Bollywood Cini Gossips Cinisuddi Fresh Cini News 

ಕಳಂಕ್ ಚಿತ್ರದ ಸೋಲಿಗೆ ಕಾರಣವೇನು..?

ಈ ವರ್ಷದ ಬಹುನಿರೀಕ್ಷಿತ, ಅದ್ದೂರಿ ವೆಚ್ಚದ ಹಾಗೂ ಬಹು ತಾರಾಗಣದ ಐತಿಹಾಸಿಕ ಸಿನಿಮಾ ಕಳಂಕ್ ಬಾಕ್ಸ್ ಆಫೀಸ್‍ನಲ್ಲಿ ಸೋತಿದೆ. ಏಪ್ರಿಲ್ 17ರಂದು ದೇಶಾದ್ಯಂತ ತೆರೆಕಂಡ ಕಳಂಕ್ ಬಗ್ಗೆ ಚಿತ್ರರಸಿಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ. ಗಲ್ಲಾ ಪೆಟ್ಟಿಗೆಯಲ್ಲಿ ಸಿನಿಮಾ ಗೋತಾ ಆಗಿದೆ.

ಅಭಿಷೇಕ್ ವರ್ಮನ್ ನಿರ್ದೇಶನದ ಕರಣ್ ಜೋಹರ್ ನಿರ್ಮಾಣದ ಕಳಂಕ್‍ನಲ್ಲಿ ಬಾಲಿವುಡ್ ಸೂಪರ್‍ಸ್ಟಾರ್‍ಗಳು ನಟಿಸಿದ್ದರು. ವರುಣ್ ಧವನ್, ಅಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್, ಮಾಧುರಿ ದೀಕ್ಷಿತ್, ಸಂಜಯ್ ದತ್, ಕುನಾಲ್ ಕೇಮೂ ಪ್ರಮುಖ ಪಾತ್ರದಲ್ಲಿದ್ದರೂ.

ಬಿಡುಗಡೆಯಾದ ಮೊದಲ ಮೂರು ದಿನ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು.ಆದರೆ ನಂತರ ಪ್ರೇಕ್ಷಕ ಪ್ರಭುಗಳು ಥಿಯೇಟರ್‍ಗಳತ್ತ ಸುಳಿಯಲಿಲ್ಲ. ಬಾಕ್ಸ್ ಆಫೀಸ್‍ನಲ್ಲಂತೂ ಕಳಂಕ್ ಮಕಾಡೆ ಮಲಗಿತು.

ಈ ಚಿತ್ರದ ವೈಫಲ್ಯದ ಬಗ್ಗೆ ಕಳಂಕ್ ಸಿನಿಮಾದ ರೂಪ್ ಪಾತ್ರಧಾರಿ ಅಲಿಯಾ ಭಟ್ ಮಾತನಾಡಿದ್ದಾಳೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿರುವುದನ್ನು ಅಲಿಯಾ ಒಪ್ಪಿಕೊಂಡಿದ್ದಾಳೆ.ಎಲ್ಲ ಚಿತ್ರಗಳಂತೆ ಕಳಂಕ್ ಚಿತ್ರದ ಹಣೆಬರಹವೂ ಪ್ರೇಕ್ಷಕರ ಕೈಯಲ್ಲಿದೆ. ಆಡಿಯನ್ಸ್‍ಗೆ ಸಿನಿಮಾ ಇಷ್ಟವಾಗದಿದ್ದರೆ ಅದು ಖಂಡಿತಾ ಸೋಲುತ್ತದೆ.

ಬಹುಶ: ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗಿಲ್ಲ. ಆದರೂ ನಾನು ಚಿತ್ರವನ್ನು ವಿಮರ್ಶೆ ಅಥವಾ ವಿಶ್ಲೇಷಣೆ ಮಾಡುವುದಿಲ್ಲ. ಸಿನಿಮಾದ ನಿರ್ಮಾಪಕರು ಇದನ್ನು ಸ್ವೀಕರಿಸಬೇಕು. ಸಿನಿಮಾ ರಂಗದಲ್ಲಿ ಏಳು-ಬೀಳು ಸಾಮಾನ್ಯ.

ಅದೇ ರೀತಿ ಚಿತ್ರಗಳ ಸೋಲು-ಗೆಲುವು ಕೂಡ. ಪ್ರೇಕ್ಷಕರ ತೀರ್ಪನ್ನು ನಾವೆಲ್ಲರೂ ಸ್ವೀಕರಿಸಬೇಕಾಗುತ್ತದೆ ಎನ್ನುತ್ತಾಳೆ ಅಲಿಯಾ.ರಾಝಿ ಸೂಪರ್‍ಹಿಟ್ ನಂತರ ಕಳಂಕ್‍ನಲ್ಲೂ ಅಲಿಯಾ ಗೆಲ್ಲುತ್ತಾಳೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಆದಾಗ್ಯೂ ಎಬಿ ಕೈಯಲ್ಲಿ ತುಂಬಾ ಪ್ರಾಜೆಕ್ಟ್‍ಗಳಿವೆ. ಬ್ರಹ್ಮಾಸ್ತ್ರ, ಸಡಕ್-2, ಆರ್‍ಆರ್‍ಆರ್, ಇನ್ಸ್‍ಅಲ್ಲಾ ಮತ್ತು ತಖ್ತ್: ಸಿನಿಮಾಗಳಲ್ಲಿ ಅಲಿಯಾ ಬ್ಯುಸಿ.

Share This With Your Friends

Related posts