Cinisuddi Fresh Cini News 

ಸಿನಿ ತಾರೆಯರಿಂದ ಇಂಡಿಯನ್ ಬೌಲಿಂಗ್‌ ಲೀಗ್

ಕರೋನಾ ಎಂಬ ಮಹಾಮಾರಿ ಇಡೀ ಚಿತ್ರರಂಗವನ್ನೇ ತತ್ತರಿಸುವಂತೆ ಮಾಡಿದೆ. ತೀವೃವಾದ ಸಂಕಷ್ಟಕ್ಕೆ ಗುರಿಯಾಗಿರುವ ಚಿತ್ರರಂಗಕ್ಕೆ ಸಹಾಯಹಸ್ತ ಚಾಚಲು ಕಮರ್ ಫಿಲಂ ಫ್ಯಾಕ್ಟರಿ ಮುಂದಾಗಿದೆ. ಇದಕ್ಕಾಗಿ ಇಂಡಿಯನ್ ಬೌಲಿಂಗ್‌ಲೀಗ್ ಎನ್ನುವ ಬೌಲಿಂಗ್ ಪಂದ್ಯಾವಳಿಯನ್ನು ಆಯೋಜಿಸಿದೆ.

ಇದರ ನೇತೃತ್ವವನ್ನು ಕಮರ್ ಫಿಲಂ ಫ್ಯಾಕ್ಟರಿಯ ಕಮರ್ ಅವರು ವಹಿಸಿಕೊಂಡಿದ್ದಾರೆ. ಚಿತ್ರನಿರ್ಮಾಣ ವಿತರಣೆಯ ಜೊತೆ ಕ್ರೀಡಾ ಚಟುವಟಿಕೆಗಳಲ್ಲೂ ತೊಡಗಿಕೊಂಡಿರುವ ಕಮರ್ ಅವರು ಕರೋನಾ ಆಪತ್‌ಕಾಲದಲ್ಲಿ ಕಲಾವಿದರ, ತಂತ್ರಜ್ಞರ ನೆರವಿಗೆ ಮುಂದಾಗಿದ್ದಾರೆ.ಮೂರು ವರ್ಷಗಳ ಹಿಂದೆ ನಮ್ಮ ನೆಲದ ಕನ್ನಡ ಚಲನಚಿತ್ರ ತಾರೆಗಳನ್ನೇ ಸೇರಿಸಿಕೊಂಡು ಬಾಕ್ಸ್ ಕ್ರಿಕೆಟ್ ಲೀಗ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದ್ದರು.

ಸುಮಾರು 150 ಸಿನಿಮಾ ಕಲಾವಿದರು, ತಂತ್ರಜ್ಞರು ಸೇರಿ ಆಡಿದ ಬಿಸಿಎಲ್ ಯಶಸ್ವಿಯಾಗಿತ್ತು. ಅದೇರೀತಿ ಈಗ ಇಂಡಿಯನ್ ಬೌಲಿಂಗ್ ಲೀಗ್ ಪಂದ್ಯಾವಳಿಯನ್ನು ನಡೆಸಲಾಗುತ್ತಿದ್ದು, ಇಲ್ಲಿ ಒಟ್ಟು 80 ಜನ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ.

ಇದರಲ್ಲಿ 40 ಜನ ಪುರುಷರು, 40 ಜನ ಮಹಿಳಾ ಕಲಾವಿದರು ಭಾಗವಹಿಸಲಿದ್ದಾರೆ. ಇಲ್ಲಿ ಒಟ್ಟು ಹತ್ತು ಪಂದ್ಯಾವಳಿಗಳು ನಡೆಯಲಿದ್ದು, ಪ್ರತಿ ಟೀಮ್‌ನಲ್ಲಿ 4 ಜನ ಪುರುಷರು ಹಾಗೂ 4 ಜನ ಮಹಿಳೆಯರು ಸೇರಿ ಒಟ್ಟು ಎಂಟು ಜನರಿರುತ್ತಾರೆ.

ಡಿಸೆಂಬರ್ ಮೊದಲವಾರ ಈ ಬೌಲಿಂಗ್‌ಲೀಗ್ ಪಂದ್ಯಾವಳಿಗಳು ನಡೆಯಲಿದ್ದು, ಇದಕ್ಕಾಗಿ ನವೆಂಬರ್ ಅಂತ್ಯದಲ್ಲಿ ರಿಹರ್ಸಲ್ ನಡೆಯಲಿದೆ. ಇಟಿಏ ಮಾಲ್‌ನ ಫನ್ ಫ್ಯಾಕ್ಟರಿ ಆವರಣದಲ್ಲಿ ಈ ಪಂದ್ಯಾವಳಿಗಳನ್ನು ಆಯೋಜಸಲಾಗಿದೆ. ಕನ್ನಡ ಚಿತ್ರರಂಗದ ಕಲಾವಿದರ ನಡುವೆ ನಡೆಯಲಿರುವ ರೋಚಕವಾದ ಪಂದ್ಯಾವಳಿಗಳನ್ನು ವೀಕ್ಷಿಸುವಂಥ ಸದವಕಾಶ ಕನ್ನಡ ಸಿನಿಪ್ರೇಮಿಗಳಿಗೆ ಲಭಿಸಲಿದೆ ಈ ಪಂದ್ಯಾವಳಿಗಳ ಬಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳಲಾಯಿತು.

