Bollywood Cinisuddi Fresh Cini News 

100 ಕೋಟಿ ಅಪಾರ್ಟ್‍ಮೆಂಟ್ ಖರೀದಿಸಿದ ಹೃತಿಕ್

ಬಹುತೇಕ ನಟ, ನಟಿಯರಿಗೆ ಐಷಾರಾಮಿ ಅಪಾರ್ಟ್‍ಮೆಂಟ್ ಖರೀದಿಸಬೇಕು, ದುಬಾರಿ ಕಾರುಗಳನ್ನು ಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಬಹುತೇಕ ಸ್ಟಾರ್ ಕಲಾವಿದರು ಇದಕ್ಕಾಗಿ ತಮ್ಮ ವರಮಾನದ ಸಾಕಷ್ಟು ಹಣವನ್ನು ವ್ಯಯಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಬಾಲಿವುಡ್ ನಟ ಹಾಗೂ ಉದ್ಯಮಿ ಹೃತಿಕ್ ರೋಷನ್ ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ 100 ಕೋಟಿ ಮೊತ್ತದ ಮೂವರು ಫ್ಲಾಟ್ ಗಳನ್ನು ಖರೀದಿಸುವ ಮೂಲಕ ಎಲ್ಲರ ಚಿತ್ತ ಕೆರಳಿಸಿದ್ದಾರೆ.

ಎಚ್‍ಆರ್‍ಎಕ್ಸ್ ಹೆಸರಿನ ಫ್ಯಾಷನ್ ಬ್ರ್ಯಾಂಡ್ ಮಾಲೀಕರೂ ಆಗಿರುವ ನಟ ಹೃತಿಕ್‍ರೋಷನ್ ಫ್ಯಾಷನ್ ಲೋಕದಲ್ಲಿ ತಮ್ಮ ಬ್ರ್ಯಾಂಡ್‍ಗೆ ಅಸ್ತಿತ್ವ ಕಲ್ಪಿಸುತ್ತಿದ್ದಾರೆ. ಈ ನಡುವೆಯೇ ರಿಯಲ್ ಎಸ್ಟೇಟ್‍ನತ್ತ ಮುಖ ಮಾಡಿರುವ ಹೃತಿಕ್ ರೋಷನ್ ಬಾಲಿವುಡ್‍ನ ಸ್ಟಾರ್ ನಟರುಗಳು ಖರೀದಿಸಿರುವಂತೆ ಜೂಹು ಏರಿಯಾದಲ್ಲಿ ಭಾರೀ ಮೊತ್ತದ ಆಸ್ತಿ ಖರೀದಿಸಿದ್ದಾರೆ.

ಅದಕ್ಕಾಗೂ ಅವರು ವ್ಯಹಿಸಿರುವುದು ಬರೋಬ್ಬರಿ 100 ಕೋಟಿ! ರೋಶನ್ ಅಪಾರ್ಟ್‍ಮೆಂಟ್‍ನೊಂದಿಗೆ ಪೆಂಟ್‍ಹೌಸ್ ಒಂದನ್ನೂ ಖರೀದಿಸಿರುವ ಹೃತಿಕ್, ಅಲ್ಲಿ ತಮ್ಮ ಕುಟುಂಬಕ್ಕಾಗಿ ಪ್ರತ್ಯೇಕ ಲಿï್ಟ , 10 ವಾಹನಗಳನ್ನು ಪಾರ್ಕಿಂಗ್ ಮಾಡಲು ಸ್ಥಳವನ್ನು ನಿಗದಿಪಡಿಸಿಕೊಂಡಿದ್ದಾರೆ.

ಹೃತಿಕ್ ರೋಷನ್ ಜೂಹು-ವಾರ್‍ಸೋವಾದಲ್ಲಿ ಖರೀದಿಸಿರುವ 14,15,16ನೇ ಫ್ಲಾಟ್ ಗಳ ಪೈಕಿ 14 ಮತ್ತು 15ನೇ ಫ್ಲಾಟ್ ಗಳನ್ನು ಒಗ್ಗೂಡಿಸಿ ಗಗನ ಚುಂಬಿಸುವ ರೀತಿಯಲ್ಲಿ ಕಟ್ಟಡವನ್ನು ಪರಿವರ್ತಿಸಿಕೊಂಡಿದ್ದಾರೆ.

ಹೃತಿಕ್‍ರ ಮಾಜಿ ಪತ್ನಿ ಸುಸೈನ್‍ಖಾನ್ ಸ್ವತಃ ಇಂಟಿರಿಯಲ್ ಡಿಸೈನರ್‍ಗಳಾಗಿರುವುದರಿಂದ ಅದ್ಧೂರಿ ಒಳಾಂಗಣ ವಿನ್ಯಾಸ, ಸೀ ವ್ಯೂ ಅನ್ನು ಅಪಾರ್ಟ್‍ಮೆಂಟ್‍ನಲ್ಲಿ ಅಳವಡಿಸಿದ್ದಾರೆ. ಹೃತಿಕ್‍ರದ್ದು ತುಂಬು ಕುಟುಂಬ. ಅವರು ಇದುವರೆಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಅದಕ್ಕಾಗಿ ಪ್ರತಿ ತಿಂಗಳು 8 ಲಕ್ಷ ರೂ. ಬಾಡಿಗೆ ಕಟ್ಟುತ್ತಿದ್ದರು. ಆದರೆ ಈಗ ಹೃತಿಕ್ ರೋಷನ್ ಬೃಹತ್ ಅಪಾರ್ಟ್‍ಮೆಂಟ್‍ಗಳನ್ನು ಖರೀದಿಸಿ ಅದಕ್ಕೆ ಆಧುನಿಕ ಸ್ಪರ್ಶ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Related posts