Cinisuddi Fresh Cini News 

“ಇದು ಆಕಾಶವಾಣಿ ಬೆಂಗಳೂರು ನಿಲಯ” ಚಿತ್ರದ ಹಾಡುಗಳ ಧ್ವನಿಮುದ್ರಣ

ಕಮಲಾನಂದ ಚಿತ್ರಾಲಯ ಸಂಸ್ಥೆಯಲ್ಲಿ ಶಿವಾನಂದಪ್ಪ ಬಳ್ಳಾರಿ ಅವರು ನಿರ್ಮಿಸುತ್ತಿರುವ ಇದು ಆಕಾಶವಾಣಿ ಬೆಂಗಳೂರು ನಿಲಯ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಇತ್ತೀಚೆಗೆ ನಡೆಯಿತು. ಚಿತ್ರೀಕರಣಕ್ಕೆ ಅನುಮತಿ ದೊರೆತ ನಂತರ ಚಿತ್ರೀಕರಣ ನಡೆಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಈ ಹಿಂದೆ ನಾವೇ ಭಾಗ್ಯವಂತರು ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಎಂ. ಹರಿಕೃಷ್ಣ ಅವರ ನಿರ್ದೇಶನದ ಎರಡನೇ ಚಿತ್ರವಿದು. ಈ ಚಿತ್ರಕ್ಕೆ ಸುಮ್ ಸುಮ್ನೆ ವಿಜಯಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು ಎ.ಟ.ರವೀಶ್ ಅವರ ಸಂಗೀತ ಸಂಯೋಜನೆ, ಆಂಟೋನಿ ಎಂ. ಅವರ ಸಾಹಿತ್ಯ, ಪ್ರವೀಣ್ ಶೆಟ್ಟಿ ಅವರ ಛಾಯಾಗ್ರಹಣ, ಪವನ್‍ಗೌಡ ಅವರ ಸಂಕಲನ, ಕಂಬಿರಾಜು ನೃತ್ಯನಿರ್ದೇಶನ, ಆರ್.ಪ್ರಭಾಕರ್ ಅವರ ಕಲಾನಿರ್ದೇಶನವಿದೆ.

ವಿನೋದ್ ಪಾಟೀಲ್, ನಿಖಿತ ಸ್ವಾಮಿ, ಎಸ್. ನಾರಾಯಣಸ್ವಾಮಿ, ದಿವ್ಯಶ್ರೀ(ಕಾಮಿಡಿ ಕಿಲಾಡಿಗಳು), ವಿಲಾಸ್‍ಗೌಡ ಮುಂತಾದವರ ತಾರಾಬಳಗವಿದೆ. ಹಾರರ್, ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು ಹಾಗೂ ನೊಣವಿನಕೆರೆ ಸುತ್ತಮುತ್ತ ನಡೆಸುವ ಯೋಜನೆಯಿದೆ.

Related posts