Cinisuddi Fresh Cini News 

ಸಿನಿಮಾ ಎನ್ನುವುದು ಬ್ಯುಟಿಫುಲ್ ಪ್ರೊಫೆಶನ್ ಎಂದ ಸುದೀಪ್

ಸಾರಂಗ, ನಟನೆ ಎರಡನ್ನು ನಾವುಗಳೇ ಅಭಿವೃದ್ದಿಪಡಿಸಿಕೊಳ್ಳ ಬೇಕಾಗುತ್ತದೆಂದು ಸುದೀಪ್ ಅಭಿಪ್ರಾಯಪಟ್ಟರು. ಅವರು ಹೀಗೆ ಹೇಳಲು ‘ಕಲಾವಿಧ ಫಿಲಂ ಅಕಾಡಮಿ’ ವೇದಿಕೆ ಕಾರಣವಾಗಿತ್ತು. ನಟ,ಪತ್ರಕರ್ತ, ನಿರೂಪಕರಾಗಿರುವ ಯತಿರಾಜ್ ಮತ್ತು ರಂಗಿತರಂಗ ಖ್ಯಾತಿಯ ಅರವಿಂದ್ ಸಾರಥ್ಯದಲ್ಲಿ ತರಭೇತಿ ಸಂಸ್ಥೆಯು ಆರಂಭಗೊಂಡಿದೆ.

ಇದರಲ್ಲಿ ನಟನೆ, ನಿರ್ದೇಶನ, ನಿರೂಪಣೆ, ಸಂಕಲನ ಮತ್ತು ಯೋಗ ತರಭೇತಿ ಹಾಗೂ ವಾರಾಂತ್ಯದಲ್ಲಿ ಮಕ್ಕಳಿಗಾಗಿ ಅಭಿನಯ, ನೃತ್ಯ ತರಗತಿಗಳು ನಡೆಯಲಿದೆ. ಸದರಿ ಅಕಾಡೆಮಿಯು ಬಸವೇಶ್ವರನಗರದಲ್ಲಿ ಪ್ರಾರಂಭಗೊಂಡಿದೆ. ನುರಿತ ನಿರ್ದೇಶಕರು, ಸಂಕಲನಕಾರ, ನೃತ್ಯಪಟು ಉಪನ್ಯಾಸಕರಾಗಿ ಸೇವೆ ಸಲ್ಲಿಸಲಿದ್ದಾರೆ. ಸದರಿ ಸಂಸ್ಥೆಯನ್ನು ಉದ್ಘಾಟಿಸಿ ಸುದೀಪ್ ಮಾತನಾಡಿದರು.

ಶಿಸ್ತು ಎನ್ನುವುದು ಒಂದಕ್ಕೆ ಸೀಮಿತವಾಗಿಲ್ಲ. ತರಬೇತಿ ಶಾಲೆಯಲ್ಲ್ಲಿ ಕಲಿತವರಲ್ಲ ನಟರಾಗುವುದಿಲ್ಲ. ಅಂತಹವರಿಗೆ ಇಂತಹ ಸಂಸ್ಥೆಯು ಉಪಯೋಗವಾಗಲಿದೆ. ಇಲ್ಲಿರುವ ದಿಗ್ಗಜರ ಫೋಟೋದಲ್ಲಿರುವ ಚಿತ್ರಗಳನ್ನು ನೋಡಿಕೊಂಡೆ ನಾವುಗಳು ಅಭಿನಯವನ್ನು ಕಲಿತಿದ್ದೇವೆ. ಕಲೆಯನ್ನು ಪ್ರೀತಿಸಿದರೆ, ಅದು ನಮ್ಮನ್ನು ಪ್ರೀತಿಸುತ್ತದೆ.

ಅದಕ್ಕಾಗಿ ಮೊದಲು ಪ್ರೀತಿಸುವುದನ್ನು ಕಲಿಯಿರಿ. ಸಿನಿಮಾ ಹೊಟ್ಟೆ ತುಂಬಿಸುತ್ತದೆ. ಯತಿರಾಜ್-ಅರವಿಂದ್ ಬಹಳ ಕಾಲದಿಂದ ಪರಿಚಿತರು. ಒಬ್ಬರು ಮಾತನಾಡುವುದಿಲ್ಲ. ಮತ್ತೋಬ್ಬರು ಶುರು ಮಾಡಿದರೆ ನಿಲ್ಲಿಸುವುದಿಲ್ಲ. ಚಿತ್ರರಂಗದಲ್ಲಿ ಪ್ರತಿ ದಿನವೂ ಹೊಸ ಜಾಗ, ಮುಖ, ಚಿತ್ರಕತೆ, ದೃಶ್ಯ, ಹೊಸತನಗಳನ್ನು ನೋಡುತ್ತೇವೆ.

