Bollywood Cinisuddi Fresh Cini News 

ಜಯಲಲಿತಾ ಬಯೋಪಿಕ್‍ಗೆ ಮೊದಲು ಆಯ್ಕೆಯಾಗಿದ್ದು ವಿದ್ಯಾ ಬಾಲನ್..!

ಸಹಜ ಸುಂದರಿ ಮತ್ತು ಮನೋಜ್ಞ ಅಭಿನಯದ ತಾರೆ ವಿದ್ಯಾಬಾಲನ್ ಬಾಲಿವುಡ್‍ನಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ದಿ ಡರ್ಟಿ ಪಿಕ್ಚರ್ಸ್, ಕಹಾನಿ ಮತ್ತು ತುಮಾರಿ ಸುಲ್ಹು ಸೂಪರ್‍ಹಿಟ್ ಸಿನಿಮಾಗಳಲ್ಲಿ ನಟಿಸಿರುವ ವಿದ್ಯಾ, ಜೀವನಾಧರಿತ ಸಿನಿಮಾಗಳಿಗೆ ಜೀವ ತುಂಬಿ ಅಭಿನಯಿಸುವ ಪ್ರಬುದ್ಧ ಕಲಾವಿದೆ.

ವಿದ್ಯಾಳ ಪ್ರೌಢ ಪ್ರತಿಭೆ ಸಾಬೀತು ಮಾಡುವ ಹೊಸ ಸುದ್ದಿಯೊಂದು ಈಗ ಬಹಿರಂಗವಾಗಿದೆ. ಬಾಲಿವುಡ್ ಫೈರ್‍ಬ್ರಾಂಡ್ ಕಂಗನಾ ರನೌತ್ ಅಭಿನಯಿಸಲು ಸಜ್ಜಾಗಿರುವ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾರ ಬಯೋಪಿಕ್‍ಗೆ ಮೊದಲ ಆಯ್ಕೆ ವಿದ್ಯಾ ಬಾಲನ್ ಆಗಿತ್ತು ಎಂಬ ವರ್ತಮಾನವದು.

ನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲೂ ಪ್ರಖ್ಯಾತರಾದ ಜೆ.ಜಯಲಲಿತಾ ಜೀವನ ಸಾಧನೆ ಆಧರಿತ ಸಿನಿಮಾದಲ್ಲಿ ನಟಿಸುವಂತೆ ವಿದ್ಯಾಗೆ ಈ ಹಿಂದೆಯೇ ಆಫರ್ ನೀಡಲಾಗಿತ್ತು. ಇಂಥ ಪಾತ್ರವನ್ನು ನಿರ್ವಹಿಸಲು ವಿದ್ಯಾಗೆ ತುಂಬಾ ಇಷ್ಟವಾದರೂ ಕೈತುಂಬಾ ಪ್ರಾಜೆಕ್ಟ್‍ಗಳು ಮತ್ತು ಇತರ ಕಮಿಟ್‍ಮೆಂಟ್‍ಗಳಿಂದಾಗಿ ಜಯಾ ಬಯೋಪಿಕ್ ನಿರಾಕರಿಸಬೇಕಾಯಿತು. ಅಲ್ಲದೇ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ಜೀವನಾಧಾರಿತ ಪಾತ್ರ ನಿರ್ವಹಿಸಲು ವಿಬಿ ಈಗಾಗಲೇ ಒಪ್ಪಿರುವುದರಿಂದ ಈ ಪ್ರಾಜೆಕ್ಟ್‍ನನ್ನು ಕೈಬಿಡಬೇಕಾಯಿತು.

ವಿದ್ಯಾ ಯಾವುದೇ ಸಿನಿಯಾದಲ್ಲಿ ನಟಿಸಲು ಒಪ್ಪಿದರೆ ಅದಕ್ಕೆ ಸಂಪೂರ್ಣ ಬದ್ಧಳಾಗಿ ಸಾಕಷ್ಟು ತಯಾರಿ ಮತ್ತು ಸಿದ್ದತೆ ನಡೆಸಿ ಪರಿಪೂರ್ಣ ನ್ಯಾಯ ಒದಗಿಸುತ್ತಾರೆ. ಅತ್ತ ಇಂದಿರಾ ಗಾಂಧಿ ಪಾತ್ರ ಇತ್ತ ಜಯಲಲಿತಾ ಪಾತ್ರವನ್ನು ಒಟ್ಟಿಗೆ ನಿಭಾಯಿಸುವುದು ಕಷ್ಟ. ಪಾತ್ರಗಳಿಗೆ ಸಮಪರ್ಕಕವಾಗಿ ನ್ಯಾಯ ಒದಗಿಸಲು ಸಾಧÀ್ಯವಾಗದು ಎಂದು ಸ್ಪಷ್ಟಪಡಿಸಿ ವಿದ್ಯಾ, ಪುರುಚ್ಚಿ ತಲೈವಿ ಪಾತ್ರ ನಿರ್ವಹಿಸಲು ಸೌಜನ್ಯದಿಂದ ನಿರಾಕರಿಸಿದಳು.
ವಿದ್ಯಾ ನಿರಾಕರಿಸಿದ ನಂತರ ಈಗ ಮಣಿಕರ್ಣಿಕಾ ಖ್ಯಾತಿಯ ನಟಿ ಕಂಗನಾ ಪಾತ್ರ ನಿರ್ವಹಿಸುತ್ತಿದ್ದಾಳೆ. ಇದಕ್ಕಾಗಿ ಪೂರ್ವ ತಯಾರಿಗಳೂ ನಡೆದಿವೆ.

Share This With Your Friends

Related posts