Cini Reviews Cinisuddi Fresh Cini News 

‘ಜನ್ ಧನ್’ ನಲ್ಲಿ ಕುರುಡು ಕಾಂಚಾಣ (ಚಿತ್ರ ವಿಮರ್ಶೆ -ರೇಟಿಂಗ್ 3.5/5)

ಚಿತ್ರ : ಜನ್ ಧನ್
ನಿರ್ದೇಶಕ : ನಾಗಚಂದ್ರ ನಿರ್ಮಾಪಕ : ನಾಗಚಂದ್ರ ಸಂಗೀತ : ಟಾಪ್ ಸ್ಟಾರ್ ರೇಣು ಛಾಯಾಗ್ರಾಹಕ : ಉಮೇಶ್ ಕಂಪ್ಲಾಪುರ್
ತಾರಾಗಣ : ಸುನೀಲ್ ಶಶಿ , ರಚನಾ ದಶರಥ್ , ಅರುಣ್, ಸುಮನ್ ಶರ್ಮಾ, ಜಯಲಕ್ಷ್ಮಿ, ಶ್ರೀಲಕ್ಷ್ಮಿ ಪ್ರಸನ್ನ ಹಾಗೂ ಮುಂತಾದವರು…

ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಆನ್ನೋ ಹಾಡು ನಮಗೆಲ್ಲ ತಿಳಿದಿದೆ. ಕಾಂಚನಾ ಯಾರ್ ಯಾರ್ ಬದುಕಿನಲ್ಲಿ ಏನೆಲ್ಲಾ ಆಟವಾಡುತ್ತದೆ, ಅದರಿಂದ ಆಗುವ ಏರುಪೇರುಗಳು ಏನು ಎಂಬುದನ್ನು ಬಹಳ ನೈಜಕ್ಕೆ ಹತ್ತಿರವಾದಂತೆ ತೆರೆ ಮೇಲೆ ಬಂದಂತಹ ಚಿತ್ರವೇ ಜನಧನ್.
ಈ ಒಂದು ಚಿತ್ರದಲ್ಲಿ ಮೋದಿ ಸರಕಾರದ ನೋಟ್ ಬ್ಯಾನ್ ವಿಚಾರವೂ ಒಂದು ಪ್ರಮುಖ ಅಂಶವಾಗಿದ್ದು ಜೊತೆಗೆ ಸಿನಿಮಾ ಒಳಗೆ ಸಿನಿಮಾ ನಿರ್ದೇಶಕನ ಬದುಕು, ಬವಣೆಯ ಕತೆಯನ್ನು ಬಹಳ ಸೊಗಸಾಗಿ ತೆರೆಯ ಮೇಲೆ ತಂದಿದ್ದಾರೆ.

ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನವರ ಸನ್ನಿಧಾನದಿಂದ ತೆರೆದುಕೊಳ್ಳುವ ಚಿತ್ರದ ಕಥಾ ಹಂದರದಲ್ಲಿ ದೇವಿಯನ್ನು ಆರಾಧಿಸುವ ಪಾತ್ರದಲ್ಲಿ ಶ್ರೀಲಕ್ಷ್ಮೀ ಪ್ರಸನ್ನ ಅವರು ಹಾಡನ್ನ ಹಾಡುವ ಮೂಲಕ ಜನ್ ಧನ್ ಸಿನಿಮಾ ತೆರೆದುಕೊಳ್ಳುತ್ತದೆ. ಒಬ್ಬ ನಿರ್ದೇಶಕ ತನ್ನ ಕನ್ನಡ ಪ್ರೇಮ ಸ್ವಾಭಿಮಾನದ ಬದುಕಿನಲ್ಲಿ ಜೀವನ ನಡೆಸುತ್ತಿರುತ್ತಾನೆ.

ಜೀವನದಲ್ಲಿ ಏನೇ ಮಾಡಿದರೂ ಪ್ರಾಮಾಣಿಕವಾಗಿ ಜನರ ಮನಸ್ಸನ್ನು ಗೆಲ್ಲುವಂತಹ ಅಚ್ಚುಕಟ್ಟಾದ ಸಿನಿಮಾ ಮಾಡುವ ಅಭಿಲಾಷೆ ಹೊಂದಿರುತ್ತಾನೆ. ರೀಮೇಕ್ ಚಿತ್ರ ಮಾಡಲು ಒಪ್ಪದ ಈ ನಿರ್ದೇಶಕ ಒಳ್ಳೆಯ ಅವಕಾಶಕ್ಕಾಗಿ ಪರಿತಪಿಸುತ್ತಿರುತ್ತಾನೆ. ಇದರ ನಡುವೆ ಆತನಿಗೆ ಸಿಗುವ ನಿರ್ಮಾಪಕರು ಈ ಸೋತ ನಿರ್ದೇಶಕನಿಗೆ ಅವಕಾಶ ನೀಡಲು ಹಿಂಜರಿಯುತ್ತಾರೆ.

ನಿರ್ದೇಶಕ ತನ್ನ ಮನೆಯಲ್ಲಿ ಪತ್ನಿ ಮಗುವಿನೊಂದಿಗೆ ನೆಮ್ಮದಿ ಬದುಕನ್ನು ಕಾಣಲು ಕೂಡ ಕಷ್ಟಪಡುತ್ತಾನೆ. ಅಚಾನಕ್ಕಾಗಿ ನಿರ್ದೇಶಕನಿಗೆ ಹೊಸ ದಿಕ್ಕು ತರೆದುಕೊಳ್ಳುತ್ತದೆ. ಮೋದಿಯ ನೋಟ್ ಬ್ಯಾನ್ ನಿರ್ದೇಶಕನ ಬದುಕಿನ ದಿಕ್ಕನ್ನೇ ಬದಲಿಸುವ ಹಾದಿಯನ್ನು ತೋರುದೆ. ತಾನು ನಿರ್ದೇಶನ ಮಾಡುವ ಚಿತ್ರದ ನಾಯಕ ಹಾಗೂ ನಾಯಕಿಯ ಜೊತೆಗೆ ನಿರ್ಮಾಪಕನಾಗಿ ಒಬ್ಬರನ್ನು ಕರೆಸಿಕೊಂಡು ಚಿತ್ರೀಕರಣಕ್ಕಾಗಿ ಸ್ಥಳ ಹುಡುಕಲು ಹೊರಡಲು ನಿರ್ಧರಿಸುತ್ತಾನೆ.