ಕಲಾವಿದರಾದ ಶ್ರೀಮತಿ ಪ್ರಿಯಾಂಕ ಉಪೇಂದ್ರ, ದೀಪಿಕಾದಾಸ್, ಕೊಮಿಕಾ ಸಿನ್ಹಾ, ತರುಣ್ ಚಂದ್ರ, ನಿರ್ಮಾಪಕ ಕಮರ್ ಸೇರಿದಂತೆ ಹಲವಾರು ಕಲಾವಿದರು ಇಲ್ಲಿ ಉಪಸ್ಥಿತರಿದ್ದು ಈ ಬೌಲಿಗ್ ಲೀಗ್‌ನ ಕನ್ನಡಕ್ಕೆ ರೀಮೇಕ್ ತೆಲುಗಿನ ಎವುರು ಚಿತ್ರ
ತೆಲುಗಿನಲ್ಲಿ ಯಶಸ್ವಿಯಾದ ಮತ್ತೊಂದು ಚಿತ್ರ ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ. ಎವುರು ಚಿತ್ರದ ರೀಮೇಕ್ ಆಗಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಅರಮನೆ ಮೈದಾನದ ಗಾಯತ್ರಿ ವಿಹಾರ್‍ನಲ್ಲಿ ನೆರವೇರಿತು.

ಈಗಾಗಲೇ ತೆಲುಗಿನಲ್ಲಿ 2 ಸಿನಿಮಾ ನಿರ್ದೇಶಿಸಿರುವ ಅಶೋಕ್‍ತೇಜ ಈ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ನಿರ್ದೇಶಕ ಯೋಗರಾಜ ಭಟ್ಟರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಹರಿಪ್ರಿಯಾ, ದಿಗಂತ್ ಹಾಗೂ ವಸಿಷ್ಠಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ತನಿಖೆಯ ವಿವಿಧ ಹಂತಗಳೇ ಪ್ರಮುಖ ಕಥಾವಸ್ತು. 2019ರಲ್ಲಿ ತೆರೆಕಂಡಿದ್ದ ಎವುರು ಚಿತ್ರದಲ್ಲಿ ರೆಜಿನಾ ಕಸ್ಸಂದ್ರ ಮತ್ತು ಅದ್ವಿಶೇಷ್ ಪ್ರಮುಖಪಾತ್ರ ನಿರ್ವಹಿಸಿದ್ದರು.

ತೆಲುಗಿನಲ್ಲಿ ಮಧುಮೋಹನ್ ನಿರ್ದೇಶನ ಮಾಡಿದ್ದರು. ಈಗ ಅಶೋಕ್ ತೇಜ ಕನ್ನಡದಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕಿ ರೆಜಿನಾ ಅವರ ಪಾತ್ರವನ್ನು ಹರಿಪ್ರಿಯಾ ಹಾಗೂ ಅದ್ವಿಶೇಷ್ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಳ್ಳಲಿದ್ದಾರೆ.

ಇವರ ಜೊತೆಗೆ ವಸಿಷ್ಠಸಿಂಹ ಒಂದು ವಿಶೇಷ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಹೈದ್ರಾಬಾದ್‍ನ ಉದ್ಯಮಿಗಳಾದ ರಾಜೇಶ್ ಅಗರವಾಲ್ ಹಾಗೂ ಡಿ.ಜಯಪ್ರಕಾಶ್‍ರಾವ್ ಅವರು ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಕನ್ನಡದಲ್ಲಿ ಪ್ರೊಡಕ್ಷನ್ ನಂ. 1 ಹೆಸರಿನಲ್ಲಿ ಚಿತ್ರವನ್ನು ಆರಂಭಿಸಲಾಗಿದೆ.

