Cinisuddi Fresh Cini News 

ನವೆಂಬರ್ ತಿಂಗಳ ಮೊದಲ ವಾರದಲ್ಲಿ “ಕಡೆ ಮನೆ” ಚಿತ್ರ ಬಿಡುಗಡೆ

ಕೀರ್ತನ ಕ್ರಿಯೇಷನ್ಸ್ ಲಾಛನದಲ್ಲಿ ನಂದನ್.ಎಸ್. ತುಮಕೂರು ನಿರ್ಮಿಸುತ್ತಿರುವ “ಕಡೆ ಮನೆ” ಚಿತ್ರವು ಈಗಾಗಲೇ ಸೆನ್ಸಾರ್ ಮುಗಿದಿದ್ದು ಯು/ಎ ಸರ್ಟಿಫಿಕೇಟ್ ನೀಡಿದ್ದು, ಚಿತ್ರವನ್ನು ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಗ್ರಾಮೀಣ ಸೊಗಡಿನ ಕಾಮಿಡಿ ಲವ್ ಹಾಗೂ ಹಾರಾರ್ ಕಥಾನಕದೊಂದಿಗೆ ಪಡ್ಡೆ ಹುಡುಗರ ಅವಾಂತರ ಆಧುನಿಕತೆಯ ಸ್ಪರ್ಷದೊಂದಿಗೆ ಮನುಷ್ಯನ ಮಾನಸಿಕ ವೇದನೆಯ ತೊಳಲಾಟದಂತಹ ಕಥಾ ಹಂದರ ಹೊಂದಿದೆ.

ವಿನಯ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಮಧುಸೂದನ್ ಛಾಯಾಗ್ರಹಣ, ಗೌತಮ್ ಶ್ರೀವತ್ಸ ಸಂಗೀತ, ರಘುನಾಥ್ ಸಂಕಲನ, ಅರುಣ್ ಕುಮಾರ್ ನೃತ್ಯ ನಿರ್ದೇಶನ, ಅಶೋಕ್ ಸಾಹಸ, ಧನಂಜಯ ಹಾಗೂ ವಿಜಯ್ ಸಂಭಾಷಣೆ, ಲೋಕೇಶ್ ಸಾಹಿತ್ಯವಿದೆ.

ಯುವರಾಜ್, ಕಲ್ಪನ, ಬಾಲರಾಜ ವಾಡಿ, ಆಯಿಷ, ಬ್ಯಾಂಕ್ ಜನಾರ್ಧನ್. ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡರು, ಉಮೇಶ್, ಮಂಡ್ಯ ಸಿದ್ದು, ಮೀಸೆ ಆಂಜನಪ್ಪ, ವಿಜಯ್ ಇಂದ್ರಜಿತ, ಇನ್ನು ಮುಂತಾದವರ ತಾರಾ ಬಳಗವಿದೆ.

Related posts