“ಕಬ್ಜ”ದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಲ್ಲೆಲ್ಲಿ ಎಷ್ಟೆಷ್ಟು..?
ಬಹಳಷ್ಟು ಕುತೂಹಲ ಮೂಡಿಸಿದ “ಕಬ್ಜ” ಚಿತ್ರ ಬಿಡುಗಡೆಯಾಗಿ ಅದ್ದೂರಿ ಓಪನಿಂಗ್ ಪಡೆದಿದೆ. ಕರ್ನಾಟಕದಲ್ಲಿ 20 ಕೋಟಿ… ಹಿಂದಿಯಲ್ಲಿ 12 ಕೋಟಿ… ತೆಲುಗಿನಲ್ಲಿ 07 ಕೋಟಿ… ತಮಿಳುನಾಡಿನಲ್ಲಿ 05ಕೋಟಿ..ಮಳೆಯಾಳಂನಲ್ಲಿ 03 ಕೋಟಿ…
ನಾಲ್ಕು ಬೇರೆ ದೇಶಗಳಲ್ಲಿ 08 ಕೋಟಿ… ಕಲೆಕ್ಷನ್ ಆಗಿದೆಯಂತೆ. “ಕೆ ಜಿ ಎಫ್”, ” ಕಾಂತಾರ ” ಚಿತ್ರಗಳ ನಂತರ ಭಾರತದಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ ಚಿತ್ರ “ಕಬ್ಜ”. ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ” ಕಬ್ಜ ” ಮಾರ್ಚ್ 17 ಬಿಡುಗಡೆಯಾದ ಮೊದಲ ದಿನವೇ ಭಾರತಾದ್ಯಂತ 54ಕೋಟಿಗೂ ಹೆಚ್ಚು ‘ಬಾಕ್ಸ್ ಆಫೀಸ್” ಕಲೆಕ್ಷನ್ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ ಎರಡನೇ ದಿನವೇ ಐವತ್ತು ಕೋಟಿಗೂ ಅಧಿಕ ಕಲೆಕ್ಷನ್ ಆಗಬಹುದೆಂಬ ಮಾತು ಕೇಳಿ ಬರುತ್ತಿದೆ. ಭಾರತದಾಚೆಗೂ “ಕಬ್ಜ” ಸಿನಿಮಾ ಬಿಡುಗಡೆಯಾಗಿದ್ದು, ಅಲ್ಲೂ ಕೂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆರ್. ಚಂದ್ರು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ರಿಯಲ್ ಸ್ಟಾರ್ ಉಪೇಂದ್ರ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸಿದ್ದಾರೆ. ಸುಂದರ ಬೆಡಗಿ ಶ್ರೇಯಾ ಶರಣ್ ಸೇರಿದಂತೆ ಹಲವಾರು ಘಟಾನುಘಟಿಗಳು ಅಭಿನಯಿಸಿರುವ ಈ ಚಿತ್ರ ಈಗ ಎಲ್ಲರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.