ಎವರು ಸಿನಿಮಾಗೆ ಸ್ಪ್ಯಾನಿಶ್ ಭಾಷೆಯಲ್ಲಿ ಪ್ರಕಟಗೊಂಡಿದ್ದ ಕಾದಂಬರಿಯೊಂದು ಪ್ರೇರಣೆಯಾಗಿತ್ತು. ನಂತರ ಆ ಚಿತ್ರ ಹಿಂದಿಯಲ್ಲೂ ಸಹ ನಿರ್ಮಾಣವಾಯಿತು. ಈಗ ಕನ್ನಡ ಭಾಷೆಗೆ ಬಂದಿದೆ. ಇಂಗ್ಲೀಷ್ ಭಾಷೆಯಲ್ಲಿ ದಿ ಇನ್ವಿಸಿಬಲ್‍ಗೆಸ್ಟ್ ಎಂಬ ಹೆಸರಿನಲ್ಲಿ ಈ ಚಿತ್ರ ತಯಾರಾಗಿತ್ತು.

ತನ್ನ ತಂದೆಯನ್ನು ಕೊಂದ ಕೊಲೆಗಾರರನ್ನು ರೋಗಿಯಾದ ಮಗನೇ ಕಂಡುಹಿಡಿಯುವುದು ಈ ಚಿತ್ರದ ಒನ್‍ಲೈನ್ ಕಥೆ. ಇಡೀ ಚಿತ್ರದ ಕಥೆ ಕೊಲೆಯೊಂದರ ಸುತ್ತ ಸುತ್ತುತ್ತದೆ. ಇಲ್ಲಿ ಕೊಲೆಗಾರನನ್ನು ಪತ್ತೆ ಹಚ್ಚುವುದೇ ಒಂದು ಕುತೂಹಲಕರ ಜರ್ನಿ ಆಗಿದೆ. ಈ ಸಂದರ್ಬದಲ್ಲಿ ದಿಗಂತ್ ಮಾತನಾಡಿ ಈ ಚಿತ್ರದಲ್ಲಿ ನನ್ನ ಪಾತ್ರ ಎರಡು ಶೇಡ್ಸ್‍ನಲ್ಲಿ ಮೂಡಿಬರಲಿದೆ.

ಹೇಮಂತ್ ಅವರು ನನಗೆ ನಿರ್ಮಾಪಕ ಅಗರವಾಲ್‍ರನ್ನು ಪರಿಚಯಿಸಿದರು. ಈ ಚಿತ್ರ ಯಾವುದೇ ಭಾಷೆಯಲ್ಲಿ ನಿರ್ಮಾಣವಾದರೂ ಅಲ್ಲಿ ಯಶಸ್ವಿಯಾಗಿದೆ. ಕನ್ನಡಕ್ಕೆ ಇದೊಂದು ಹೊಸ ರೀತಿಯ ಚಿತ್ರವಾಗಲಿದೆ ಎಂದು ಹೇಳಿದರು. ನಂತರ ನಾಯಕಿ ಹರಿಪ್ರಿಯಾ ಮಾತನಾಡಿ ದಿಗಂತ್ ಜೊತೆ ಈ ಹಿಂದೆಯೇ ನಾನು ಆ್ಯಕ್ಟ್ ಮಾಡಬೇಕಾಗಿತ್ತು. ಆಗಿರಲಿಲ್ಲ, ಅದೀಗ ಕೈಗೂಡಿದೆ.

ತುಂಬಾನೇ ಟ್ವಿಸ್ಟ್ ಅಂಡ್ ಟರ್ನ ಇರುವಂಥ ಇಂಟರೆಸ್ಟಿಂಗ್ ಕಥೆ ಈ ಚಿತ್ರದಲ್ಲಿದೆ. ಚಿತ್ರದ ಕುರಿತು ನಾನೂ ಸಹ ತುಂಬಾ ಕುತೂಹಲದಿಂದಿದ್ದೇನೆ ಎಂದು ಹೇಳಿದರು. ಕೇವಲ ಎರಡು ಹಾಡುಗಳನ್ನು ಮಾತ್ರ ಹೊಂದಿರುವ ಈ ಚಿತ್ರಕ್ಕೆ ಶ್ರೀಚರಣ್ ಅವರ ಸಂಗೀತ ನಿರ್ದೇಶನವಿದೆ.

ಯೋಗಿ ಚಿತ್ರದ ಕ್ಯಾಮೆರಾವರ್ಕ್ ನಿಭಾಯಿಸುತ್ತಿದ್ದಾರೆ, ಸುಬ್ರಮಣ್ಯ ಹಾಗೂ ಸುಕೃತ್ ಚಿತ್ರಕ್ಕೆ ಸಂಭಷಣೆಗಳನ್ನು ರಚಿಸಿದ್ದಾರೆ. ಅವಿನಾಶ್, ಸ್ವಾತಿ, ಮಂಜು ಪಾವಗಡ, ಗೌತಂ ಚಿತ್ರದ ಇತರೆ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.ರೂಪುರೇಷೆಗಳ ಬಗ್ಗೆ ವಿವರಿಸಿದರು.

Related posts