Cini Gallery Cinisuddi Fresh Cini News Trailers 

‘ಅರ್ಜುನ್ ರೆಡ್ಡಿ’ಯನ್ನೇ ಮೀರಿಸುವಂತಿದೆ ‘ಕಬೀರ್ ಸಿಂಗ್’ ಟೀಸರ್..!

2017ರ ತೆಲುಗು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಅರ್ಜುನ್ ರೆಡ್ಡಿ ಹಿಂದಿಯಲ್ಲಿ ರೀಮೇಕ್ ಆಗ್ತಿದೆ. ಶಾಹೀದ್ ಕಪೂರ್ ಚಿತ್ರದ ನಾಯಕನಾಗಿದ್ದು, ಬಿಟೌನ್ ಮಂದಿಗೆ ತಕ್ಕಂತೆ ಈ ಸಿನಿಮಾ ಮಾಡಲಾಗುತ್ತಿದೆ ಎಂಬ ನಿರೀಕ್ಷೆ ಇತ್ತು. ಇದೀಗ, ‘ಕಬೀರ್ ಸಿಂಗ್’ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಅರ್ಜುನ್ ರೆಡ್ಡಿಯನ್ನೇ ಮೀರಿಸುವಂತಿದೆ.

ಸಂದೀಪ್ ರೆಡ್ಡಿ ವಂಗಾ, ‘ಕಬೀರ್ ಸಿಂಗ್’ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತೆಲುಗು ಅವತರಿಣಿಕೆ ‘ಅರ್ಜುನ್ ರೆಡ್ಡಿ’ ಚಿತ್ರವನ್ನು ನಿರ್ದೇಶಿಸಿರುವ ಇವರು, ‘ಅಲ್ಲಿನ ಪಂಚ್ ರೀತಿಯಲ್ಲೇ ಹಿಂದಿಯ ಚಿತ್ರವು ಸಹ ಪಂಚ್ ನೀಡಲಿದೆ ,

‘ಕಬೀರ್ ಸಿಂಗ್’ ಸಿನಿಮಾದ ಬಹುತೇಕ ಚಿತ್ರೀಕರಣವು ಮುಂಬೈ, ದೆಹಲಿ ಮತ್ತು ಮುಸ್ಸೋರಿಯಲ್ಲೇ ನಡೆದಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ನಾಲ್ಕು ವಿಭಿನ್ನ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅರ್ಜುನರೆಡ್ಡಿ ಚಿತ್ರ ಬಿಡುಗಡೆಯಾದಾಗಾ ವಿಜಯದೇವರಕೊಂಡ ನಟನೆಯನ್ನು ಎಲ್ಲರೂ ಕೊಂಡಾಡಿದ್ದರು. ನಾಯಕಿಯಾಗಿ ಶಾಲಿನಿಯವರು ಉತ್ತಮವಾಗಿ ನಟಿಸಿದ್ದರು. ಈಗ ಹಿಂದಿಯಲ್ಲೂ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಕೂತುಹಲದಿಂದ ಕಾಯುತ್ತಿದ್ದಾರೆ.

ಈಗಾಗಲೇ ಈ ಚಿತ್ರದ ಬಿಡುಗಡೆ ದಿನಾಂಕವೂ ನಿಗದಿಯಾಗಿದ್ದು ಜೂನ್ 21 ರಂದು ತೆರೆಗೆ ಬರಲಿದೆ

Share This With Your Friends

Related posts