Cinisuddi Fresh Cini News 

‘ಜನತಾ ಬಜಾರ್’ ಚಿತ್ರಕ್ಕೆ ಚಾಲನೆ

ಜನತಾ ಬಜಾರ್ ಹೆಸರೇ ಹೇಳುವಂತೆ ಇದೊಂದು ಜನರಿಂದಲೇ ಕೂಡಿದ ಬಜಾರ್. ಈ ಬಜಾರ್ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ನೆಲೆ ಕಂಡುಕೊಳ್ಳಲು ಇಬ್ಬರು ಹೀರೋಗಳು ಹಾಗೂ ನಿರ್ದೇಶಕರು ಹವಣಿಸುತ್ತಿದ್ದಾರೆ.

ಎಂ.ವಿ. ಸಿನಿ ಕ್ರಿಯೇಷನ್ಸ್‍ನಿಂದ ಹೊರ ಬರುತ್ತಿರುವ ಜನತಾಬಜಾರ್‍ಗೆ ರಾಯರಿಗೆ ಪ್ರಿಯವಾದ ಗುರುವಾರದಂದು ಯಲಹಂಕದ ವೀರಾಂಜನೇಯ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಮುಹೂರ್ತ ಸಮಾರಂಭ ನಡೆಯಿತು. ಈ ಭಾಗದವರೇ ಹೆಚ್ಚಾಗಿ ಪಾಲ್ಗೊಂಡಿರುವ ಈ ಚಿತ್ರಕ್ಕೆ ಶುಭಕೋರಲು ಅದೇ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಆಗಮಿಸಬೇಕಾಗಿತ್ತಾದರೂ ರಾಜಕೀಯ ಬೆಳವಣಿಗೆಗಳಿಂದಾಗಿ ಗೈರಾಗಿದ್ದರಿಂದ ಅವರ ಪತ್ನಿ ವಾಣಿ ವಿಶ್ವನಾಥ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಲ್ಲದೆ, ಚಿತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದರು.

ಗ್ರಾಮದ ಏಳಿಗೆಗಾಗಿ ಸದಾ ತುಡಿಯುವ ಯುವಕರಿಗೆ ಹೆತ್ತವರು ಇಲ್ಲದಿರುವುದರಿಂದ ಅವರನ್ನು ದತ್ತು ಪಡೆದುಕೊಂಡಿದ್ದರೆ. ಒಂದು ಹಂತದಲ್ಲಿ ಅವರಿಗೆ ನಾಯಕಿಯರೊಂದಿಗೆ ಪ್ರೇಮಾಂಕುರವಾಗುತ್ತದೆ ಆದರೆ ಊರಿನವರಿಂದ ಅವರ ಪ್ರೀತಿಗೆ ಪ್ರತಿರೋಧ ವ್ಯಕ್ತವಾಗುತ್ತದೆ, ಈ ವಿರೋಧದ ನಡುವೆಯೂ ನಾಯಕರು, ನಾಯಕಿಯರನ್ನು ಪಡೆಯುತ್ತಾರೆಯೇ ಎಂಬುದು ಚಿತ್ರದ ಸ್ವಾರಸ್ಯ.

ರಾಹುಲ್, ಅರ್ಜುನ್‍ಕುಮಾರ್ ನಾಯಕರಾಗಿದ್ದರೆ, ಅದಿತಿ, ಅಶ್ವಿತ ನಾಯಕಿಯರು. ಪ್ರಜ್ವಲ್, ಕಿರಣ್, ಪವನ್, ಹೀಗೆ ಚಿತ್ರದಲ್ಲಿ ಸಾಕಷ್ಟು ಹೊಸ ಮುಖಗಳು ತುಂಬಿಕೊಂಡಿವೆ. ಚಿತ್ರದ ನಿರ್ದೇಶಕ ಪ್ರದೀಪ್ ಆರ್. ಜೆ. ನಿರ್ಮಾಪಕ ಕೆ.ಎಂ.ಮುರಳಿ ಮತನಾಡಿ, ಮಲೆನಾಡಿನ ಪ್ರಕೃತಿ ಮಡಿಲಲ್ಲೇ ಈ ಚಿತ್ರದ ಬಹುತೇಕ ಚಿತ್ರೀಕರಣವನ್ನು ಚಿತ್ರೀಕರಿಸುವ ಯೋಚನೆ ಇದ್ದು ಕಥೆಗೆ ಒಪ್ಪುವಂತಹ ಲೋಕೇಶನ್‍ಗಳನ್ನು ಹುಡುಕುತ್ತಿದ್ದೇವೆ ಎಂದು ಹೇಳಿದರು.

ವೈಭವ್ ಈ ಚಿತ್ರದ ಸಂಗೀತ ನಿರ್ದೇಶಕರು. ಜನತಾ ಬಜಾರ್ ಚಿತ್ರದೊಳಗೆ ಬಹುತೇಕ ಮಂದಿ ಹೊಸಬರೇ ತುಂಬಿಕೊಂಡಿದ್ದಾರೆ. ಚಿತ್ರರಂಗದ ಅನುಭವವೂ ಇದೆ, ಮುಖ್ಯವಾಗಿ ಎಲ್ಲರಲ್ಲೂ ಒಂದು ಉತ್ಸಾಹ ಇದ್ದು ಅವರು ಚಿತ್ರರಂಗದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಲಿ.

Share This With Your Friends

Related posts