Cinisuddi Fresh Cini News 

‘ಗುಳೆ’ ಕಿರುಚಿತ್ರ

ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿಯೇ. ಹೊಟ್ಟೆ ಹಾಗೂ ಬಟ್ಟೆಯನ್ನು ಸಂಪಾದಿಸಿಕೊಳ್ಳಲು ಜನರು ಕೆಲಸವನ್ನು ಹುಡುಕಿಕೊಂಡು ಗುಳೇ ಹೋಗುತ್ತಿರುತ್ತಾರೆ, ನಿರ್ದೇಶಕ ಶ್ರೀನಾಥ್.ಎಸ್.ಹಡಗಲಿ ಇದನ್ನೇ ಕಥಾವಸ್ತುವನ್ನಾಗಿಸಿಕೊಂಡು 20 ನಿಮಿಷಗಳ ಕಾಲಾವಧಿಯ ಗುಳೆ ಎಂಬ ಕಿರುಚಿತ್ರವನ್ನು ಸಿದ್ಧಪಡಿಸಿದ್ದಾರೆ.

ಈ ಕಿರುಚಿತ್ರದಲ್ಲಿ ಮಗನಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸಬೇಕೆಂಬ ಕನಸು ಹೊತ್ತ ತಾಯಿ, ಅಮ್ಮನ ಕನಸನ್ನು ನನಸು ಮಾಡುವ ಸಂಕಲ್ಪ ಹೊತ್ತ ಮಗ ಆದರೆ ಕುಡುಕ ತಂದೆಯ ನಡುವೆ ಆತನ ಕನಸು ನನಸಾಗುತ್ತದೆಯೇ ಎಂಬುದು ಕಥಾಸಾರಾಂಶ.

ಸರ್ಕಾರಗಳು ಎಲ್ಲ ಮಕ್ಕಳು ವಿದ್ಯಾವಂತರಾಗಬೇಕೆಂದು ಯೋಜನೆಗಳನ್ನು ರೂಪಿಸಿದೆ, ಅದರಂತೆ ಶಿಕ್ಷಕಿಯೊಬ್ಬಳು ಮಗುವನ್ನು ಶಾಲೆಗೆ ಕಳುಹಿಸಿ ಶಿಕ್ಷಣ ಕೊಡಿಸಿ ಎಂದು ಕುಡುಕ ತಂದೆಯ ಬಳಿ ಹೇಳಿದಾಗ ಅದಕ್ಕೆ ಅವನು ವಿರೋಧ ವ್ಯಕ್ತಪಡಿಸುತ್ತಾನೆ. ನಿರ್ದೇಶಕರು ಉತ್ತರಕರ್ನಾಟಕದ ಭಾಗದವರೇ ಆಗಿರುವ ನಿರ್ದೇಶಕ ಶ್ರೀನಾಥ್.ಎಸ್.ಹಡಗಲಿ ತನ್ನಜೀವನದಲ್ಲಿ ನಡೆದ ಘಟನೆಗೆ ಕತೆ,ಚಿತ್ರಕತೆ, ಸಂಭಾಷಣೆ ಬರೆದುಚಿತ್ರರೂಪದಲ್ಲಿ ತೋರಿಸಿದ್ದಾರೆ.

ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಒಂದು ಚಿತ್ರದ ಗೆಲುವಿಗೆ ಯಾರೂ ಸೂತ್ರವನ್ನು ರೂಪಿಸಿಲ್ಲ, ನಿರ್ದೇಶಕ ಶ್ರೀನಾಥ್ ತಮ್ಮ ಗುಳೆ ಕಿರುಚಿತ್ರದಲ್ಲಿ ಭಾಷೆ, ಪ್ರಾದೇಶಿಕ, ನೈಜಸ್ಥಳ ಜೊತೆಗೆ ಶಿಕ್ಷಣದ ಬಗ್ಗೆ ಸಂದೇಶ ಮೂಡಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಬಯಲುಸೀಮೆಯ ಪ್ರಸಿದ್ದ ಪದ ಇದೇ ಆಗಿದೆ ಅಂತ ಯೋಗರಾಜ್‍ಭಟ್‍ಬಣ್ಣನೆ ಮಾಡಿದರು.

ಸಂಚಾರಿ ವಿಜಯ್ ಮಾತನಾಡಿ, ಸರ್ಕಾರಿ ಶಾಲೆಗಳು ಕಣ್ಮರೆಯಾಗುತ್ತಿರುವ ಸಮಯದಲ್ಲೇ ಜನರಲ್ಲಿ ಜಾಗೃತಿ ಮೂಡಿಸುವಂತಹ ಗುಳೆ ಕಿರುಚಿತ್ರದಲ್ಲಿ ಸಾಮಾಜಿಕ ಕಳಕಳಿ ಅಂಶಗಳಿವೆ, ನಿರ್ದೇಶಕ ಶ್ರೀನಾಥ್‍ರ ಪ್ರಯತ್ನಗಳು ಮುಂದುವರೆಯಲಿ ಎಂದು ಆಶಿಸಿದರು.

ನಿರ್ಮಾಪಕ ಮನೋಹರ್ ಮಾತನಾಡಿ, ನಮ್ಮ ಅಯ್ಯರ್ ಟಾಕೀಸ್‍ನಿಂದ ಹೊರಬರುತ್ತಿರುವ ಗುಳೆ ಕಿರುಚಿತ್ರದಲ್ಲಿ ನಟಿಸಿರುವ ಮುತ್ತುವಿನ ಶಿಕ್ಷಣದ ಖರ್ಚನ್ನು ನಾವೇ ಭರಿಸುತ್ತೇವೆ, ವಿಧುರಾಶ್ವಥ್ವ ಮತ್ತು ದೇವರಹೂವು ಚಲನಚಿತ್ರ ನಿರ್ಮಾಣ ಮಾಡಲು ಯೋಜನೆ ಹಾಕಿಕೊಂಡಿರುವುದಾಗಿ ಮಾಹಿತಿ ನೀಡಿದರು.

ಪೋಷಕರಾಗಿ ಪುಟ್ಟಣ್ಣ ವಿಜಯಪುರ್-ಶೃತಿಶಿವಶಂಕರ್, ಮಾಸ್ಟರ್ ಮುತ್ತು, ಶಿಕ್ಷಕಿಯಾಗಿ ರಾಧಿಕಾ ನಟಿಸಿದ್ದಾರೆ. ಸರಿಗಮಪ ಜ್ಯೂರಿ ಸದಸ್ಯೆ ಸಂಗೀತ ರಾಜೀವ್‍ಗಾಯನ ಹಾಗೂ ರಾಗ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪ್ರಶಾಂತ್‍ಗೌಡ, ಸಂಕಲನ ಗೌತಂ.ಎ ಅವರದಾಗಿದೆ.
ಸರ್ಕಾರಿ ಶಾಲೆಗಳು ಉಳಿಯಬೇಕೆಂಬ ಉದ್ದೇಶವಿಟ್ಟುಕೊಂಡಿರುವ ನಿರ್ಮಾಣವಾಗಿರುವ ಗುಳೆ ಕಿರುಚಿತ್ರವು ಜನರಲ್ಲಿ ಜಾಗೃತಿ ಮೂಡಿಸಿ ಸರ್ಕಾರಿ ಶಾಲೆಗಳು ಉಳಿಯುವಂತಾಗಲಿ.

Share This With Your Friends

Related posts