Cinisuddi Fresh Cini News 

ತೆಲುಗಿಗೆ ಡಬ್ ಆಯ್ತು ಕನ್ನಡ “ಹಫ್ತಾ” ಚಿತ್ರ

ಸ್ಯಾಂಡಲ್ ವುಡ್ ನ ಚಿತ್ರಗಳಿಗೆ ಬಹಳ ಬೇಡಿಕೆ ಹೆಚ್ಚಾಗಿದೆ. ಯಾಕೆಂದರೆ… ಡಬ್ಬಿಂಗ್ , ರೀಮೇಕ್ ಹಾಗೂ ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿದೆ. ಅದೇ ಹಾದಿಯಲ್ಲಿ “ಹಫ್ತಾ” ಚಿತ್ರ ಕೂಡ ಬಿಡುಗಡೆಗೊಂಡು ಗಮನ ಸೆಳೆದು ಯೂಟ್ಯೂಬ್ ನಲ್ಲಿ 10 ಲಕ್ಷ ವೀಕ್ಷಕರ ಗಮನ ಸೆಳೆದಿದೆ.

ಅದೇ ರೀತಿ ಹಿಂದಿಯಲ್ಲೂ ಕೂಡ ಡಬ್ ಆಗಿ 70 ಲಕ್ಷ ವೀಕ್ಷಕರ ಗಮನ ಸೆಳೆದಿದೆ. ಈಗಾಗಲೇ ಈ ಹಫ್ತಾ ಚಿತ್ರ ತೆಲುಗು ಭಾಷೆಗೆ ಡಬ್ ಆಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಅದೇ ರೀತಿ ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ಕೂಡ ಚಿತ್ರ ಮಾತುಕತೆ ನಡೆದಿದ್ದು, ಅತೀ ಶೀಘ್ರದಲ್ಲಿ ದಕ್ಷಿಣ ಭಾರತದಲ್ಲಿ ಹಫ್ತಾ ರಾರಾಜಿಸಲಿದೆ.

ಹಫ್ತಾ ಈ ಪದ ಹೇಳುವಂತೆ ಇದೊಂದು ರೌಡಿಸಂ ಹಾಗೂ ಪೊಲೀಸ್ ಹಿನ್ನೆಲೆ ಇರುವ ಕಥೆ. ಚಿತ್ರರಂಗದಲ್ಲಿ ಒಂದು ಭದ್ರ ನೆಲೆಯನ್ನು ಕಾಣಬೇಕು ಎಂಬ ತವಕದೊಂದಿಗೆ ಬಂದಂತ ಯುವ ಪ್ರತಿಭೆ ವರ್ಧನ್ ನಾಯಕನಾಗಿ ಸೈಲೆಂಟ್ ಕಿಲ್ಲರ್ ಪಾತ್ರದಲ್ಲಿ ಮಿಂಚಿದಂತ ಚಿತ್ರ.

ಈ ಚಿತ್ರವನ್ನು ಪ್ರಕಾಶ್ ಹೆಬ್ಬಾಳ್ ನಿರ್ದೇಶಿಸಿದ್ದು, ಮೈತ್ರಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಉಳಿದ ಪಾತ್ರವರ್ಗದಲ್ಲಿ ರಾಘವ ನಾಗ್ , ಬಿಂಬ ಶ್ರೀನೀನಾಸಂ, ಸೌಮ್ಯ ತಿತೀರ,
ಮುಖ್ಯ ಖಳನಾಯಕನಾಗಿ ಬಲ್‍ರಾಜ್ ವಾಡಿ, ದಶಾವರ ಚಂದ್ರು , ಉಗ್ರಂ ರವಿ ಮುಂತಾದವರು ತಂಡದಲ್ಲಿ ಇದ್ದಾರೆ.

ವಿಜಯ್ ಯಾರ್ಡಲಿ ಸಂಗೀತ ನಿರ್ದೇಶನಕ್ಕೆ ಗೌತಮ್ ಶ್ರೀವತ್ಸ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಛಾಯಾಗ್ರಹಣ ಸೂರಿ ಸಿನಿಟೆಕ್, ಸಂಕಲನ ರಘುನಾಥ್ ಎಲ್. ನಿರ್ವಹಿಸಿದ್ದಾರೆ.

ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಯಾರೂ ಊಹೆ ಮಾಡದ ಪ್ರಮುಖ ವಿಷಗಳನ್ನು ಸೇರಿಸಿ ಸಸ್ಪೆನ್ಸ್ , ಥ್ರಿಲ್ಲರ್ ಜಾಡಿನಲ್ಲಿ ಚಿತ್ರಕಥೆಯನ್ನು ಮಾಡಿದ್ದಾರೆ. ಒಟ್ನಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಕನ್ನಡ ಚಿತ್ರಗಳು ದೇಶವ್ಯಾಪಿ ಸದ್ದನ್ನು ಮಾಡುತ್ತಿದೆ. ಹಫ್ತಾ ಚಿತ್ರ ಕೂಡ ದಕ್ಷಿಣ ಭಾರತದಲ್ಲಿ ತನ್ನ ಹವಾ ಪಸರಿಸಲಿ…

Share This With Your Friends

Related posts