Cinisuddi Fresh Cini News 

ಈ ವಾರದ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ ತಮಿಳಿನ ”ಕಾಂಚನ-3”

ವೇದಾಲಂ, ವಿಶ್ವಾಸಂ ಎಂಬ ತಮಿಳು ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಿರುವ ಬೆನ್ನ ಹಿಂದೆಯೇ ರಾಘವ ಲಾರೆನ್ಸ್ ನಟಿಸುತ್ತಿರುವ ಕಾಂಚನಾ 3 ಚಿತ್ರವು ಕೂಡ ಕನ್ನಡಕ್ಕೆ ಡಬ್ಬಿಂಗ್ ಆಗಿದ್ದು ಈ ವಾರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ.
ರಾಘವ ಲಾರೆನ್ಸ್ ನಟಿಸಿದ್ದ ಕಾಂಚನಾ 2 ಸ್ವೀಕೆನ್ಸ್ ಚಿತ್ರಗಳು ಕನ್ನಡದಲ್ಲಿ ಕಲ್ಪನಾ ಹಾಗೂ ಕಲ್ಪನಾ 2 ಚಿತ್ರದಲ್ಲಿ ರೀಮೇಕ್ ಆಗಿತ್ತಾದರೂ ಈಗ ಕಾಂಚನಾ 3 ಚಿತ್ರವು ನೇರವಾಗಿಯೇ ಕನ್ನಡಕ್ಕೆ ಡಬ್ಬಿಂಗ್ ಆಗಿರುವುದರಿಂದ ತಮಿಳರ ಬಾಯಲ್ಲಿ ಕನ್ನಡವನ್ನು ಕೇಳುವ ಅವಕಾಶ ನಮ್ಮ ನಾಡಿನ ಪ್ರೇಕ್ಷಕರಿಗೆ ಲಭಿಸಿದೆ. ಇದೆಲ್ಲ ಡಬ್ಬಿಂಗ್ ಹೋರಾಟಗಾರರ ಶ್ರಮದ ಫಲ.

ಶಿವರಾಜ್‍ಕುಮಾರ್ ನಟಿಸಿದ್ದ ಅಸುರ ಚಿತ್ರದ ಗೀತೆಯೊಂದರಲ್ಲಿ ಸ್ಟೆಪ್ಸ್ ಹಾಕಿದ್ದ ರಾಘವಲಾರೆನ್ಸ್ ಈಗ ಕಾಂಚನಾ 3 ಚಿತ್ರದ ಮೂಲಕ ನಾಯಕನಾಗಿಯೂ ಎಂಟ್ರಿ ಕೊಟ್ಟಿದ್ದಾರೆ.

ಕೋರಿಯೋಗ್ರಾಫರ್, ನಟ, ನಿರ್ದೇಶಕ, ನಿರ್ಮಾಪಕರಾಗಿರುವ ರಾಘವ ಲಾರೆನ್ಸ್ ಅವರೇ ಕಾಂಚನಾ 3 ಚಿತ್ರಕ್ಕೆ ಬಂಡವಾಳ ಹೂಡಿರುವುದರ ಜೊತೆಗೆ ನಟನಾಗಿಯೂ ಮಿಂಚಿದ್ದಾರೆ. ರಾಘವ ಲಾರೆನ್ಸ್ ಒಡೆತನದ ಲಾರೆನ್ಸ್ ಚಾರಿಟಬಲ್ ಟ್ರಸ್ಟ್ ಸದ್ಯ ಚೆನ್ನೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ಅಸಹಾಯಕರಿಗೆ ಅವಶ್ಯಕತೆ ಉಳ್ಳವರಿಗೆ ಸಹಾಯ ಮಾಡುತ್ತಾ ಬಂದಿದೆ.

ಏಪ್ರಿಲ್ 19 ರಂದು ತಮಿಳು ಹಾಗೂ 26 ರಂದು ತೆಲುಗು ಭಾಷೆಯಲ್ಲಿ ಕಾಂಚನ 3 ಸಿನಿಮಾವು ದೇಶಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುವ ಮೂಲಕ 40 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸುದ್ದಿಯಾಗಿತ್ತು. ಈ ಚಿತ್ರಕ್ಕೆ ಜೆಸ್ಸಿ ಸ್ಯಾಮ್ಯುಯೆಲ್ ಅವರ ಸಂಗೀತ ಸಂಯೋಜನೆ, ವೆಟ್ರಿ ಅವರ ಛಾಯಾಗ್ರಹಣ ಹಾಗೂ ರುಬಿನ್ ಅವರ ಸಂಕಲನವಿದೆ.

ಕನ್ನಡಕ್ಕೆ ಡಬ್ಬಿಂಗ್ ಆಗಿರುವ ಕಾಂಚನಾ 3 ಚಿತ್ರದ ರೀಮೇಕ್ ಹಕ್ಕನ್ನು ಜಾಕ್ ಮಂಜು ಹಾಗು ಯೋಗಿ ದ್ವಾರಕೀಶ್ ಅವರು ಪಡೆದಿದ್ದಾರೆ. ತಮಿಳು, ತೆಲುಗು ಸಿನಿಮಾದ ವಿತರಣೆಯನ್ನು ಕೂಡ ಇವರೇ ಪಡೆದಿದ್ದರು.

ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಕಾಂಚನಾ 3 ಚಿತ್ರವನ್ನು ಪ್ರಮೋಟ್ ಮಾಡುವ ದೃಷ್ಟಿಯಿಂದ ಮೊನ್ನೆ ಹಮ್ಮಿಕೊಂಡಿದ್ದ ಕಾರ್ಯಾಕ್ರಮಕ್ಕೆ ನಿರ್ಮಾಪಕ ರಾಘವ ಲಾರೆನ್ಸ್, ನಟಿಯರಾದ ವೇದಿಕಾ, ನಿಕ್ಕಿ ತಂಬೋಳಿ ಹಾಗೂ ಚಿತ್ರತಂಡ ಬೆಂಗಳೂರಿಗೆ ಬಂದಿದ್ದರು. ಅಶ್ವಿನಿ ಆಡಿಯೋ ಸಂಸ್ಥೆ ಕಾಂಚನ-3 ಚಿತ್ರದ ಧ್ವನಿಸುರುಳಿಯನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಕನ್ನಡ ವರ್ಷನ್‍ಗೆ ಸೆನ್ಸಾರ್ ಬೋರ್ಡ್ ಪ್ರಮಾಣ ಪತ್ರ ನೀಡಿದ್ದು, ಏಪ್ರಿಲ್ 26ರಂದು ಕಾಂಚನ 3 ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Share This With Your Friends

Related posts