ಡ್ರಗ್‍ಡೀಲ್ ಪ್ರಕರಣದಲ್ಲಿ ಬಂಧಿತ ರಾಹುಲ್ ಪರ ಕೆ.ಮಂಜು ಬ್ಯಾಟಿಂಗ್
ಡ್ರಗ್‍ಡೀಲ್ ಪ್ರಕರಣದಲ್ಲಿ ಬಂಧಿತನಾಗಿದ್ದ ನಟಿ ಸಂಜನಾ ಆಪ್ತನಾಗಿದ್ದ ರಾಹುಲ್‍ನ ಶ್ರೀಮಂತಿಕೆ, ಆತನಿಗಿದ್ದ ಸೆಲಬ್ರಟಿಗಳ ನಂಟು, ಹೇಳತೀರದ್ದಾಗಿದೆ. ಈ ಪ್ರಕರಣದ ಆಳ ಈಗ ಬಗೆದಷ್ಟು ಬಯಲಾಗುತ್ತಿದ್ದು, ಆತನಿಗಿದ್ದ ಸಿನಿಮಾ, ರಾಜಕೀಯದ ನಂಟು ಬಯಲಾಗಿದೆ.
ವೀಕೆಂಡ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ ರಾಹುಲïಗೆ ಸಿನಿ ತಾರೆಯರ ಜೊತೆ ಫೋಟೋ ತೆಗೆಸಿಕೊಳ್ಳುವ ಖಯ್ಯಾಲಿ ತುಂಬಾನೇ ಇತ್ತು, ಅದೇ ಈಗ ಆತನಿಗೆ ಮುಳುವಾಗಿದೆ. ಪಾರ್ಟಿಗಳಿಗೆ ಪ್ರಮುಖವಾಗಿ ಚಿತ್ರರಂಗದ ತಾರೆಯರನ್ನು ಆಹ್ವಾನಿಸುತ್ತಿದ್ದ ಈತ ನಿರ್ಮಾಪಕ ಕೆ.ಮಂಜು, ನಟ ಉಪೇಂದ್ರ, ಶ್ರೀನಗರ ಕಿಟ್ಟಿ, ರಘು ಮುಖರ್ಜಿ, ಕ್ರಿಕೆಟಿಗ ಮತ್ತು ನಟ ಶ್ರೀಶಾಂತ್, ಸಂಗೀತ ನಿರ್ದೇಶಕ ಗುರುಕಿರಣï, ನಟಿಯರಾದ ಐಂದ್ರಿತಾ ರೇ, ಪ್ರಿಯಾಂಕ ಉಪೇಂದ್ರ, ಹರ್ಷಿಕಾ ಪೂಣಚ್ಚ, ನಿವೃತ್ತ ಐಜಿ ಬಿಎನ್‍ಎಸ್ ರೆಡ್ಡಿಯಂಥ ಸೆಲಬ್ರಟಿಗಳ ಜೊತೆ ನಿಂತು ಬಂಧಿಟೋಗಳನ್ನು ತೆಗೆಸಿಕೊಂಡಿದ್ದಾನೆ.
ಚಿತ್ರನಿರ್ಮಾಪಕ ಕೆ. ಮಂಜು ಅವರು ರಾಹುಲ್‍ಗೆ ತನ್ನ ಕೈಯಾರೆ ತುತ್ತು ತಿನ್ನಿಸುತ್ತಿರುವ ಫೋಟೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಈಫೆÇೀಟೋ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕೆ.ಮಂಜು, ರಾಹುಲ್ ನನಗೆ ಬಹಳ ವರ್ಷಗಳಿಂದ ಪರಿಚಯ. ಆತ ನನ್ನ ಗೆಳೆಯರೊಬ್ಬರ ಆಫೀನ್‍ನಲ್ಲಿ ಪರಿಚಯವಾಗಿದ್ದ. ಆತ ಬಹಳ ಒಳ್ಳೆಯ ಕುಟುಂಬದ ಹಿನ್ನೆಲೆ ಇರುವವನು, ನಮ್ಮ ಜೊತೆ ಒಳ್ಳೇ ಹುಡುಗನಾಗೇ ನಡೆದುಕೊಂಡಿದ್ದ, ಒಂದು ಪಾರ್ಟಿಗೆ ನಾನು ಹೋಗಿದ್ದಾಗ ಆತ ನನ್ನ ಜೊತೆ ಊಟ ಮಾಡುತ್ತ ಈ ಫೆÇೀಟೋ ತೆಗೆಸಿಕೊಂಡಿದ್ದ, ಈಗಲೇ ಅವನಿಗೆ ಇಷ್ಟೆಲ್ಲಾ ಲಿಂಕ್ ಇದೆ ಎಂದು ಗೊತ್ತಾಗಿದ್ದು ಎಂದು ಹೇಳಿದ್ದಾರೆ.
ಇದರ ಜೊತೆಗೆ ರಾಹುಲ್ ಶ್ರೀಲಂಕಾದ ಕ್ಯಾಸಿನೋಗೆ ಇಲ್ಲಿಂದ ಸೆಲೆಬ್ರಿಟಿಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ರ್ಯಾಪರ್ ಚಂದನ್ ಶೆಟ್ಟಿ, ನಟಿ ಕಾರಣ್ಯರಾಮ್ ಅವರ ಜೊತೆ ಕೂಡ ರಾಹುಲ್ ಫೋಟೋ ಕ್ಲಿಕಿಸಿಕೊಂಡಿದ್ದಾನೆ. ಈ ಹಿಂದೆ ರಾಹುಲ್ ಬಗ್ಗೆ ಮಾತನಾಡಿದ್ದ ಸಂಜನಾ ಗಲ್ರಾಣಿ, ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಾನೆ. ಜೇಕಬ್ ವರ್ಗಿಸ್ ಅವರ ನಿರ್ದೇಶನದ ಚಂಬಲ್ ಎನ್ನುವ ಸಿನಿಮಾದಲ್ಲಿ ರಾಹುಲ್ ಸಣ್ಣ ಪಾತ್ರವನ್ನು ಸಹ ಮಾಡಿದ್ದಾನೆ. ರಾಹುಲ್‍ಗೆ ನಾನು ರಾಖೀ ಭಾಯ್ ಅಂತಾನೇ ಕರೆಯುತ್ತೇನೆ ಎಂದು ಹೇಳಿದ್ದರು. ಆತನೀಗ ಹದಿನಾಲ್ಕು ದಿನಗಳ ಕಾಲ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಯಾಗಿ ಕಂಬಿ ಎಣಿಸುತ್ತಿದ್ದಾನೆ.