Cinisuddi Fresh Cini News 

“ಹುಟ್ಟು ಹಬ್ಬದ ಶುಭಾಶಯಗಳು” ಚಿತ್ರದಲ್ಲಿ ದಿಗಂತ್…

ಇತ್ತೀಚಿಗೆ ಬರುತ್ತಿರುವ ಬಹುತೇಕ ಚಿತ್ರಗಳು ತನ್ನ ಶೀರ್ಷಿಕೆಯಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಆ ನಿಟ್ಟಿನಲ್ಲಿ ಕ್ರಿಸ್ಟಲ್ ಪಾರ್ಕ್ ಸಿನಿಮಾ ಮೂಲಕ ಟಿ. ಆರ್. ಚಂದ್ರಶೇಖರ್ ನಿರ್ಮಾಣದಲ್ಲಿ “ಹುಟ್ಟು ಹಬ್ಬದ ಶುಭಾಶಯಗಳು” ಚಿತ್ರ ಮುಂದಿನ ತಿಂಗಳು ಚಾಲನೆ ಪಡೆಯಲಿದೆ.

ಮೊದಲ ಬಾರಿಗೆ ಕಾಮಿಡಿ -ಥ್ರಿಲ್ಲರ್ ಚಿತ್ರವೊಂದರಲ್ಲಿ ದೂದ್ ಪೇಡ ದಿಗಂತ್ ಅಭಿನಯಿಸುತ್ತಿದ್ದಾರೆ. ಈ ವಿಭಿನ್ನ ಚಿತ್ರಕ್ಕೆ ಒಂದು ಮೊಟ್ಟೆಯ ಕತೆ ಖ್ಯಾತಿಯ ಮಿದುನ್ ಮುಕುಂದನ್ ಅವರ ಸಂಗೀತ ಹಾಗೂ ಅಭಿಲಾಷ್ ಕಲ್ಲತ್ತಿ ಅವರ ಛಾಯಾಗ್ರಹಣ ಇರಲಿದೆ.

ಖಾಸಾಗಿ ಕಂಪನಿ ಒಂದರಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹಾಗೂ ನಿರ್ದೇಶಕ ಸಿಂಪಲ್ ಸುನಿ ಅವರ ಜೊತೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ನಾಗರಾಜ್ ಬೆತೂರ್ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ಬಹಳಷ್ಟು ಯುವ ಪ್ರತಿಭೆಗಳಿಗೆ ಕ್ರಿಸ್ಟಲ್ ಪಾರ್ಕ್ ಸಿನಿಮಾ ಸಂಸ್ಥೆಯು ಚಿತ್ರ ನಿರ್ದೇಶನ , ನಟನೆಗೆ ಅವಕಾಶ ನೀಡುತ್ತಿರುವುದು ಚಿತ್ರೋದ್ಯಮದ ಬೆಳವಣಿಗೆ ಸಹಕಾರಿಯಾಗಿದೆ ಎನ್ನಬಹುದು.

ಸಾಲು ಸಾಲಾಗಿ ಸದಭಿರುಚಿಯ ಚಿತ್ರಗಳನ್ನು ನೀಡಲು ನಮ್ಮ ಸಂಸ್ಥೆಯ ಮುಂದಾಗಲಿದೆ ಎನ್ನುತ್ತಾರೆ ನಿರ್ಮಾಪಕ ಟಿ. ಆರ್. ಚಂದ್ರಶೇಖರ್. ಹುಟ್ಟು ಹಬ್ಬದ ಶುಭಾಶಯಗಳು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.

Share This With Your Friends

Related posts