Bollywood Cinisuddi Fresh Cini News 

ತಾಯಿಯಾಗುತ್ತಿದ್ದಾಳೆ ಕಂಗನಾ..!!

ಬಾಲಿವುಡ್‍ನ ಕ್ವೀನ್ ಎಂದೇ ಬಿಂಬಿಸಿಕೊಂಡಿರುವ ನಟಿ ಕಂಗನಾ ರನಾವತ್ ತಾಯಿಯಾಗಲು ಹೊರಟಿದ್ದಾಳೆ…! ಈ ವಿಷಯ ಓದಿದಾಗಲೇ ಅರೆ… ಕಂಗನಾಗೆ ಯಾವಾಗ ಮದುವೆಯಾಯ್ತು ಎಂಬ ಪ್ರಶ್ನೆ ಏಳುವುದು ಸಹಜವೇ..,.! ಆದರೆ ಕಂಗನಾ ತಾಯಿಯಾಗುತ್ತಿರುವುದು ರಿಯಲ್ ಲೈಫ್‍ನಲ್ಲಿ ಬದಲಿಗೆ ರೀಲ್ ಲೈಫ್‍ನಲ್ಲಲ್ಲ.

ಕ್ವೀನ್ ಚಿತ್ರದಲ್ಲಿ ತನ್ನ ನೈಜ ಅಭಿನಯದಿಂದ ಸ್ಟಾರ್ ಹೀರೋಗಳಿರುವಂತೆ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿಕೊಂಡಿರುವ ಕಂಗನಾ, ತಾನು ನಟಿಸುವ ಪ್ರತಿ ಚಿತ್ರದ ಪಾತ್ರವು ವೈವಿಧ್ಯಮಯದಿಂದ ಕೂಡಿರಬೇಕೆಂದು ಬಯಸುತ್ತಾರೆ, ಅದಕ್ಕೆ ಸಾಕ್ಷಿ ಎಂಬಂತೆ ಮೆಂಟಲ್ ಹೈ ಕ್ಯಾ, ರಂಗೂನ್, ಮಣಿಕರ್ಣಿಕಾ ಚಿತ್ರಗಳಿವೆ.

ಮಣಿಕರ್ಣಿಕಾ ಚಿತ್ರವನ್ನು ಸ್ವತಃ ತಾನೇ ನಿರ್ದೇಶಿಸಿದ್ದ ಕಂಗನಾ, ಅದರಲ್ಲಿ ವೀರವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿಯಾಗಿ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡುವಾಗಲೂ ತಾಯಿ ಮಮತೆಯನ್ನು ಮೆರೆದಿದ್ದ ರೀತಿ ಎಲ್ಲರನ್ನು ಮಂತ್ರಮುಗ್ಧಗೊಳಿಸಿತ್ತು.

ಕಂಗನಾ ಈಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಾಧಾರಿತ ತಲೈವಿ ಚಿತ್ರದಲ್ಲಿ ನಟಿಸುತ್ತಿದ್ದು ಅದರ ಫಸ್ ಲುಕ್‍ನಲ್ಲಿ ಕಂಗನಾ ಜಯಲಲಿತಾರನ್ನೇ ಹೋಲುತ್ತಾರೆ ಈ ಪಾತ್ರಕ್ಕೆ ಇವರೇ ಸೂಕ್ತ ಎಂಬ ಅಭಿಪ್ರಾಯಗಳು ಹೊಮ್ಮಿಬಂದಿದೆ.

ಈ ನಡುವೆ ಕಂಗನಾ ಪಂಗ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಇಲ್ಲೂ ಅವರು ನಿರ್ವಹಿಸುತ್ತಿರುವುದು ಅಮ್ಮನ ಪಾತ್ರವೇ.  ಸ್ಟಾರ್ ನಟಿಯರು ತಾಯಿಯ ಪಾತ್ರದಲ್ಲಿ ನಟಿಸಲು ಹಿಂದೇಟು ಹಾಕುತ್ತಿರುವಾಗ ಕಂಗನಾ ಅಮ್ಮನ ಪಾತ್ರದಲ್ಲಿ ನಟಿಸಲು ಹಿಂದೇಟು ಹಾಕದಿರುವುದು ಅವರು ಅಭಿನಯಕ್ಕೆ ನೀಡುವ ಮಾನ್ಯತೆಯನ್ನು ತೋರಿಸುತ್ತದೆ.

ಪಂಗ ಚಿತ್ರವನ್ನು ಅಶ್ವಿನಿ ಅಯ್ಯರ್ ನಿರ್ದೇಶಿಸುತ್ತಿದ್ದು, ಇದರ ಫಸ್ಟ್ ಲುಕ್‍ಅನ್ನು ನೋಡಿದ ಕಂಗನಾಳ ಸಹೋದರಿ ರಂಗೋಲಿ ಈ ಫೋಟೋವನ್ನು ನೋಡುತ್ತಿದ್ದರೆ ಅಕ್ಕನಲ್ಲಿ ನನಗೆ ನಮ್ಮ ಅಮ್ಮನೇ ಕಾಣಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಕಂಗನಾಳ ತಾಯಿ ಗೆಟಪ್ ಇನ್ನೇನು ಮೋಡಿ ಮಾಡುತ್ತದೆಯೋ ಚಿತ್ರ ಬಿಡುಗಡೆಯಾದ ನಂತರವೇ ತಿಳಿಯಬೇಕು.

Share This With Your Friends

Related posts