Cini Reviews Cinisuddi Fresh Cini News 

ಸಿನಿಮಾ ಮಾಡಲು ಹೊರಟವರ ಕಥೆ , ವ್ಯಥೆ… : ಗುಲಾಲ್ ಚಿತ್ರವಿಮರ್ಶೆ

ಚಿತ್ರ : ಗುಲಾಲ್
ನಿರ್ದೇಶಕ : ಶಿವು ಜಮಖಂಡಿ ನಿರ್ಮಾಪಕರು : ಗೋಪಾಲಕೃಷ್ಣ ಹವಲ್ದಾರ್, ಧನಂಜಯ್. ಹೆಚ್ ಸಂಗೀತ : ಶಿವು ಜಮಖಂಡಿ ಛಾಯಾಗ್ರಹಣ :ಮುಂಜಾನೆ ಮಂಜು
ತಾರಾಗಣ : ತಬಲಾ ನಾಣಿ , ಬಿಗ್ ಬಾಸ್ ದಿವಾಕರ್, ಸದಾನಂದ ಖಾಲಿ, ಜೋಕರ್ ಹನುಮಂತು, ಶಂಕರ್ ಅಂಬಿಗೇರಿ, ಮಲ್ಲು ಜಮಖಂಡಿ, , ನೇತ್ರ ಗಗನ್, ಪೂಜಾ, ರಾಜೇಶ್ವರಿ ಕಾಮತ್, ಸೋನು ಪಾಟೀಲ್, ಅನಿತಾ ಸೂರ್ಯವಂಶಿ, ಮೋಹನ್ ಜುನೇಜಾ, ಶೋಭ್ ರಾಜ್ ಹಾಗೂ ಮುಂತಾದವರು…

# ರೇಟಿಂಗ್ 3/5

ಬಣ್ಣದ ಬದುಕು ಎಲ್ಲರನ್ನು ಆಕರ್ಷಿಸಿದೆ. ಆದರೆ ಅದರೊಳಗೆ ಬೆಸೆದುಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನು ಅರಿಯಬೇಕಿದೆ. ಇಂಥ ಅಂಶಗಳನ್ನು ಒಳಗೊಂಡಂತ “ಗುಲಾಲ್. com ಚಿತ್ರದಲ್ಲಿ ಸಿನಿಮಾಸಕ್ತರ ಹುಡುಗರ ಕಥೆ ವ್ಯಥೆ ತೆರೆದಿಟ್ಟುಕೊಂಡಿದೆ.

ಕಳೆದ 2 ವರ್ಷಗಳಿಂದ ಕರೋನಾ ಅವಳಿಂದ ಸಿನಿಮಾ ಚಟುವಟಿಕೆಗಳು ಸ್ತಬ್ಧವಾಗಿತ್ತು , ಲಾಕ್ ಡೌನ್ ನಿಂದ ಚಿತ್ರ ಚಿತ್ರ ಪ್ರದರ್ಶನ ರದ್ದಾಗಿತ್ತು , ಕಳೆದ ಕೆಲವು ವಾರಗಳಿಂದ ಸಿನಿಮಾಗಳು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಆ ನಿಟ್ಟಿನಲ್ಲಿ ಈ ವಾರ ಬಿಡುಗಡೆಗೊಂಡಿರುವ “ಗುಲಾಲ್ ಡಾಟ್ ಕಾಮ್” ಚಿತ್ರ ಮನರಂಜನೆಯನ್ನ ನೀಡಲು ಸಿದ್ಧವಾಗಿದೆ.

ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ಸೆಟ್ ಒಂದರಲ್ಲಿ ನಡೆಯುವ ಆಡಿಷನ್ ಮೂಲಕ. ಒಬ್ಬೊಬ್ಬ ಪ್ರತಿಭೆಯೂ ತನ್ನ ನಟನಾ ಸಾಮರ್ಥ್ಯವನ್ನು ತೋರುತ್ತಿರುವಾಗಲೇ ಸಿನಿಮಾ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಐವರು ಹುಡುಗರ ಕಥಾನಕ ಫ್ಲ್ಯಾಷ್ ಬ್ಯಾಕ್ ಮೂಲಕ ತೆರೆದುಕೊಳ್ಳುತ್ತದೆ.

