Cinisuddi Fresh Cini News 

“ಹೀರೋ” ನೋಡೋದಿಕ್ಕೆ ನೀವ್ ರೆಡಿನಾ…?

ರಿಷಬ್ ಶೆಟ್ಟಿ ಸಿನಿಮಾಗಳು ಅಂದ್ರೇನೆ ಹಾಗೇ.. ಏನೇ ಮಾಡಿದ್ರು ನಾವು ಡಿಫರೆಂಟ್ ಗುರು ಅಂತಾ ಫ್ರೋವ್ ಮಾಡುವ ನಿರ್ದೇಶಕ, ನಟ ಕಂ ನಿರ್ಮಾಪಕ. ಡೈರೆಕ್ಷನ್ ಕ್ಯಾಪ್ ತೊಟ್ಟು ಗಾಂಧಿನಗರದ ಅಖಾಡಕ್ಕಿಳಿದ ಶೆಟ್ರು‌‌‌ ಮೊದಲ ಸಿನಿಮಾದಲ್ಲಿಯೇ ಗೆಲುವಿನ ನಗೆ ಬೀರಿದ್ರು. ಅದ್ಭುತ ಸಿನಿಮಾ ಡೈರೆಕ್ಷನ್ ಮಾಡಿ ಸೈ ಎನಿಸಿಕೊಂಡ್ರು. ನಿರ್ದೇಶಕನಾಗಿ ಮಿಂಚಿದ್ದ ರಿಷಬ್ ಗೆ ಹೀರೋ ಆಗುವ ಚಾನ್ಸ್ ಸಿಕ್ತು. ಬೆಲ್ ಬಾಟಂ ಸಿನಿಮಾ ಮೂಲಕ ನಾಯಕ ನಟ ಪಟ್ಟ ಪಡೆದು, ತಾವೊಬ್ಬ ಅದ್ಭುತ ನಟ ಅನ್ನೋವುದನ್ನು ಫ್ರೋವ್ ಮಾಡಿದ್ರು. ಇದೀಗ ಮತ್ತೊಮ್ಮೆ “ಹೀರೋ” ಸಿನಿಮಾದ ಮೂಲಕ ತೆರೆಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಫಸ್ಟ್ ಲುಕ್, ಟೀಸರ್ ಹಾಗೂ ಟ್ರೇಲರ್ ಹೀಗೆ ಪ್ರತಿಹಂತದಲ್ಲಿಯೂ ಬೇಜಾನ್ ಹೋಪ್ ಕ್ರಿಯೇಟ್ ಮಾಡಿರುವ ರಿಷಬ್ ಹೀರೋ ಸಿನಿಮಾ ಮುಂದಿನ ತಿಂಗಳು ಅಂದ್ರೆ ಮಾರ್ಚ್ 5ರಂದು ಥಿಯೇಟರ್ ಅಂಗಳಕ್ಕೆ ಬರ್ತಿದ್ದು, ಸಿನಿರಸಿಕರನ್ನು ಶೆಟ್ರು ಸಿಕ್ಕಾಪಟ್ಟೆ ನಗಿಸಲಿದ್ದಾರೆ.

ಕಾಮಿಡಿ, ಲವ್, ಆ್ಯಕ್ಷನ್, ಮಾಸ್ ಎಲಿಮೆಂಟ್ ಅಂಶಗಳುಳ್ಳ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿ ಕಿರುತೆರೆ ನಟಿ ಗಾನವಿ ಲಕ್ಷ್ಮಣ್ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ ವಿಲನ್ ರೋಲ್ ಫ್ಲೇ ಮಾಡಿದ್ದಾರೆ. ಉಳಿದಂತೆ
ರಿಷಭ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣ ಮಾಡ್ತಿರುವ ಹೀರೋ ಚಿತ್ರಕ್ಕೆ ಭರತ್ ರಾಜ್ ಎಂ ನಿರ್ದೇಶಿಸಿದ್ದಾರೆ.

ಭರತ್ ರಾಜ್ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಅಂಜನೀಶ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಬೆಲ್ ಬಾಟಂ ಸಿನಿಮಾ ಬಳಿಕ ರಿಷಬ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿರುವ ‘ಹೀರೋ’ ಸಿನಿಮಾ ನೋಡೋದಿಕ್ಕೆ ಪ್ರೇಕ್ಷಕ ಸಖತ್ ಎಕ್ಸೈಟ್ ಆಗಿದ್ದಾರೆ. ಮಾರ್ಚ್ 5ರಂದು ತೆರೆಮೇಲೆ ರಿಷಬ್ ಹೀರೋ ಖದರ್ ಮತ್ತೆ ಶುರುವಾಗಲಿದೆ.

Related posts