‘ಕಾಣದಂತೆ ಮಾಯವಾದನು’ ಥಿಯೇಟರ್ ಗೆ ರೀಎಂಟ್ರಿ
ಕೆಲವು ಚಿತ್ರಗಳು ವಿಮರ್ಶಕರು ಹಾಗೂ ಪ್ರೇಕ್ಷಕರ ಮೆಚ್ಚುಗೆ ಪಡೆದರೂ ಕೂಡ ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡದ ಕಾರಣಕ್ಕೋ ಏನೋ ಸೋತು ಸೊರಗುತ್ತವೆ, ಅದೇ ಚಿತ್ರವನ್ನು ಮತ್ತೆ ರಿಲೀಸ್ ಮಾಡಿದರೆ ಸಕ್ಸಸ್ ಕಾಣುತ್ತದೆ, ಚಾಲೆಂಜಿಂಗ್ಸ್ಟಾರ್ ದರ್ಶನ್ರ ಕರಿಯ ಚಿತ್ರದಲ್ಲಿ ಆದದ್ದೂ ಅದೇ. ಈ ಪ್ರಯೋಗಗಳನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಹಲವು ಬಾರಿ ಮಾಡಿ ಗೆದ್ದಿದ್ದಾರೆ, ಈಗ ಅದೇ ಪ್ರಯೋಗಕ್ಕೆ ಹೊರಟಿರುವುದು ಕಾಣದಂತೆ ಮಾಯವಾದನು ಚಿತ್ರತಂಡ.
ಮೊನ್ನೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಾಯಕ ವಿಕಾಸ್, ನಮ್ಮ ಕಾಣದಂತೆ ಮಾಯವಾದನು ಚಿತ್ರವು ಹೆಸರಿಗೆ ತಕ್ಕಂತೆ ಆಗಿದೆ ಎಂಬ ಬೇಸರವಿದೆ, ಆದರೆ ಪತ್ರಿಕಾ ಮಿತ್ರರು ಹಾಗೂ ಪ್ರೇಕ್ಷಕರು ಉತ್ತಮ ರೆಸ್ಪಾನ್ಸ್ ನೀಡಿದ್ದರಾದರೂ ಚಿತ್ರವು ಪ್ರೇಕ್ಷಕರಿಗೆ ಮುಟ್ಟುವಷ್ಟರಲ್ಲೇ ಚಿತ್ರಮಂದಿರಗಳಿಂದ ಹಾಗೂ ಮಲ್ಟಿಫ್ಲೆಕ್ಸ್ಗಳಿಂದ ಬಲವಂತವಾಗಿ ತೆಗೆದು ಹಾಕಿದರು ಎಂದು ಬೇಸರವ್ಯಕ್ತಪಡಿಸಿದರು.
ಜೊತೆಗೆ ಬುಕ್ಮೈಶೋನಿಂದಲೂ ನಮ್ಮ ಚಿತ್ರಕ್ಕೆ ಅನ್ಯಾಯವಾಗಿದೆ. ಅದು ದೊಡ್ಡು ಕೊಡುವವರಿಗೆ ಮಾತ್ರ ಉತ್ತಮ ಅಂಕ ಕೊಡುತ್ತದೆ ಅದನ್ನು ನೋಡಿಕೊಂಡು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದರಿಂದ ಒಳ್ಳೆ ಚಿತ್ರ ನಿರ್ಮಿಸಿದ ನಿರ್ಮಾಪಕರಿಗೆ ಅನ್ಯಾಯವಾಗುತ್ತಿದೆ. ಆರು ವರ್ಷ ಇದೇ ಸಿನಿಮಾಕ್ಕೆ ಸಮಯ ಮೀಸಲಿಡಲಾಗಿದೆ.ಒಳ್ಳೆ ಚಿತ್ರ ಮಾಡಿಕೆಟ್ಟ ಹೆಸರು ಬಂತು.ದುಡ್ಡುಕೊಡ್ತೀವಿ ಅಂದರೂಟಾಕೀಸ್ಕೊಡುತ್ತಿಲ್ಲ.
ಯಾರು ಹೇಳದ ಆತ್ಮದ ದೇಸಿ ಕತೆಗೆ ಕಾಮಿಡಿ, ಭಾವನೆಗಳನ್ನು ಬೆರೆಸಿ ಕಾಣದಂತೆ ಮಾಯವಾದನು ಚಿತ್ರವನ್ನು ಮಾಡಿದ್ದೆವು, ಆದರೆ ಆ ಚಿತ್ರವನ್ನು ಖರೀದಿಸಲು ಅಮೆಜಾನ್, ವಾಹಿನಿಗಳು ಮುಂದೆ ಬರದಿರುವುದರಿಂದ ನಿರ್ಮಾಪಕರು ಮುಳುಗುವ ಸ್ಥಿತಿಗೆ ಬಂದಿದ್ದಾರೆ.
ನಾನು ಈ ಹಿಂದೆ ನಂದಿ ಚಿತ್ರದಿಂದ ಬೆಳ್ಳಿಪರದೆಗೆ ಬಂದು, ಜಯಮ್ಮನ ಮಗ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿ, ಪವರ್ಸ್ಟಾರ್ ಪುನೀತ್ರಾಜ್ಕುಮಾರ್ರ ದೊಡ್ಮನೆ ಹುಡ್ಗ ಚಿತ್ರಕ್ಕೆ ಕತೆ ಒದಗಿಸಿ ಕಾಣದಂತೆ ಮಾಯವಾದೆನು ಚಿತ್ರದ ಮೂಲಕ ನಾಯಕನಟನಾದೆ ಆದರೆ ಈ ಚಿತ್ರ ಸೋತಿದ್ದು ಈಗ ಮತ್ತೆ ಸರಿಯಾದ ಸಮಯವನ್ನು ನೋಡಿಕೊಂಡು ಬಿಡುಗಡೆ ಮಾಡುತ್ತೇವೆ ಎಂದು ತಮ್ಮ ನೋವನ್ನು ಹಂಚಿಕೊಂಡರು ವಿಕಾಸ್.
ಧರ್ಮಣ್ಣ, ನಂದಕುಮಾರ್ ಹಾಜರಿದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮತ್ತೆ ರಿಲೀಸ್ ಆಗಲಿರುವ ಕಾಣದಂತೆ ಮಾಯವಾದನು ಚಿತ್ರವು ಸಕ್ಸಸ್ ಹಾದಿಯಲ್ಲಿ ಸಾಗಿ ವಿಕಾಸ್ಗೆ ಹೆಸರುತಂದುಕೊಡುವಂತಾಗಲಿ.