Cinisuddi Fresh Cini News 

ಒಂದು ದಿನದ ಕಥೆ “ಜನ್‍ಧನ್”

ಶ್ರೀ ಸಿದ್ಧವಿನಾಯಕ ಫಿಲಂಸ್ ಲಾಂಛನದಲ್ಲಿ, ಟಿ.ನಾಗಚಂದ್ರ, ಸ್ನೇಹಿತರೊಂದಿಗೆ ಕೂಡಿ ನಿರ್ಮಿಸುತ್ತಿರುವ “ಜನ್‍ಧನ್” ಚಿತ್ರಕ್ಕೆ ಪ್ರಥಮ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಈ ಚಿತ್ರ ಬೆಂಗಳೂರಿನಿಂದ-ಶಿರಾವರೆಗೂ ನಡೆಯುವ ಒಂದು ದಿನದ ಕಥೆಯಾಗಿದ್ದು, ಎನ್‍ಹೆಚ್4 ನಲ್ಲಿ ಬೆಳಿಗ್ಗೆ 4 ಗಂಟೆಯಿಂದ ಪ್ರಾರಂಭವಾದರೆ ಸಂಜೆಯವರೆಗೆ ಕೊನೆಗೊಳ್ಳುತ್ತದೆ,

ಸಾಮಾನ್ಯ ಜನರ ಭಾವನೆಗಳನ್ನು ಬಿತ್ತರಿಸುವ ಕಥೆ ಇದು. ಈ ಚಿತ್ರವನ್ನು ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಟಿ.ನಾಗಚಂದ್ರ, ಛಾಯಾಗ್ರಹಣ – ಉಮೇಶ್ ಕಂಪ್ಲಾಪುರ್, ಸಂಗೀತ – ಟಾಪ್ ಸ್ಟಾರ್ ರೇಣು, ಹಿನ್ನೆಲೆ ಸಂಗೀತ – ಗೌತಮ್ ಶ್ರೀವತ್ಸ, ನಿರ್ವಹಣೆ- ರಾಜರಾವ್, ತಾರಾಗಣದಲ್ಲಿ – ಸುನೀಲ್ ಶಶಿ, ರಚನಾ, ಮಾ|| ಲಕ್ಷಣ್, ಅರುಣ್, ಟಾಪ್‍ಸ್ಟಾರ್ ರೇಣು, ಜಯಲಕ್ಷ್ಮಿ, ಸುನಿಲ್ ವಿನಾಯಕ, ಸುಮನ್, ತೇಜೇಶ್ವರ್ ಮುಂತಾದವರಿದ್ದಾರೆ.

Share This With Your Friends

Related posts