ಈ 5 ಹುಡುಗರ ಬದುಕು ಒಂದೊಂದು ವೃತ್ತಿ ಆಗಿದ್ದರೂ , ಸಿನಿಮಾ ಮಾಡುವ ಆಸೆಯಿಂದ ಇವರೆಲ್ಲರೂ ಒಗ್ಗೂಡಿಕೊoಡು “ಈ ಸಲ ಡ್ಯಾಶ್ ನಮ್ದೆ”… ಎಂಬ ಶೀರ್ಷಿಕೆ ಇಟ್ಟುಕೊಂಡು ಕಥೆ ಯನ್ನು ಸಿದ್ಧಪಡಿಸಿ ನಿರ್ಮಾಪಕರ ಹುಡುಕಾಟ ನಡೆಸುತ್ತಾರೆ.

ಇವರ ಈ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲುವ ಗುರು ಸ್ಥಾನದಲ್ಲಿ ತಬಲಾ ನಾಣಿ ಕೂಡಾ ಇರುತ್ತಾರೆ. ಶ್ರಮವಹಿಸಿ ಪ್ರಯತ್ನ ಪಟ್ಟರೆ ಫಲ ಖಂಡಿತ ಸಿಗುತ್ತದೆ ಎಂಬ ಮಾರ್ಗದರ್ಶನದೊಂದಿಗೆ ಈ ಐವರು ನಾಯಕರು ಮುಂದೆ ಸಾಗುತ್ತಾರೆ. ಇವರಿಗೆ ಜೋಡಿಯಾಗಿ ನಟಿಸಿದ ನಾಯಕಿಯರ ಸಹಕಾರವೂ ಕಥೆಯ ಓಟಕ್ಕೆ ಪೂರಕವಾಗುತ್ತದೆ.

ಒಂದು ಹಂತದಲ್ಲಿ ಎಲ್ಲವೂ ಕೈಗೆಟುಕುತ್ತಿದೆ , ನೆನಸಿದ್ದು ಕೈಗೂಡಿದೆ. ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನುವಷ್ಟರಲ್ಲಿ ಅಚಾನಕ್ಕಾಗಿ ಎದುರಾಗುವ ತಿರುವು ಬದುಕಿಗೆ ಗೊಂದಲದ ಗೂಡಾಗುತ್ತದೆ. ಇನ್ನೂ ದ್ವಿತೀಯಾರ್ಧದಲ್ಲಿ ಸಿನಿಮಾ ಮತ್ತೊಂದು ತಿರುವನ್ನು ಪಡೆದುಕೊಳ್ಳುತ್ತದೆ. ಒಂದು ಕಡೆ ಬದುಕು ಮತ್ತೊಂದು ಕಡೆ ಇಷ್ಟಪಟ್ಟಂತ ಸಿನಿಮಾ ಕನಸು ಎರಡನ್ನೂ ನಿಭಾಯಿಸುವುದಕ್ಕೆ ಏನು ಮಾಡಬೇಕೆಂದು ತೋಚದೆ ಇರುವಾಗ ಗೆಳೆಯನೊಬ್ಬನ ಮಾರ್ಗದರ್ಶನದೊಂದಿಗೆ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಕಾಣದ ಕೆಲವು ರೋಚಕ ಸಂಗತಿಗಳ ಹಾದಿಯತ್ತಾ ಈ ಹುಡುಗರು ತೆರಳುವ ಮನಸು ಮಾಡುತ್ತಾರೆ. ಕ್ಲೈಮ್ಯಾಕ್ಸ್ ಹಂತದಲ್ಲಿ ನಡೆಯುವ ಕೆಲವು ಘಟನೆಗಳು ತಿಳಿಯಬೇಕಾದರೆ ನೀವೆಲ್ಲರೂ ಒಮ್ಮೆ ಸಿನಿಮಾವನ್ನು ನೋಡಲೇಬೇಕು.
ಈ ಹುಡುಗರು ಸಿನಿಮಾ ಮಾಡುತ್ತಾರಾ…
ಅವರ ಬದುಕು ಏನಾಗುತ್ತದೆ…
ಗುಲಾಲ್.com ಶೀರ್ಷಿಕೆಯ ಚಿತ್ರಕ್ಕೆ ಹೇಗೆ ಸೂಕ್ತ…
ಎಂಬ ಎಲ್ಲಾಪ್ರಶ್ನೆಗೂ ಚಿತ್ರದಲ್ಲಿ ಸಿಗಲಿದೆ.

