Cinisuddi Fresh Cini News 

‘ಜಾಕ್‍ಪಾಟ್’ ನಿರೀಕ್ಷೆಯಲ್ಲಿ ಎಟಿಎಂ ತಂಡ…!

ಎರಡು ವರ್ಷಗಳ ಹಿಂದೆ ಎಟಿಎಂ ಎಂಬ ಚಿತ್ರ ಮಾಡಿದ್ದ ತಂಡ ಮತ್ತೊಂದು ಚಿತ್ರಕ್ಕಾಗಿ ಜೊತೆಗೂಡಿ ಜಾಕ್‍ಪಾಟ್ ಹೊಡೆಯಲು ಮುಂದಾಗಿದೆ. ಹೌದು ನಿರ್ದೇಶಕ ಅಮರ್ ಈಗ ಎಟಿಎಂ ಸ್ನೇಹಿತರನ್ನೆಲ್ಲ ಸೇರಿಸಿಕೊಂಡು ಜಾಕ್‍ಪಾಟ್ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದಾರೆ,

ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದೂಗೌಡ ಹಾಗೂ ಶೋಭಿತಾ ಶಿವಣ್ಣ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಜಾನರ್‍ನ ಕಥಾಹಂದರ ಹೊಂದಿರೋ ಈ ಚಿತ್ರಕ್ಕೆ ಚನ್ನರಾಯ ಪಟ್ಟಣ ಮೂಲದ ನವೀನ್ ಬಂಡವಾಳ ಹೂಡಿದ್ದಾರೆ.

ಹಿಂದೆ ಮಂದಸ್ಮಿತ ಎಂಬ ಕಿರುಚಿತ್ರ ನಿರ್ಮಾಣ ಮಾಡಿದ್ದ ನವೀನ್ ಮೊದಲ ಬಾರಿಗೆ ಚಿತ್ರ ನಿರ್ಮಾಪಕರಾಗಿದ್ದಾರೆ. ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ಈ ಸಿನಿಮಾದಲ್ಲಿ ಎಲ್ಲರೂ ನಿರ್ಮಾಪಕರೇ ಎನ್ನಬಹುದು. ಏಕೆಂದರೆ ಅವರವರ ಕೆಲಸಗಳನ್ನು ಶೃದ್ದೆಯಿಂದ ನಿರ್ವಹಿಸುವ ಮೂಲಕ ಒಂದು ಒಳ್ಳೇ ಪ್ರಾಡಕ್ಟ್ ಹೊರ ಬರಲು ಕಾರಣರಾಗಿದ್ದಾರೆ. ನಾನು ಬರೀ ಹಣ ಹಾಕಿದ್ದೇನೆ ಅಷ್ಟೇ.

ನಮ್ಮ ಚಿತ್ರ ಲಾಕ್‍ಡೌನ್‍ಗೂ ಮೊದಲೇ ಆರಂಭವಾಗಿತ್ತು. ಇನ್‍ಟೈಮ್‍ನಲ್ಲಿ ಶೂಟಿಂಗ್ ಕೂಡ ಮುಗಿಯಿತು. ಆನಂತರ ಕರೋನಾ ಬಂದು ಎಂಟು ತಿಂಗಳು ಗ್ಯಾಪ್ ಆಯ್ತು. ಬರುವ 2021ರ ಜನವರಿ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಹೇಳಿದರು.

ನಿರ್ದೇಶಕ ಅಮರ್ ಮಾತನಾಡಿ ಚಿತ್ರಕ್ಕೆ ಮೊದಲು ಬೇರೆ ಟೈಟಲ್ ಅಂದುಕೊಂಡಿದ್ದೆವು. ನಂತರ ಕಥೆಗೆ ಇದೇ ಸೂಕ್ತ ಎಂದೆನಿಸಿ ಜಾಕ್‍ಪಾಟ್ ಅಂತ ಇಟ್ಟಿದ್ದೇವೆ. ಪೊಲೀಸ್ ಹಾಗೂ ಒಬ್ಬ ವ್ಯಕ್ತಿಯ ಪಾತ್ರದ ಸುತ್ತ ನಡೆಯುವ ಕಥೆಯಿದು.

