Cinisuddi Fresh Cini News 

ಡ್ರಗ್ ಕೇಸ್ : ಸರಿಯಾದ ರೀತಿ ತನಿಖೆ ನಡೆಯುತ್ತಿಲ್ಲ, ಇಂದ್ರಜಿತ್ ಆರೋಪ

ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ತಮ್ಮ ಹುಟ್ಟುಹಬ್ಬವನ್ನು ಸಾರ್ಥಕವಾಗಿ ಆಚರಿಸಿಕೊಂಡರು. ಪ್ರತಿವರ್ಷ ಅಂಧ ಮಕ್ಕಳ ಶಾಲೆಯಲ್ಲಿ, ಸಿದ್ದಗಂಗ ಮಠದಲ್ಲಿ, ಅನಾಥಾಶ್ರಮದಲ್ಲಿ ಅಲ್ಲದೆ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಅವರು, ಈ ಸಲ ಕನ್ನಡ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೆಲವು ಹಿರಿಯ ಕಲಾವಿದರುಗಳಿಗೆ ಗೌರವಿಸುವುದರೊಂದಿಗೆ ಒಂದಷ್ಟು ಆರ್ಥಿಕ ಸಹಾಯ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಗೋಲ್ಡï ಫಿಂಚ್ ಹೋಟೆಲ್‍ನಲ್ಲಿ ನಡೆದ ಈ ಸಮಾರಂಭದಲ್ಲಿ ಹಿರಿಯ ಕಲಾವಿದರಾದ ಉಮೇಶ್, ಬೆಂಗಳೂರು ನಾಗೇಶ್, ಆರ್.ಟಿ. ರಮಾ, ಶೈಲಶ್ರೀ ಸುದರ್ಶನ್‍ರಂಥ ಹಿರಿಯ ಜೀವಗಳಿಗೆ ಸನ್ಮಾನದ ಜೊತೆಗ ಸಹಾಯಹಸ್ತ ಕೂಡ ಚಾಚಿದ್ದಾರೆ.

ಇದೇ ಸಂದರ್ಭದಲ್ಲಿ ಇಂದ್ರಜಿತ್ ಲಂಕೇಶ್ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಡ್ರಗ್ ಮಾಫಿಯಾ ಬಗ್ಗೆ ಒಂದಷ್ಟು ಸ್ಪೋಟಕ ಸತ್ಯಗಳನ್ನು ಸಹ ಬಿಚ್ಚಿಟ್ಟಿದ್ದಾರೆ. ಎರಡು ವಾರಗಳ ಹಿಂದೆ ನಾನು ಹೋಗಿ ಸಿಸಿಬಿಗೆ ಕೊಟ್ಟ ಮಾಹಿತಿ ಪ್ರಕಾರ ಕೆಲಸ ಆಗ್ತಿದೆ.

ಆದರೆ ಇಷ್ಟು ದಿನ ಆಗಿರೋ ಬೆಳವಣಿಗೆ ನನಗೆ ಖುಷಿ ತಂದುಕೊಟ್ಟಿಲ್ಲ. ಪೊಲೀಸರ ಕೈ ಕಟ್ಟಿಹಾಕಿರೋ ಹಾಗೆ ಕೆಲಸ ನಡೀತಿದೆ. ಈ ಕೇಸ್‍ನಲ್ಲಿ ಕೇವಲ ನಟ, ನಟಿಯರಷ್ಟೆ ಅಲ್ಲ, ಕೆಲ ರಾಜಕಾರಣಿಗಳ ಮಕ್ಕಳು ಸಹ ಇದ್ದಾರೆ.

