Cinisuddi Fresh Cini News 

ಸಿನಿಮಾ ಆರಂಭಕ್ಕೂ ಮೊದಲೇ “ಜುಗಲ್ ಬಂದಿ” ಚಿತ್ರದ ಆಡಿಯೋ ರೈಟ್ಸ್ ಸೋಲ್ಡ್ ಔಟ್

ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಬಿಸಿದ್ದಂತೆ ಕಾಣುತ್ತಿದೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ಹೀರೋಗಳು ಆಥವಾ ದೊಡ್ಡ ಸಂಸ್ಥೆಯ ಚಿತ್ರಗಳು ಸದ್ದು ಮಾಡೋದು ಸರ್ವೇ ಸಾಮಾನ್ಯ. ಆದ್ರೆ ಹೊಸಬರ ಈ “ಜುಗಲ್ ಬಂದಿ” ಸಿನಿಮಾ ದೊಡ್ಡ ಮಟ್ಟದ ಸದ್ದನ್ನೇ ಮಾಡಿದೆ.

ಯುವ ಪ್ರತಿಭೆಗಳ ಬಳಗದ ಚಿತ್ರ ಇದಾಗಿದ್ದು , ದಿವಾಕರ್ ಡಿಂಡಿಮ “ಜುಗಲ್ ಬಂದಿ” ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರದ ವಿಶೇಷ ಏನೆಂದರೆ…”ಜುಗಲ್ ಬಂದಿ” ಸಿನಿಮಾ ಶುರುವಾಗುವ ಮೊದಲೇ ಚಿತ್ರದ ಆಡಿಯೋ ರೈಟ್ಸ್ ಉತ್ತಮ ಮೊತ್ತಕ್ಕೆ ಸೇಲ್ ಆಗಿರೋದು.

ಈ ಸಂತೋಷದ ಸಂಭ್ರಮದಲ್ಲಿ ಇರುವಾಗಲೇ ಚಿತ್ರತಂಡ “ಜುಗಲ್ ಬಂದಿ” ಯ ಮುಹೂರ್ತ ಸಮಾರಂಭವನ್ನು ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ ಅಚ್ಚುಕಟ್ಟಾಗಿ ನೆರವೇರಿಸಿದರು.

ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ನಾಯಕ ಯಶ್ ಶೆಟ್ಟಿ, ಸಂತೋಷ್ ಅಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ ಮಾನಸಿ ಸುಧೀರ್, ನಿರ್ದೇಶಕ ದಿವಾಕರ್ ಡಿಂಡಿಮ ಹಾಜರಿದ್ದರು. ಈ ತಂಡಕ್ಕೆ ಶುಭ ಕೋರಲು ಸ್ನೇಹಿತರು ಹಾಗೂ ಗಣ್ಯರು ಆಗಮಿಸಿದರು.

ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ “ಜುಗಲ್ ಬಂದಿ” ಸಿನಿಮಾಗೆ ಪ್ರದ್ಯೋತನ್ ಸಂಗೀತ, ಎಸ್ .ಕೆ. ರಾವ್ ಕ್ಯಾಮೆರಾ ಸಿನಿಮಾದಲ್ಲಿರಲಿದೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಜುಗಲ್ ಬಂದಿ ಸಿನಿಮಾ ತಂಡ ಚಿತ್ರೀಕರಣಕ್ಕೆ ಹೊರಡಲು ಸ ಸಜ್ಜಾಗಿದೆ.

Related posts