ನಾಯಕನ ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದ ಕಡೆಗೆ ಸಾಗುವ ಇವರು ಕಪ್ಪು ಹಣವನ್ನು ಬಿಳಿ ಹಣ ಮಾಡಿಕೊಳ್ಳಲು ಪ್ಲಾನ್ ನಡೆದಿರುತ್ತದೆ. ಇದು ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಮಾತ್ರ ತಿಳಿದಿರುತ್ತದೆ. ಮುಂದೆ ಇವರು ಸಾಗುವ ಹಾದಿಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಚಿತ್ರದ ಮೊದಲ ಭಾಗ ಸ್ವಲ್ಪ ನಿಧಾನಗತಿ ಅನಿಸಿದರೂ ಚಿತ್ರದ ಎರಡನೇ ಭಾಗ ಬಹಳಷ್ಟು ಕುತೂಹಲಕಾರಿ ಅಂಶಗಳು ತೆರೆದಿಡುತ್ತದೆ.

ನಿಜವಾಗಿಯೂ ಈ ನಿರ್ದೇಶಕನ ಹಾದಿ ಏನು… ಇವರು ಚಿತ್ರೀಕರಣ ಸ್ಥಳ ನೋಡಲು ಹೋಗಿದ್ದಾರೆಯೇ… ಇವರ ಕಾರಿನಲ್ಲಿ ಕಪ್ಪು ಹಣ ಹೇಗೆ ಬಂತು… ಹಣದ ಹಿಂದೆ ಹೋದವರ ಗತಿ ಏನಾಗುತ್ತದೆ… ಎಂಬುದನ್ನು ತಿಳಿಯಬೇಕಾದರೆ ನೀವೆಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಲೇಬೇಕು.

ನಿರ್ದೇಶಕ ನಾಗಚಂದ್ರ ಒಂದು ಉತ್ತಮ ವಿಷಯವನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿತ್ರ ನೋಟ್ ಬ್ಯಾನ್ ಆದ ಸಮಯದಲ್ಲಿ ಬಂದಿದ್ದರೆ ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿತ್ತು ಎನ್ನಬಹುದು. ಅದೇ ರೀತಿ ಒಬ್ಬ ನಿರ್ದೇಶಕನ ಬದುಕು, ಅವನ್ನು ಎದುರಿಸುವ ಸಮಸ್ಯೆಗಳನ್ನು ತೆರೆದಿಟ್ಟಿರುವುದು ನೋಡಿದರೆ ಅವರು ಅನುಭವಿಸಿದ ಕೆಲವು ವಿಚಾರಗಳು ಬಂದಂತೆ ಅನಿಸುತ್ತದೆ. ಚಿತ್ರದ ಓಟ ಒಂದಷ್ಟು ಬಿಗಿಯಾಗಿದ್ದರೆ ಚೆನ್ನಾಗಿರುತ್ತಿತ್ತು.

ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವ ಸುನೀಲ್ ಶಶಿ ಕೂಡ ಉತ್ತಮ ಕಲಾವಿದನಾಗಿ ನೀಲುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ರಚನಾ ದಶರಥ್ ಕೂಡ ಸಿಕ್ಕ ಪಾತ್ರಕ್ಕೆ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ .

ನೋಡಲು ಮುದ್ದಾಗಿರುವ ಈ ನಾಯಕಿ ಬೆಳ್ಳಿ ಪರದೆ ಮೇಲೆ ಮಿಂಚುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಇನ್ನು ನಿರ್ದೇಶಕನ ಪಾತ್ರ ಮಾಡಿರುವ ಅರುಣ್ ಕೂಡ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳು ತಮ್ಮ ತಮ್ಮ ಅಭಿನಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಟಾಪ್ ಸ್ಟಾರ್ ರೇಣು ಸಂಗೀತ ಗಮನಾರ್ಹವಾಗಿದೆ.

ಇನ್ನು ಛಾಯಾಗ್ರಾಹಕರ ಕೆಲಸ ಉತ್ತಮವಾಗಿದೆ. ಕಪ್ಪು ಹಣದ ಕೈಚಳಕ ಈ ಚಿತ್ರದ ಕೇಂದ್ರ ಬಿಂದುವಾಗಿದ್ದು , ಇದರಿಂದ ಆಗುವ ಅನಾಹುತಗಳು ಎಲ್ಲರ ಗಮನ ಸೆಳೆಯುತ್ತದೆ. ಒಟ್ಟಾರೆ ಕುಟುಂಬ ಸಮೇತ ಕುಳಿತು ನೋಡುವಂತ ಚಿತ್ರ ಇದಾಗಿದ್ದು, ಹಣ ಹಾಗೂ ಮನುಷ್ಯನ ಮೌಲ್ಯದ ಅರಿವು ಈ ಚಿತ್ರದಲ್ಲಿ ಆಗಲಿದೆ ಎನ್ನಬಹುದು.

Share This With Your Friends

Related posts