ಇಲ್ಲಿ ಅಕಾರಿಗಳಿಗೆ ರಾಜಕೀಯ ಒತ್ತಡ ತುಂಬಾ ಇದೆ. ಮೂಲ ಅಕ್ಯೂಸ್ಡ್ ವಿಚಾರಣೆ ಇನ್ನೂ ನಡೆದೇ ಇಲ್ಲ, ಇಲ್ಲಿ ವಿಷಯವನ್ನು ಲವ್ ಜಿಹಾದ್ ಹಾಗೆ ಹೀಗೆ ಅಂತ ಪ್ರಕರಣವನ್ನು ಡೈವರ್ಟ್ ಮಾಡೋ ಪ್ರಯತ್ನಗಳು ತುಂಬಾ ನಡೀತಿವೆ, ಸರಿಯಾದ ದಾರಿಯಲ್ಲಿ ತನಿಖೆ ನಡೆಯಬೇಕು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಹಂದಿ ನೀನು, ನಾಯಿ ನೀನು ಅಂತಾ ಅವರು ಹೇಳಿರೋದು ಒಂದೇ ಸಾರಿ. ಆದರೆ, ಅದನ್ನ ಹೇಳಿಸಿಕೊಂಡಿರೋರು ಹತ್ತತ್ತು ಸಾರಿ ಅದನ್ನೇ ಒತ್ತಿ ಹೇಳ್ತಿರೋದು ನಿಜಕ್ಕೂ ಹಾಸ್ಯಾಸ್ಪದ. ಈ ಕೇಸ್ ಬಗ್ಗೆ ವಿರೋಧ ಪಕ್ಷದ ನಾಯಕರು ಕೇಳಬೇಕು. ಆದರೆ ಅವರು ಯಾರೂ ಕೇಳ್ತಿಲ್ಲ. ಹಾಗಾಗಿ, ವಿರೋದ ಪಕ್ಷಗಳ ಮೇಲೂ ನನಗೆ ಡೌಟ್ ಆಗ್ತಿದೆ. ಸರ್ಕಾರದ ಕೆಲ ಪ್ರಭಾವಿ ನಾಯಕರು ತನಿಖಾಕಾರಿಗಳಿಗೆ ಕರೆ ಮಾಡಿ ಪ್ರಭಾವ ಬೀರುತ್ತಿ ದ್ದಾರೆ ಎಂದರೆ ಏನರ್ಥ ಎನ್ನುವುದ ಇಂದ್ರಜಿತ್ ಆರೋಪ.

ಡ್ರಗ್ ಪ್ರಕರಣದಲ್ಲಿ ಸಿಕ್ಕಿರುವ ಮತ್ತೊಬ್ಬ ಆರೋಪಿ ಆದಿತ್ಯ ಆಳ್ವಾರನ್ನು ಇನ್ನೂ ಬಂಸಲಾಗಿಲ್ಲ. ಆತ ರಾಜಕಾರಣಿಯ ಪುತ್ರ ಎಂಬ ಕಾರಣಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಇದರ ಜೊತೆಗೆ, ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ನಿರ್ದೇಶಕರೊಬ್ಬರ ಪುತ್ರನೂ ಸಹ ಈ ಕೇಸ್‍ನಲ್ಲಿ ಭಾಹಿಯಾಗಿದ್ದಾನೆ, ಆತ ಡ್ರಗ್ ಸೇವನೆ ಅಷ್ಟೇ ಅಲ್ಲ, ಪೆಡ್ಲರ್ ಕೂಡ ಆಗಿದ್ದಾನೆ.

ಈಗ ವಿರೋಧ ಪಕ್ಷದವರು ಕೇಳಬೇಕಾದ ಪ್ರಶ್ನೆಗಳನ್ನು ಮಾಧ್ಯಮದವರು ಕೇಳ್ತಿದ್ದಾರೆ. ಡ್ರಗ್ ಮಾಫಿಯಾ ಎನ್ನುವುದು ಸಣ್ಣ ವಿಷಯವಲ್ಲ, ಕರ್ನಾಟಕದಲ್ಲಿ ಯಾವುದೇ ವಿಚಾರಣೆ ಮೂಲದಿಂದ ನಡೆಯುತ್ತಿಲ್ಲ. ಇಲ್ಲಿ ಸಿಬಿಐ ಎಂಟ್ರಿಯಾಗಬೇಕು. ಆಗ ಮಾತ್ರ ಸಾಕಷ್ಟು ವಿಷಯಗಳು ಹೊರಬರುತ್ತವೆ. ಸರಿಯಾದ ರೀತಿಯಲ್ಲಿ ಈ ಪ್ರಕರಣದ ತನಿಖೆ ಆದರೆ ಶವಗಳು ಕೂಡ ಎದ್ದು ಕೂರಲಿವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

Related posts