Cinisuddi Fresh Cini News 

ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಷನ್ ವತಿಯಿಂದ ಸಿನಿ ಕಾರ್ಮಿಕರಿಗೆ ಆಹಾರ ವಿತರಣೆ

ಚಿತ್ರರಂಗದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುವವರಿಗೆ ಸಹಾಯ ಹಸ್ತವನ್ನು ಚಾಚಿದೆ ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಷನ್. ಈ ಸಂಸ್ಥೆಯ ಮುಖ್ಯಸ್ಥ ಸ್ಕೈ ಲೈನ್ ದಿಲೀಪ್ ನೇತೃತ್ವದಲ್ಲಿ ಆಹಾರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ತ್ರೀವಿಧ ದಾಸೋಹಿ ನೆಡೆದಾಡುವ ದೇವರು ಶ್ರೀಶ್ರೀಶ್ರೀ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರ ಜನುಮದಿನದಂದು “ಇಂಡಿಯನ್ ಫಿಲಂ ಮೇಕರ್ಸ್ ಅಶೋಷಿಯೇಷನ್” ವತಿಯಿಂದ ಕನ್ನಡ ಚಲನಚಿತ್ರರಂಗದ ಸಿನಿಕರ್ಮಿಗಳಿಗೆ ಆಹಾರ ಸರಬರಾಜು ಮಾಡಿದ್ದಾರೆ.

“ಮಾರುತಿ ಮೆಡಿಕಲ್” ಮಾಲೀಕರಾದ ಶ್ರೀ ಮಹೇಂದ್ರ ಮನ್ನೋತ್ ಮತ್ತು “ಪಂಖೂರಿ” ಚಿತ್ರದ ನಟ ನಿರ್ಮಾಪಕರಾದ ಶ್ರೀ ಶಶಿಶೇಖರ್ ಮತ್ತು “ನಮ್ಮ ಸೂಪರ್ ಸ್ಟಾರ್” ಪತ್ರಿಕೆಯ ಸಂಪಾದಕರಾದ ಶ್ರೀ ಮಹಮ್ಮದ್ ಅಫ್ಜಲ್ , “ಬೆಂಕಿಯಲ್ಲಿ ಅರಳಿದ ಹೂವು” ಚಿತ್ರದ ನಟ ನಿರ್ಮಾಪಕರಾದ ಶ್ರೀ ವಿಶು ಆಚಾರ್ , ನಿರ್ಮಾಪಕರಾದ ಶ್ರೀಯುತ ಕುಮಾರ್ ಮತ್ತು ಶ್ರಿ ವಾಸವದತ್ತ ಹಾಗೂ ಶ್ರೀಯುತ ರವಿಶಂಕರ್ ಮತ್ತು ಹಲವು ವಿಭಾಗದ ಮುಖ್ಯಸ್ಥರಾದ ಶ್ರೀಯುತ ನಾರಾಯಣ್ ಭಟ್ ಮತ್ತು ವಾಸಂತಿ ನಲಿದಾಗ ಚಿತ್ರದ ನಿರ್ಮಾಪಕರಾದ ಶ್ರೀಯುತ ಜೇನೂಗೂಡು ಶ್ರೀಧರ್ ಅವರುಗಳು ಅಕ್ಕಿ , ಬೇಳೆ, ಸಕ್ಕರೆ, ಸಾಂಬರ್ ಪೌಡರ್ ,ಅಡುಗೆ ಎಣ್ಣೆ ನೀಡಿದ್ದಾರೆ.

ಹಾಗೂ ವಿಶೇಷವಾಗಿ ನವ ನಿರ್ಮಾಣ ಸೇನೆಯ ರಾಜ್ಯಾದ್ಯಕ್ಷರಾದ ಶ್ರೀಯುತ ಯತಿರಾಜ್ ನಾಯ್ಡ , ಆರಾಧ್ಯ ದೈವ ಶ್ರೀ ಮುತ್ತುರಾಜ್ ಬಳಗದ ಅದ್ಯಕ್ಷ ಬೆಂ.ರಾ.ನವೀನ್ ಕುಮಾರ್ ಸಹಕಾರ ಸಹಾಯಹಸ್ತದೊಂದಿಗೆ ಸಿನಿಮಾದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಹಾಯ ಹಸ್ತವನ್ನು ಚಾಚಿದ್ದಾರೆ.

ನಿಜವಾಗಿಯೂ ಇವರ ಕಾರ್ಯವನ್ನು ಮೆಚ್ಚಲೇಬೇಕು, ಅದಲ್ಲದೆ ನೊಂದವರಿಗೆ ಪೊಲೀಸ್ ಅನುಮತಿಯನ್ನು ಪಡೆದು ವಾಹನದ ಮೂಲಕ ಅವರಿಗೆ ಆಹಾರ ಸರಬರಾಜು ಮಾಡಲು ಮುಂದಾಗಿದೆ. ಈ ಸಂಸ್ಥೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯವನ್ನು ಮಾಡಲು ಸಿದ್ಧವಾಗಿದೆ.

Share This With Your Friends

Related posts