Cinisuddi Fresh Cini News 

‘100′ ಸಿನಿಮಾ ನೋಡಿ ಎಚ್ಚೆತ್ತುಕೊಳ್ಳಿ : ಸುಧಾಮೂರ್ತಿ

ಕೈನಲ್ಲೊಂದು ಸ್ಮಾರ್ಟ್ ಫೋನ್, ಅದ್ರಲ್ಲೊಂದು ಸೋಶಿಯಲ್ ಮೀಡಿಯಾ ಅಕೌಂಟ್ ಎಂಥವರು ಈಗ ಹೊಂದಿದ್ದಾರೆ. ಆದ್ರೆ ಅದರಿಂದಾಗುವ ಅನಾಹುತ ಎಷ್ಟು ದೊಡ್ಡದು ಎಂಬುದನ್ನು ಯಾರು ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣ್ತಾ ಇಲ್ಲ. ಯಾರ ಜೊತೆ ಸ್ನೇಹ ಬೆಳೆಸಬೇಕು, ಯಾರಿಗೆ ಸಲುಗೆ ಕೊಡಬೇಕು ಅಂತ ತಿಳಿಯದೆ ಮಾಡುತ್ತಿರುವ ತಪ್ಪುಗಳು ಅನಾಹುತಕ್ಕೆ ಕಾರಣವಾಗುತ್ತಿವೆ. ಅಂತ ಒಂದು ಸ್ಟ್ರಾಂಗ್ ಸಬ್ಜೆಕ್ಟ್ ಇಟ್ಟುಕೊಂಡು, ಸಾಮಾಜಿಕ ಕಳಕಳಿ ಜೊತೆಗೆ ಮನರಂಜಿಸುವ 100 ಸಿನಿಮಾ ಯಶಸ್ಸಿನ ಹಾದಿಯಲ್ಲಿದೆ.

ನಟ ರಮೇಶ್ ಅರವಿಂದ್ ನಟನೆ ಜೊತೆಗೆ 100 ಸಿನಿಮಾವನ್ನ ನಿರ್ದೇಶನ ಕೂಡ ಮಾಡಿದ್ದಾರೆ. ಪ್ರೇಕ್ಷಕರು ಈ ಸಿನಿಮಾ ಅಪ್ಪಿಕೊಂಡಿದ್ದಾರೆ. ಇದೀಗ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಕೂಡ ಈ ಸಿನಿಮಾವನ್ನ ನೋಡಿದ್ದಾರೆ. ಜೊತೆಗೆ ಇದರಿಂದ ನೀವೂ ಪಾಠ ಕಲಿಯಲೇಬೇಕೆಂದು ಸಲಹೆ ನೀಡಿದ್ದಾರೆ, ಚಿತ್ರತಂಡದ ಕಳಕಳಿಗೂ ಬೆನ್ನು ತಟ್ಟಿದ್ದಾರೆ.

ಸೋಶಿಯಲ್ ಮೀಡಿಯಾ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ಅದಕ್ಕೆ ತಕ್ಕಂತೆ ಸೈಬರ್ ಕ್ರೈಂ ಕೂಡ ಹೆಚ್ಚಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅಪರಿಚಿತರ ಜೊತೆಗಿನ ಗೆಳೆತನ, ಸಲುಗೆ ಒಬ್ಬ ವ್ಯಕ್ತಿಯ ಬದುಕಿಗೆ ಹೇಗೆ ಮುಳುವಾಗುತ್ತದೆ. ಅದರಿಂದ ಅವರ ಕುಟುಂಬದ ಯಾವ ರೀತಿ ಪರಿಣಾಮ ಎದುರಿಸುತ್ತೆ ಎಂಬಿತ್ಯಾದಿ ಅಂಶಗಳನ್ನು ಬಹಳ ಪರಿಣಾಮಕಾರಿಯಾಗಿ ಹೇಳಿರುವ ಸಿನಿಮಾ 100.

ಕುಟುಂಬ ಸಮೇತರಾಗಿ ನೋಡಬಹುದಾದ ಸಂವೇದನಾಶೀಲ ಸಿನಿಮಾ ಇದು. ಸೋಶಿಯಲ್ ಮೀಡಿಯಾ ಬಳಸುವ ಮುನ್ನ ಎಷ್ಟು ಎಚ್ಚರಿಕೆಯಿಂದಿರುಬೇಕು ಎನ್ನುವ ಅಂಶ ಸಿನಿಮಾದಲ್ಲಿದೆ ಎಂದು ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಜೊತೆಗೆ ಇಂತಹದೊಂದು ಸಿನಿಮಾ ನಿರ್ದೇಶನ ಮಾಡಿದ ರಮೇಶ್ ಅರವಿಂದ್ ಹಾಗೂ ನಿರ್ಮಾಣ ಮಾಡಿರುವ ರಮೇಶ್ ರೆಡ್ಡಿಯವರಿಗೂ ತಮ್ಮ ಅಭಿನಂದನೆ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾ, ಸೈಬರ್ ಕ್ರೈಂ ಅನಾಹುತಗಳ ಮೇಲೆ ಸಿನಿಮಾ ಮೂಡಿ ಬಂದಿದ್ದು, ಪ್ರೇಕ್ಷಕರ ಕಣ್ತೆರೆಸುವ ಪ್ರಯತ್ನ ನಡೆದಿದೆ. ಸೂರಜ್ ಪ್ರೊಡಕ್ಷನ್ ಬ್ಯಾನರ್ ನಡಿ ಎಂ ರಮೇಶ್ ರೆಡ್ಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಮೇಶ್ ಅರವಿಂದ್ ಜೊತೆಗೆ ರಚಿತಾ ರಾಮ್ ಹಾಗೂ ಪೂರ್ಣ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಶೋಭರಾಜ್, ರಾಜು ತಾಳಿಕೋಟೆ, ಬೇಬಿ ಸ್ಮಯಾ, ವಿಶ್ವಕರ್ಮ, ಪ್ರಕಾಶ್ ಬೆಳವಾಡಿ, ಮಾಲತಿ ಸುಧೀರ್ ಸೇರಿದಂತೆ ಹಲವರ ತಾರಾಗಣ ಚಿತ್ರದಲ್ಲಿದೆ. ರವಿ ಬಸ್ರೂರು ಸಂಗೀತ, ಸತ್ಯ ಹೆಗಡೆ ಕ್ಯಾಮೆರಾ ಕೈಚಳಕ, ಶ್ರೀನಿವಾಸ್ ಕಲಾಲ್ ಸಂಕಲನ. ಜಾಲಿ ಬಾಸ್ಟಿನ್ ಮತ್ತು ರವಿವರ್ಮ ಸಾಹಸ ನಿರ್ದೇಶನ, ಧನಂಜಯ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

Related posts