Cinisuddi Fresh Cini News 

ಜನವರಿಯಲ್ಲಿ ‘ಕಡಲಮುತ್ತು’ ಚಿತ್ರಕ್ಕೆ ಚಾಲನೆ 

ಮಕರಜ್ಯೋತಿ ಫಿಲಂಸ್ ಲಾಂಛನದಲ್ಲಿ ಕಡಲಮುತ್ತು ಎಂಬ ಚಿತ್ರ ಜನವರಿ 15ರ ಸಂಕ್ರಾಂತಿಯ ನಂತರ ಆರಂಭವಾಗಲಿದೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ನೂತನ ಚಿತ್ರವನ್ನು ತಾರನಾಥ ಶೆಟ್ಟಿ ಬೋಳಾರ್ ನಿರ್ಮಾಣ ಮಾಡುತ್ತಿದ್ದಾರೆ.

ಈ ಹಿಂದೆ ಅವರು ನಿಶಬ್ದ 2 ಚಿತ್ರವನ್ನು ನಿರ್ಮಾಣ ಮಾಡಿದ್ದರು ಅದರ ಯಶಸ್ವಿ ಹಿಂದೆ ಮೂರು ವರ್ಷಗಳ ನಂತರ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ಈ ಚಿತ್ರದ ನಿರ್ದೇಶನ ಹಾಗೂ ನಾಯಕನ ಜವಾಬ್ದಾರಿಯನ್ನು ದೇವರಾಜ್ ಕುಮಾರ್ ಮಾಡಲಿದ್ದಾರೆ ಈ ಹಿಂದೆ ದೇವರಾಜ ಕುಮಾರ್ ಅವರು ಡೇಂಜರ್ ಜೋನ್ ಮತ್ತು ನಿಶಬ್ದ 2 ಹಾಗೂ ಅನುಷ್ಕಾ ನಿರ್ದೇಶನ ಮಾಡಿದ್ದು ಹಾಗೂ ಇತ್ತೀಚೆಗೆ ತಾಜ್ ಮಹಲ್ -2 ನಿರ್ದೇಶನದೊಂದಿಗೆ, ನಾಯಕನಟನಾಗೂ ಅಭಿನಯಿಸಿದ್ದಾರೆ.

ಕಡಲಮುತ್ತು ಚಿತ್ರದಲ್ಲೂ ನಾಯಕನಾಗಿ ಅಭಿನಯಿಸುತ್ತಿರುವ ದೇವರಾಜ್ ಕುಮಾರ್ ಅವರು‌ ನಿರ್ದೇಶನವನ್ನು ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಸಹ ದೇವರಾಜ್ ಕುಮಾರ್ ಅವರದೆ.

ದೇವರಾಜ್ ಕುಮಾರ್ ಅವರಿಗೆ ಹೊಸ ನಾಯಕಿಯಾಗಿ ನಟಿಸಲು‌ ನೂತನ ಪ್ರತಿಭೆ ಅನ್ವೇಷಣೆ ನಡೆಸಲಾಗುತ್ತಿದೆ. ಈ ಚಿತ್ರದ ಕಥಾವಸ್ತು ವಿಶೇಷವಾಗಿದ್ದು ಸಂಪೂರ್ಣ ಚಿತ್ರೀಕರಣ ಸಮುದ್ರ ದಂಡೆಯಲ್ಲಿ ನಡೆಯಲಿದೆ.

ವೀನಸ್ ಮೂರ್ತಿ ಛಾಯಾಗ್ರಹಣ,
ವಿಕ್ರಂ ಸೆಲ್ವ ಸಂಗೀತ ನಿರ್ದೇಶನ,
ರವೀಂದ್ರ ಮುದ್ದಿ ಸಾಹಿತ್ಯ,
ಚಂದ್ರು ಬಂಡೆ ಸಾಹಸ ನಿರ್ದೇಶನ, ವಿಜಯ್ ಸಂಕಲನ ಹಾಗೂ ಬಿ.ಧನಂಜಯ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
45 ದಿನಗಳ ಕಾಲ ಮಂಗಳೂರು ಕುಂದಾಪುರ, ಉಡುಪಿ, ಕಾರವಾರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

Related posts