Cinisuddi Fresh Cini News 

‘ಮಧು’ ಅತ್ಯಾಚಾರಿಗೆ ಶಿಕ್ಷೆ ನೀಡುವಂತೆ ಸ್ಯಾಂಡಲ್ವುಡ್ ಆಗ್ರಹ

ಇತ್ತೀಚಿಗಷ್ಟೇ ರಾಯಚೂರಿನ ನವೋದಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಎಂಬ ಯುವತಿಯ ಮೇಲೆ ಅತ್ಯಾಚಾರ ಮಾಡಿ ಅಮಾನುಷವಾಗಿ ಕೊಲೆಗೈದಿದ್ದಾನೆ.ಈ ನೀಚ ಕೆಲಸ ಮಾಡಿದವನಿಗೆ ಕಠಿಣ ಶಿಕ್ಷೆ ನೀಡಿ ಗಲ್ಲಿಗೇರಿಸಬೇಕು.ಈ ವಿಚಾರ ಪ್ರತಿಯೊಬ್ಬ ನಾಗರಿಕರಿಗೂ ಬೇಸರ ತಂದಿದೆ. ನಂದ ನೊಂದ ಮಧು ಕುಟುಂಬಕ್ಕೆ ಸಾಂತ್ವನ ಹೇಳಲು ರಾಂಧವ ಚಿತ್ರದ ನಾಯಕ ಭುವನ್ ಪೊನ್ನಪ್ಪ ಹಾಗೂ ನಟಿ ಹರ್ಷಿಕಾ ಪೂಣಚ್ಚ ,ಮೃತ ಮಧು ಮನೆಗೆ ಹೋಗಿ ಹೆತ್ತವರಿಗೆ ಸಾಂತ್ವನ ಹೇಳಿದ್ದಾರೆ.ಹಾಗೆಯೇ ಈ ದುಷ್ಕೃತ್ಯ ಮಾಡಿದವನಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ‘ಮಧು’ ಅತ್ಯಾಚಾರ ಹಾಗೂ  ಅಮಾನುಷ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಆಗ್ರಹಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕ್ಯಾಂಡಲ್ ಹಚ್ಚುವ ಮೂಲಕ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಬಾ.ಮಾ ಹರೀಶ್, ಶಿಲ್ಪಾ ಶ್ರೀನಿವಾಸ್ ಸೇರಿದಂತೆ ಚಿತ್ರದ ನಿರ್ಮಾಪಕರು, ಹಂಚಿಕೆದಾರರು, ವಿತರಕರು ಹಾಗೂ ಮಂಡಳಿಯ ಸದಸ್ಯರು ಮತ್ತು ಕಲಾವಿದರು ಭಾಗವಹಿಸಿದ್ದರು.

Share This With Your Friends

Related posts