Cinisuddi Fresh Cini News 

“ಜೈ ಗುರು ಸಾರ್ವಭೌಮ” ಎಂದ ವಿ. ಮನೋಹರ್

ಇತ್ತೀಚೆಗೆ ಸಂಯುಕ್ತ ಸ್ಟುಡಿಯೋಸ್ ಮೂಲಕ ಕೊರೋನಾ ನಿಜಾನಾ ಅನ್ನೋ ವಿಡಿಯೋವನ್ನು ಸ್ವತಃ ವಿ ಮನೋಹರ್ ಅವರೇ ಹಾಡಿ ಬಿಟ್ಟಿದ್ದರು. ಈ ಸಂಕಷ್ಟ ಪರಿಸ್ಥಿತಿಯಲ್ಲೂ ಹಣ ಮಾಡುವವರ, ಲೂಟಿಕೋರರ ಬಗ್ಗೆ ವ್ಯಂಗ್ಯವಾಗಿ ಸಾಹಿತ್ಯ ಬರೆದು ಹಾಡಿದ್ದರು.

ಈಗ ವಿ ಮನೋಹರ್ ಅವರು ಪದ್ಮರಾಗ ಎಂಟರ್ ಟೈನ್ ಮೆಂಟ್ ಮೂಲಕ ಮತ್ತೊಂದು ವಿಡಿಯೋ ಬಿಟ್ಟಿದ್ದಾರೆ. ಜೈ ಗುರುಸಾರ್ವಭೌಮ ಎಂಬ ವಿಡಿಯೋ ಈಗ ಬಹಳ ಜನಪ್ರಿಯವಾಗಿದೆ.

ಅದು ಶ್ರೀ ಗುರುರಾಘವೇಂದ್ರ ಯತಿಗಳ ಆರಾಧನಾ ಮಹೋತ್ಸವಕ್ಕಾಗಿ ಮಾಡಿದ ಹಾಡು. ಅದನ್ನು ಸ್ವತಃ ಮನೋಹರ್ ಬರೆದು ತಾವೇ ಹಾಡಿದ್ದಾರೆ.

ಅದರಲ್ಲಿ ಮುಖ್ಯವಾಗಿ ಭೂಮಿಕ‌ ರಮೇಶ್ ನೃತ್ಯ ಮಾಡಿದ್ದಾರೆ.
ಇಲ್ಲಿವರೆಗೆ ಬಂದ ರಾಯರ ಭಕ್ತಿಗೀತೆಗಳು ಸಾಮಾನ್ಯವಾಗಿ ಶಾಸ್ತ್ರೀಯ ಅಥವಾ ಮಾಧುರ್ಯ ಇರುವಂತ ಹಾಡುಗಳು. ಆದರೆ ಇಲ್ಲಿ ವಿ ಮನೋಹರ್ ಭಕ್ತರನ್ನು ಕುಣಿಸುವ ನೃತ್ಯ ಪ್ರಧಾನ, ಧಾಟಿ ಸಂಯೋಜನೆ ಮಾಡಿದ್ದಾರೆ.

ರಾಯರ ಭಕ್ತಿಗೀತೆಗಳಲ್ಲಿ ನಾಟ್ಯಪ್ರಧಾನ ಹಾಡು ಇದೇ ಮೊದಲನೆಯದು ಎನ್ನಬಹುದು. ಈ ವಿಡಿಯೋದಲ್ಲಿ ಉಡುಪಿಯ ರಂಗಭೂಮಿ ಕಲಾವಿದರಾದ ಶ್ರೀ ಪಾದ ಹೆಗಡೆ, ಶಾಂಭವಿ ಆಚಾರ್ಯ, ಕಲ್ಯಾಣಿ ಪೂಜಾರಿ, ಶ್ರೀ ಶ್ರೇಯಾ ಅಲ್ಲದೆ ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯ ಅನೇಕ ವಿದ್ಯಾರ್ಥಿಗಳು ನರ್ತಿಸಿದ್ದಾರೆ

Share This With Your Friends

Related posts