Bollywood Cinisuddi Fresh Cini News 

ಜಾಹ್ನವಿಗೆ ಸಾಮಾಜಿಕ ಸಂದೇಶದ ಸಿನಿಮಾಗಳಲ್ಲಿ ನಟಿಸುವಾಸೆಯಂತೆ

v ಅಭಿನೇತ್ರಿ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ಬಾಲಿವುಡ್‍ನಲ್ಲಿ ಭದ್ರವಾಗಿ ನೆಲೆಕಂಡುಕೊಳ್ಳುತ್ತಿದ್ದಾಳೆ.  2018ರಲ್ಲಿ ತೆರೆಕಂಡ ಹಿಟ್ ಸಿನಿಮಾ ಧಡಕ್ ಮೂಲಕ ಬಿ-ಟೌನ್‍ಗೆ ಜಾನು ಎಂಟ್ರಿಯಾದಳು.

2019ರಲ್ಲಿ ಈ ಬೆಡಗಿಯ ಅಭಿನಯದ ಯಾವುದೇ ಸಿನಿಮಾ ತೆರೆಕಾಣಲಿಲ್ಲ. ಜಾನು ಸಮಕಾಲೀನ ಉದಯೋನ್ಮುಖ ತಾರೆಯರಾದ ಸಾರಾ ಅಲಿ ಖಾನ್ ಮತ್ತು ಅನನ್ಯ ಪಾಂಡೆ ಈಗಾಗಲೇ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈ ಸ್ಟಾರ್ ಕಿಡ್ ಕೈಯಲ್ಲಿ ಈ ವರ್ಷ ಒಟ್ಟು ನಾಲ್ಕು ಸಿನಿಮಾ ಪ್ರಾಜೆಕ್ಟ್‍ಗಳಿವೆ. ಘೋಸ್ಟ್ ಸ್ಟೋರಿಸ್, ಗುಂಜನ್ ಸಕ್ಸೇನಾ : ಕಾರ್ಗಿಲ್ ಗರ್ಲ್, ರೂಹಿ ಅಫ್ಜಾ ಮತ್ತು ದೋಸ್ತಾನ-2 ಸಿನಿಮಾಗಳಲ್ಲಿ ಜಾನು ಬ್ಯುಸಿ. 

ಅಭಿನಯ ಈಕೆಗೆ ರಕ್ತಗತ ಬಳುವಳಿ. ತಾಯಿ ಶ್ರೀದೇವಿಯಂತೆ ಈಕೆ ಪ್ರತಿಭಾವಂತೆ. ಒಂದು ರೀತಿಯ ಪಾತ್ರಗಳಿಗಿಂತ ವೈವಿಧ್ಯಮ ಸಿನಿಮಾಗಳು ಮತ್ತು ರೋಲ್‍ಗಳಲ್ಲಿ ನಟಿಸಬೇಕೆಂದು ಈಕೆಯ ಒಲವು. ಅದರಲ್ಲಿಯೂ ಸಾಮಾಜಿಕ ಸಂದೇಶ ಸಾರುವ ಚಿತ್ರಗಳಲ್ಲಿ ನಟಿಸುವಾಸೆ.

ಸಂದರ್ಶನವೊಂದರಲ್ಲಿ ತನ್ನ ಮನದಾಳದ ಬಯಕೆಯನ್ನು ತಿಳಿಸಿರುವ ಜಾನು, ನಿರ್ದಿಷ್ಟವಾಗಿ ಮಾನಸಿಕ ಆರೋಗ್ಯ ಸಮಸ್ಯೆ ಕುರಿತು ಚಿತ್ರದಲ್ಲಿ ನಟಿಸಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾಳೆ. ಇಂಥ ಸಂಕೀರ್ಣ ಸಿನಿಮಾ ಮತ್ತು ಪಾತ್ರಗಳಲ್ಲಿ ನಿರ್ವಹಿಸಿ ಆ ಮೂಲಕ ಸಮಾಜಕ್ಕೆ ಸಂದೇಶ ನೀಡಬೇಕೆಂಬ ಇಚ್ಚೆ ನನಗಿದೆ. ಮುಂದೆ ನನ್ನ ಬಯಕೆ ಸಾಕಾರಗೊಳ್ಳುವ ವಿಶ್ವಾಸವಿದೆ ಎನ್ನುತ್ತಾಳೆ.

Related posts