Cinisuddi Fresh Cini News 

ಮೇ ತಿಂಗಳಲ್ಲಿ ಐ ಲವ್ ಯು’ ಹೇಳಲಿದ್ದಾರೆ ಉಪ್ಪಿ..!

ಆರ್.ಚಂದ್ರು ಅವರ ನಿರ್ದೇಶನದಲ್ಲಿ ಸೂಪರ್‍ಸ್ಟಾರ್ ಉಪೇಂದ್ರ ಅವರು ನಾಯಕರಾಗಿ ನಟಿಸಿರುವಐ ಲವ್ ಯು` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರೀಕರಣ ನಂತರದ ಚಟುವಟಿಕೆಗಳು ಕೊನೆಯ ಹಂತದಲ್ಲಿದೆ. ಚಿತ್ರ ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

ಲೋಕಸಭಾ ಚುನಾವಣೆ ಸಮಯವಾಗಿರುವುದರಿಂದ ಉಪೇಂದ್ರ ಅವರು ಪ್ರಜಾಕೀಯ ಪಕ್ಷದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ ಎಂದು ತಿಳಿಸಿರುವ ನಿರ್ದೇಶಕರು ಈಗಾಗಲ್ಲೇ ಬಿಡುಗಡೆಯಾಗಿರುವ ಚಿತ್ರದ ಟ್ರೆಲರ್ ಹಾಗೂ ಹಾಡುಗಳು ಜನಮನಸೂರೆಗೊಂಡಿದೆ.

ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಚನದಲ್ಲಿ ಆರ್.ಚಂದ್ರು ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಡಾ||ಕಿರಣ್ ಸಂಗೀತ ನೀಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ದೀಪು

.ಎಸ್.ಕುಮಾರ್ ಸಂಕಲನ, ವಿನೋದ್, ಗಣೇಶ್ ಸಾಹಸ ನಿರ್ದೇಶನ, ಚಿನ್ನಿಪ್ರಕಾಶ್, ಶಂಕರ್, ಧನುಕುಮಾರ್ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ರಚಿತಾರಾಂ, ಸೋನು ಗೌಡ, ಬ್ರಹ್ಮಾನಂದಂ, ಜೈಜಗದೀಶ್, ಹೊನ್ನವಳ್ಳಿ ಕೃಷ್ಣ ಮುಂತಾದವರಿದ್ದಾರೆ.

Share This With Your Friends

Related posts