆಲ್ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಲವಾರು ಸಿನಿಮಾಗಳೊಂದಿಗೆ ಹಣದ ವ್ಯವಹಾರ ಕೂಡ ನಡೆಸಿದ್ದಾರೆ ಎಂಬ ಮಾತು ಕೇಳಿಬಂದಿದ್ದು , ಮೋಹನ್ ಅವರ ಮನೆ ಮೇಲೆ ಐಟಿ ರೇಡ್ ಕೂಡ ನಡೆದಿತ್ತು , ಇದರಿಂದ ಸ್ವಲ್ಪ ಕಂಗಾಲಾಗಿದ್ದರೂ ತದನಂತರ ಚೇತರಿಸಿಕೊಂಡ ಎಂಬ ಮಾತು ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಮೋಹನ್ ರವರು ಪುತ್ರಿಯ ವಿವಾಹ ಮಹೋತ್ಸವ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದರು.

ಚಿತ್ರೋದ್ಯಮ ಹಾಗೂ ರಾಜಕೀಯ ವಲಯದ ಹಲವಾರು ಮಂದಿಗಳ ನಿಕಟ ಸಂಪರ್ಕ ಹೊಂದಿದ್ದ ಮೋಹನ್ ಡಾ ರಾಜ್ ಕುಮಾರ್ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದವರು. ಅಣ್ಣಾವ್ರ ಕುಟುಂಬದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮೋಹನ್ ಆತ್ಮೀಯತೆಯಿಂದ ಅವರೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

ಕಪಾಲಿ ಮೋಹನ್ ಎಂದೇ ಗುರುತಿಸಿಕೊಂಡಿದ್ದ ಇವರ ಸಾವು ಯಾವ ಕಾರಣಕ್ಕೆ ನಡೆದಿದೆ ಎಂಬ ಗೊಂದಲವಿದ್ದು , ಪೊಲೀಸರು ತನಿಖೆ ಮಾಡಲು ಮುಂದಾಗಿದ್ದಾರೆ.

Share This With Your Friends

Related posts