ಇಂತಹ ಸುಂದರ ಪ್ರಪಂಚಕ್ಕೆ ಬರುವಾಗ ಮುಗ್ದತೆಯಲ್ಲಿ ಇದ್ದುಕೊಂಡು, ಅದೇ ಮುಗ್ದತೆಯನ್ನು ಉಳಿಸಿಕೊಳ್ಳುವುದು ಸೂಕ್ತ. ನಮ್ಮ ದಾರಿ ಎಲ್ಲಿಗೆ ಕರೆದುಕೊಂಡು ಹೋಗುತ್ತದೆಂದು ಗೊತ್ತಿರೋಲ್ಲ. ನನ್ನಲ್ಲೂ ನ್ಯೂನತೆಗಳು ಇದೆ. ಉದ್ಯಮದಲ್ಲಿ ಚೆನ್ನಾಗಿ ಗುರುತಿಸಿಕೊಂಡವರು ಮುಂದೆ ನಟನೆ, ನಿರ್ದೇಶನ, ಚಿತ್ರಕತೆ, ಇನ್ನು ಮುಂತಾದವರುಗಳಿಂದ ಗೌರವ ಸಿಗುತ್ತದೆಂದು ಭವಿಷ್ಯದ ಕಲಾವಿದ, ತಂತ್ರಜ್ಘರಿಗೆ ಕಿವಿಮಾತನ್ನು ಹೆಬ್ಬುಲಿ ಹೇಳಿದರು.

ಹೆಸರಿನಲ್ಲಿ ಕಂಪನ ಇದೆ. ಈಗಿನವರು ಗ್ಲಾಮರ್ ತುಂಬ ಇಷ್ಟಪಡುತ್ತಾರೆ. ಅಂತಹವರಿಗೆ ಇಂತಹ ಶಾಲೆಗಳು ಅವಶ್ಯಕವಾಗಿದೆ. ಕಲಾವಿದ ಚಾಕು ಇದ್ದಂತೆ. ಇದರಲ್ಲಿ ಹಣ್ಣು, ತರಕಾರಿ, ಕೆಟ್ಟ ಕೆಲಸಕ್ಕೂ ಉಪಯೋಗಿಸಬಹುದು. ಚಿತ್ರಮಂದಿರದಲ್ಲಿ ಲೈಟ್ ಆಫ್ ಆದಾಗ ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಕರೆಂಟ್ ಬಂದಾಗ ಬಿಳಿ ಪರದೆ ಕಾಣಿಸುತ್ತದೆ.

ಅದೇ ರೀತಿ ಸಿನಿಮಾ ಬದುಕು ಆಗಿದೆ. ನೀವುಗಳು ಇದನ್ನು ಅರ್ಥ ಮಾಡಿಕೊಂಡಲ್ಲಿ, ಮುಂದಿನ ಜೀವನ ಉಜ್ವಲವಾಗುತ್ತದೆ. ಕಲೆಯೇ ಜೀವ, ಕಲೆಯೇ ದೈವ ಎಂದು ಹಿರಿಯರು ಹೇಳಿದ್ದಾರೆಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ತಿಳಿಸಿದರು.

ಇದೇ ಸಂದರ್ಭದಲ್ಲಿ ಯತಿರಾಜ್ ಶಾಲೆ ತೆರೆದ ಬಗ್ಗೆ ನೆನಪುಗಳನ್ನು ಬಿಚ್ಚಿಡುತ್ತಾ ಹಿರಿಯ ಪತ್ರಕರ್ತ ಕೆ.ಎಸ್.ವಾಸು ಸಲಹೆ ಮೇರೆಗೆ ಇಲ್ಲಿವರೆಗೂ ತಂದು ನಿಲ್ಲಿಸಿದೆ ಎಂದು ಲಾಂಛನದಲ್ಲಿರುವ ಚಿತ್ರಕ್ಕೆ ವಿವರಣೆ ನೀಡಿದರು.

ಜಾಕ್‍ಮಂಜು ಸಂಸ್ಥೆಯ ಯುಟ್ಯೂಬ್ ಬಿಡುಗಡೆ ಮಾಡಿದರೆ, ವೆಬ್‍ಸೈಟ್‍ನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು. ಮೊದಲ ನಾಲ್ಕು ವಿದ್ಯಾರ್ಥಿಗಳಿಗೆ ಸುದೀಪ್ ಬಣ್ಣ ಹಚ್ಚುವ ಮೂಲಕ ‘ಕಲಾವಿಧ ಫಿಲಂ ಅಕಾಡಮಿ’ಗೆ ಚಾಲನೆ ನೀಡಿದರು.

Related posts