Cinisuddi Fresh Cini News 

ಸಂಕ್ರಾಂತಿಗೆ “ಕಬ್ಜ” ತಂಡದಿಂದ ಗುಡ್ ನ್ಯೂಸ್…!

ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ಆರ್. ಚಂದ್ರು ಸಾರಥ್ಯದ ಸಿದ್ಧವಾಗುತ್ತಿರುವ ಚಿತ್ರ ಕಬ್ಜ. ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಗೆ ಕನ್ನಡ ಸ್ಟಾರ್ ಸಿನೆಮಾಗಳು ಬಿಡುಗಡೆಯಾಗುತ್ತಿಲ್ಲ ಎಂಬ ಕೊರಗಿನ ಮಧ್ಯೆ ಬಹುನಿರೀಕ್ಷಿತ ಅಂಡರ್ವಲ್ಡ್ ಬೇಸ್ ಸಿನಿಮಾ “ಕಬ್ಜ” ಗುಡ್ ನ್ಯೂಸ್ ಕೊಡಲು ರೆಡಿಯಾಗಿದೆ.

ಈಗಾಗಲೇ ಕೆಲವೊಂದಿಷ್ಟು ಚಿತ್ರಗಳು ತನ್ನದೇ ಆದ ವಿಶಿಷ್ಟ ವಿನೂತನ ಶೈಲಿಯ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದು , ಸಾಕಷ್ಟು ಹಿಟ್ ಮೇಲೆ ಹಿಟ್ ಚಿತ್ರಗಳು ಕಾಣಿಸಿಕೊಂಡಿವೆ. ಇದೆಲ್ಲದರ ಜೊತೆ ಇತ್ತೀಚಿಗೆ ನಮ್ಮ ಕೆಜಿಎಫ್ ಸಿನಿಮಾ ಕೂಡ ಯಾವ ಮಟ್ಟಿಗೆ ಸದ್ದು ಮಾಡಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಮೊನ್ನೆಯಷ್ಟೇ ಬಿಡುಗಡೆಯಾದ ಕೆಜಿಎಫ್ 2 ಟೀಸರ್ ಈಗಾಗಲೇ 100 ಮಿಲಿಯನ್ ವೀಕ್ಷಣೆ ಪಡೆದಿದ್ದು, ಎಲ್ಲ ದಾಖಲೆಗಳನ್ನು ಮುರಿದು ಹಾಕಿ ಮುನ್ನುಗ್ಗುತ್ತಿದೆ.

ಇದೇ ನಿಟ್ಟಿನಲ್ಲಿ “ಕಬ್ಜ” ಸಿನಿಮಾ ಕೂಡ ಮೂಡಿ ಬರಲಿದ್ದು, ಅಂಡರ್ವರ್ಲ್ಡ್ ಇದ್ದರೆ ಹೀಗೆ ಇರಬೇಕು ಎನ್ನುವ ಹಾಗೆ ಚಿತ್ರೀಕರಣ ಮಾಡಲಾಗಿದೆ. ಮತ್ತು ಚಿತ್ರದ ಕೆಲ ಸ್ಟೀಲ್ಸ್ ಗಳು ಈಗಾಗಲೇ ಅಭಿಮಾನಿಗಳ ಹೃದಯವನ್ನು ಕದ್ದು, ಚಿತ್ರದ ಮೇಲೆ ಇನ್ನಷ್ಟು ನಿರೀಕ್ಷೆ ಮೂಡುವಂತೆ ಮಾಡಿವೆ.

ನಮ್ಮ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಉಪೇಂದ್ರ ರವರು ಕೂಡ ಈ “ಕಬ್ಜ” ಚಿತ್ರದಲ್ಲಿ ನಾಯಕ ನಟನಾಗಿದ್ದು, ಇವರ ಅಭಿನಯ ಹೇಗಿರಬಹುದೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮತ್ತು ನಿರ್ದೇಶಕ ಆರ್ .ಚಂದ್ರು ಅವರ ನಿರ್ದೇಶನದಲ್ಲಿ , ಈ ಕಬ್ಜ ಮೂಡಿ ಬರುತ್ತಿದ್ದು, ಕಬ್ಜ ಸಿನಿಮಾ ಇನ್ನೊಂದು ಕೆಜಿಎಫ್ ರೀತಿಯೇ ಅನುಭವವನ್ನು ನೀಡಲು ಸಜ್ಜಾಗಿದೆ.

ಕನ್ನಡದ ಹೆಮ್ಮೆಯ ಇನ್ನೊಂದು ಚಿತ್ರ ಈ “ಕಬ್ಜ” ಆಗಿದ್ದು , ಬಿಡುಗಡೆಗೆ ಎಲ್ಲಾ ತಯಾರಿಯನ್ನು ನಡೆಸಿಕೊಂಡಿದೆ, ಹಾಗೂ ಇದೇ ಜನವರಿ 14ಕ್ಕೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರತಂಡವೂ ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿಯೊಂದನ್ನು ನೀಡಲು ರೆಡಿಯಾಗಿದೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಆ ಸುದ್ದಿ ಎನಿರಬಹುದು ಎಂದು ನೀವು ಕಮೆಂಟ್ ಮಾಡಿ ತಿಳಿಸಿ. ಈ ಪ್ಯಾನ್ ಇಂಡಿಯಾ “ಕಬ್ಜ”

ಚಿತ್ರದಲ್ಲಿ ದೊಡ್ಡಮಟ್ಟದ ತಾರಾ ಬಳಗ ಹಾಗೂ ನುರಿತ ತಂತ್ರಜ್ಞರ ಸಮಾಗಮವಿದೆ. ಆರ್ ಚಂದ್ರು ನಿರ್ದೇಶನ ಹಾಗೂ ನಿರ್ಮಾಣದ ಈ ಚಿತ್ರಕ್ಕೆ ಮುನೇಂದ್ರ. ಕೆ .ಪುರ ಕಾರ್ಯಕಾರಿ ನಿರ್ಮಾಪಕರಾಗಿದ್ದು , ರವಿಬಸೂರ್ ಸಂಗೀತವಿರುವ ಈ ಚಿತ್ರ ಎ. ಜೆ. ಶೆಟ್ಟಿ ಛಾಯಾಗ್ರಹಣ ಹಾಗೂ ಶಿವಕುಮಾರ ಕಲಾ ನಿರ್ದೇಶನವಿದೆ.

ಈಗಾಗಲೇ ಬಾರಿ ಸದ್ದು ಮಾಡಿರುವ ಕಬ್ಜ ಚಿತ್ರ ಸಂಕ್ರಾಂತಿಯ ವಿಶೇಷ ಕೊಡುಗೆಯನ್ನು ಅಭಿಮಾನಿಗಳಿಗೆ ನೀಡಲು ಸಕಲ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದು , ಇನ್ನೇನಿದ್ದರೂ ದಿನಗಣನೆಗೆ ಕಾಯಬೇಕಿದೆ.

Related posts