ವಿಶ್ರಾಂತಿಗೆಂದು ಸಕಲೇಶಪುರಕ್ಕೆ ಹೋಗುವ ನಾಯಕ ಅಶ್ವಿನ್‍ಗೆ ಅತ್ಯಂತ ಬೆಲೆಬಾಳುವ ಮಾದಕ ವಸ್ತು ದೊರೆಯುತ್ತದೆ. ಅದನ್ನು ಬೆಂಗಳೂರಿಗೆ ತಂದು ಸೇಲ್ ಮಾಡಲು ಯತ್ನಿಸುತ್ತಾನೆ. ಈ ವಿಷಯ ಅದೇಗೋ ಪೊಲೀಸರಿಗೆ ಗೊತ್ತಾಗಿ ಈ ಕೇಸ್ ಹಿನ್ನೆಲೆ ಪತ್ತೆ ಹಚ್ಚಲು ಚಂದು ಅವರನ್ನು ನೇಮಿಸುತ್ತಾರೆ. ಇಬ್ಬರ ನಡುವ ನಡೆಯುವ ಕಥೆಯಲ್ಲಿ ಯಾರಿಗೆ ಜಾಕ್‍ಪಾಟ್ ಹೊಡೆಯುತ್ತೆ ಎನ್ನುವುದೇ ಈ ಚಿತ್ರದ ಒನ್‍ಲೈನ್ ಸ್ಟೋರಿ. ಬೆಂಗಳೂರು, ಸಕಲೇಶಪುರ ಸುತ್ತಮತ್ತ 30 ದಿನಗಳ ಕಾಲ ಮಾತಿನ ಭಾಗ ಹಾಗೂ 12 ದಿನಗಳ ಕಾಲ ಹಾಡುಗಳನ್ನು ಚಿತ್ರೀಕರಿಸಿದ್ದೇವೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು ರವಿದೇವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ಬಕ್ಕೇಶ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ನವೀನ್ ಸಜ್ಜುಘಿ ಪ್ಯಾಥೋ ಹಾಡನ್ನು ಸಂಚಿತ್ ಹೆಗ್ಡೆ ಮೆಲೋಡಿ ಹಾಡನ್ನು ಹಾಡಿದ್ದಾರೆ. ಇನ್ನೊಂದು ಹಾಡನ್ನು ಪೂರ್ಣವಾಗಿ ಸಿಜಿ ವರ್ಕ್‍ನಲ್ಲಿ ಮಾಡಿದ್ದೇವೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ರವಿದೇವ್ ಮಾತನಾಡುತ್ತ ನಿರ್ದೇಶಕರ ಜೊತೆ ಎಟಿಎಂನಲ್ಲಿ ಕೆಲಸ ಮಾಡಿದ್ದೆಘಿ, ಈಗ ಮತ್ತೆ ಜೊತೆಯಾಗಿದ್ದೇವೆ. ಮೂರು ಹಾಡುಗಳೂ ಮೂರು ವೆರೈಟಿಯಲ್ಲಿ ಮೂಡಿಬಂದಿವೆ. ನಾಯಕ ಚಂದೂಗೌಡ ಮಾತನಾಡಿ ನಾಯಕನಾಗಿ ಇದು ನನ್ನ ಎರಡನೇ ಚಿತ್ರ.

ನಿರ್ದೇಶಕರು ಚಿತ್ರದ ಕಥೆಯ ಮೇಲೆ ತುಂಬಾ ವರ್ಕ್ ಮಾಡಿದ್ದಾರೆ. ಎಟಿಎಂ ನಂತರ ಶೋಭಿತಾ ಜೊತೆ ಮತ್ತೊಮ್ಮೆ ಅಭಿನಯಿಸುತ್ತಿz್ದÉೀನೆ. ವಿಶೇಷ ಎಂದರೆ ನನ್ನ ಮೂಲ ಹೆಸರೇ ಸೀರಿಯಲ್‍ನಲ್ಲೂ ಇತ್ತುಘಿ. ಈಗ ಚಿತ್ರದಲ್ಲೂ ನನ್ನ ಹೆಸರು ಚಂದೂ.

ಒಳ್ಳೇ ಚಿತ್ರದಲ್ಲಿ ನಾವೆಲ್ಲ ಮತ್ತೆ ಸೇರಿರುವುದಕ್ಕೆ ಖುಷಿಯಾಗ್ತಿದೆ ಎಂದರು. ನಾಯಕಿ ಶೋಭಿತಾ ಶಿವಣ್ಣ ಮಾತನಾಡುತ್ತ ಚಿತ್ರದಲ್ಲಿ ನನ್ನದು ಮೀರಾ ಎನ್ನುವ ಗೃಹಿಣಿಯ ಪಾತ್ರಘಿ. ತುಂಬಾ ಮೆಚೂರ್ಡ್ ರೋಲ್. ಸಂಸಾರದಲ್ಲಿ ಪತಿ, ಪತ್ನಿ ನಡುವೆ ಭಿನ್ನಾಭಿಪ್ರಾಯ ಬಂದಾಗ ಹೇಗೆ ಕೂತು ಬಗೆಹರಿಸಿಕೊಳ್ಳಬೇಕು ಎಂದು ಚಿತ್ರದಲ್ಲಿ ಹೇಳಲಾಗಿದೆ. ನಾಗಾಭರಣ ಅವರು ಸೀರಿಯಲ್‍ನಲ್ಲಿ ನನಗ ಮಾವನಾಗಿದ್ದರು, ಚಿತ್ರದಲ್ಲಿ ತಂದೆಯ ಪಾತ್ರ ಮಾಡಿದ್ದಾರೆ ಎಂದರು. ಕುಶಾಂತ್ ಈ ಚಿತ್ರದಲ್ಲಿ ಮತ್ತೊಬ್ಬ ಪ್ರಮುಖ ಪಾತ್ರಧಾರಿ, ಅಲ್ಲದೆ ನಿರ್ಮಾಪಕ ನವೀಣ್ ಕೂಡ ಚಿಕ್ಕ ಪಾತ್ರವೊಂದನ್ನು ಮಾಡಿದ್ದಾರೆ. ಅಬಿನಂದನ್ ಶೆಟ್ಟಿ ಚಿತ್ರಕ್ಕೆ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.

Related posts