Cinisuddi Fresh Cini News 

ತೆರೆಗೆ ಬರಲು ಸಜ್ಜಾಗಿದೆ ಸಸ್ಪೆನ್ಸ್ , ಥ್ರಿಲ್ಲರ್ ‘ಖನನ’

ಯುವ ಪಡೆಗಳು ಸೇರಿಕೊಂಡು ನಿರ್ಮಿಸಿರುವಂತ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ ಖನನ. ಈ ಚಿತ್ರದ ಟ್ರೈಲರ್ ವೀಕ್ಷಿಸಿದ ಅರ್ಜುನ್ ಜನ್ಯ ಚಿತ್ರ ತಂಡದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಎಸ್. ನಲಿಗೆ ಪ್ರೊಡಕ್ಷನ್ಸ್ ನಡಿ ಬಿ.ಶ್ರೀನಿವಾಸ್‍ರಾವ್ ನಿರ್ಮಿಸರುವ ಈ ಚಿತ್ರಕ್ಕೆ ಯುವ ನಿರ್ದೇಶಕ ರಾಧಾ ಸಾರಥ್ಯ ವಹಿಸಿದ್ದಾರೆ.

ರಮೇಶ್ ತರುಪತಿ ಛಾಯಾಗ್ರಹಣ, ಕುನ್ನಿಗುಡಿ ಸಂಗೀತ, ನಲೀನ್ ಬಡೆ ಸಂಕಲನ ಚಿತ್ರಕ್ಕಿದೆ. ನಿರ್ಮಾಪಕರ ಸುಪುತ್ರ ಆರ್ಯವರ್ಧನ್ ಈ ಚಿತ್ರದಲ್ಲಿ ನಾಯಕನಾಗಿ ಮಿಂಚಲು ಸಿದ್ಧರಾಗಿದ್ದಾರೆ.

ಇವರಿಗೆ ಜೋಡಿಯಾಗಿ ಅಸ್ಸಾಂನ ಕರಿಷ್ಮಾ ಬರುಹಾ ನಾಯಕಿಯಾಗಿ ನೆಗೆಟಿವ್ ರೋಲ್‍ನಲ್ಲಿ ಮನ ಸೆಳೆಯಲಿದ್ದಾರೆ. ಯುವಕಿಶೋರ್ ಖಳನಟನಾಗಿ ಮಿಂಚಿದ್ದರೆ, ನಾಯಿಗೂ ಕೂಡ ಪ್ರಮುಖ ಪಾತ್ರವಿದೆ.

ಇನ್ನು ಈ ಚಿತ್ರದಲ್ಲಿ ಅವಿನಾಶ್ ಒಬ್ಬ ದಕ್ಷ ಪೊಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡರೆ, ನಿರ್ದೇಶಕ ಓಂಪ್ರಕಾಶ್‍ರಾವ್ ಅವರು ಒಬ್ಬ ಡಾಕ್ಟರ್ ಗೆಟಪ್‍ನಲ್ಲಿ ರಂಜಿಸಲಿದ್ದಾರೆ.

ಉಳಿದಂತೆ ವಿನಯಾಪ್ರಸಾದ್, ಬಿ, ಶೀನಿವಾಸ್‍ರಾವ್, ಮೋಹನ್ ಜುನೇಜಾ, ಬ್ಯಾಂಕ್ ಜನಾರ್ಧನ್, ಹೊನ್ನವಳ್ಳಿ ಕೃಷ್ಣ , ಕೆಂಪೇಗೌಡ, ಮಹೇಶ್ ಸಿದ್ದು ಇತರರ ತಾರಾಗಣವಿದೆ.

ಸಂಸ್ಕೃದಲ್ಲಿ “ಖನನ” ಎಂದರೆ ಹೂತುಹಾಕಿರುವುದನ್ನು ಹೊರತೆಗೆ, ಅಗೆಯುವಿಕೆ, ಸಂಶೋಧಿಸು, ಶೋದಿಸು, ಅಸತ್ಯತೆಯಿಂದ ಸತ್ಯದೆಡೆಗೆ ಸಾಗಿಸು ಎಂಬ ಅರ್ಥಗಳನ್ನು ಕೊಡುತ್ತದೆ. ಬಹಳಷ್ಟು ನಿರೀಕ್ಷೆಯೊಂದಿಗೆ ಈ ಚಿತ್ರ ಬೆಳ್ಳಿಪರದೆ ಮೇಲೆ ಬರಲು ಸಜ್ಜಾಗಿದೆ.

Share This With Your Friends

Related posts