Cinisuddi Fresh Cini News 

ದಿಗಂತ್ ಅಭಿನಯಿಸುತ್ತಿರುವ “ಹುಟ್ಟುಹಬ್ಬದ ಶುಭಾಶಯಗಳು” ಚಿತ್ರಕ್ಕೆ ಚಾಲನೆ.

ಬನಶಂಕರಿಯಲ್ಲಿರುವ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನ ಅಡಿಯಲ್ಲಿ ತಯಾರಾಗುತ್ತಿರುವ ಹೊಸ ಚಿತ್ರ “ಹುಟ್ಟು ಹಬ್ಬದ ಶುಭಾಶಯಗಳು” ಮುಹೂರ್ತ ಆಚರಿಸಿಕೊಂಡಿತು.

ದಿಗಂತ್ ನಾಯಕನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಟಿ. ಆರ್. ಚಂದ್ರಶೇಖರ್ ಅವರು ಬಂಡವಾಳ ಹೂಡುತ್ತಿದ್ದು, ನಾಗರಾಜ್ ಬೇತೂರ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ನಾಡೋಜ ಬಾಳಪ್ಪ ಏಣಗಿ ರವರ ಮೊಮ್ಮಗ, ಸುಪ್ರೀಂ ಕೋರ್ಟ್ ವಕೀಲರಾದ ಸಂಕೇತ್ ಏಣಗಿರವರು ಕ್ಲಾಪ್ ಮಾಡಿದರೆ, ಸಿ. ನಂದಕಿಶೋರ್ ರವರು ಕ್ಯಾಮರ ಚಾಲನೆ ಮಾಡಿದರು,

ನಿರ್ಮಾಪಕರು ಹಾಗೂ ವಿತರಕರಾದ ಬಿ.ಕೆ. ಗಂಗಾಧರ್, ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ. ಶೆಟ್ಟಿ, ಮಣಿಕಾಂತ್ ಕದ್ರಿ ಮತ್ತು ನಟ ನಿರ್ದೇಶಕ ಸುಜಯ್ ಶಾಸ್ತ್ರೀ ಹಾಗೂ ಇನ್ನೂ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.

ಹಾಸ್ಯ ಮಿಶ್ರಿತ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬಹುತೇಕ ಪಾತ್ರಗಳ ಆಯ್ಕೆ ಪೂರ್ಣಗೊಂಡಿದ್ದು ಮಿಕ್ಕ ಕೆಲವು ಮುಖ್ಯ ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು ಇದೇ ಮೇ 6 ರಿಂದ ಮೊದಲ ಹಂತದ ಚಿತ್ರೀಕರಣ ಶುರು ಆಗಿ ಎರಡನೆ ಹಂತದ ಚಿತ್ರೀಕರಣ ಜೂನ್ 15ಕ್ಕೆ ಕೊನೆಗೊಳ್ಳುತ್ತದೆ.

ಮುಖ್ಯ ಭೂಮಿಕೆಯಲ್ಲಿ ದಿಗಂತ್, ಕವಿತಾ ಗೌಡ, ರತನ್ ರಾಮ್, ಕಾಮಿಡಿ ಕಿಲಾಡಿಗಳು ಸೀಸನ್ 2 ಖ್ಯಾತಿಯ ಸೂರಜ್, ಮದೆನೂರ್ ಮನು, ವಾಣಿಶ್ರೀ, ಸೂರ್ಯ ಕುಂದಾಪುರ ಮತ್ತಿತರು ನಟಿಸುತ್ತಿದ್ದಾರೆ.

ತಾಂತ್ರಿಕ ವರ್ಗದಲ್ಲಿ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ, ಶ್ರೀಕಾಂತ್ ಸರಾಫ಼್ ಸಂಕಲನ, ಬಾಲು ಕುಮುಟ ನಿರ್ಮಾಣ ನಿರ್ವಹಣೆ, ದಯಾನಂದ್ ಭದ್ರಾವತಿ ವಸ್ತ್ರಾಲಂಕಾರ, ಭೈರಣ್ಣ ವರ್ಣಾಲಂಕಾರ ಮಾಡುತ್ತಿದ್ದು ನಿರ್ದೇಶನ ತಂಡದಲ್ಲಿ ರಜತ್ ಸೂರ್ಯ, ಓಂ ರಘು, ನಂದನ್ ಟೇಲ್ಕರ್, ನರೇಂದ್ರ ಬಾಬು ಸಾಥ್ ನೀಡುತ್ತಿದ್ದಾರೆ.

Share This With Your Friends

Related posts