ಇನ್ನೂ ಚಿತ್ರದ ಪ್ರಮುಖ ಹೈಲೆಟ್ಸ್ ಎಂದರೆ ಹಾಸ್ಯ ನಟ ತಬಲಾ ನಾಣಿ. ಚಿತ್ರದಲ್ಲಿ ಸಿನಿಮಾ ನಟನಾಗಿ ಕಾಣಿಸಿಕೊಳ್ಳುವ ಇವರು ಸಿನಿಮಾ ಮಾಡಲು ಹೊರಟ ಹುಡುಗರಿಗೆ ಮಾರ್ಗದರ್ಶನ ನೀಡುವ ಗುರುವಾಗಿ ಕಾಣಿಸಿಕೊಂಡು, ಇಲ್ಲಿ ಜಾತಿ ಭೇದವಿಲ್ಲ. ಮಹನೀಯರ ಕಟ್ಟಿಕೊಟ್ಟ ಚಿತ್ರರಂಗವಿದು, ಇಲ್ಲಿಗೆ ಬರುವ ಪ್ರತಿಭೆಗಳಿಗೆ ಹಣವನ್ನು ಕೊಟ್ಟು ಗೌರವ ನೀಡಿ ಬದುಕು ಕಟ್ಟಿಕೊಳ್ಳಲು ದಾರಿ ಮಾಡಿಕೊಡುತ್ತದೆ.

ಈ ಚಿತ್ರೋದ್ಯಮವನ್ನು ಗೌರವಿಸಿ ಎಂಬ ಮಾತು ಗಮನ ಸೆಳೆಯುತ್ತದೆ. ಅದೇ ರೀತಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ನಟ ಶೋಭ ರಾಜ್ ಕೂಡ ಖಡಕ್ ಆಗಿ ನಟಿಸಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಅಭಿನಯಿಸಿರುವ ನಾಯಕರು, ನಾಯಕಿಯರು ಹಾಗೂ ಪೋಷಕ ಪಾತ್ರಗಳು ಸಿಕ್ಕ ಪಾತ್ರಕ್ಕೆ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದರ ಜೊತೆಗೆ ಮನೋರಂಜನೆ ನೀಡುವ ಉದೇಶದಿಂದ ಚಿತ್ರ ನಿರ್ಮಿಸಿರುವ ನಿರ್ಮಾಪಕರಾದ ಡಾ.ಗೋಪಾಲಕೃಷ್ಣ ಹವಲ್ದಾರ್ ಹಾಗೂ ಧನಂಜಯ್. ಹೆಚ್ ರವರ ಕೆಲಸ ಮೆಚ್ಚುವಂಥದು, ಹಾಗೆಯೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಗೀತ , ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಶಿವು ಜಮಖಂಡಿ ರವರು ಆಯ್ಕೆ ಮಾಡಿಕೊಂಡಿರುವ ಕಥೆ ವಿಧಾನ ವಿಭಿನ್ನವಾಗಿದೆ.

ಸಿನಿಮಾ ಮಾಡುವವರ ಬದುಕು , ಬವಣೆ. ಜೀವನದಲ್ಲಿ ತಮಗೆ ತಿಳಿಯದೆ ಸಿಕ್ಕಿಹಾಕಿಕೊಳ್ಳುವ ಹಲವು ಹಾದಿಯ ಸೂಕ್ಷ್ಮ ವಿಚಾರವನ್ನು ತೆರೆದಿಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಚಿತ್ರದ ಓಟ ಮತ್ತಷ್ಟು ಬಿಗಿಯಾಗಿರಬೇಕಿತ್ತು. ಒಂದಷ್ಟು ಗೊಂದಲಗಳ ಇದ್ದರು ತೂಗಿಸಿಕೊಂಡು ಹೋಗಿದ್ದಾರೆ.

ಸಂಭಾಷಣೆ ಅಲ್ಲಲ್ಲಿ ಗಮನ ಸೆಳೆಯುತ್ತದೆ. ಅದೇ ರೀತಿ ಸಾಹಿತ್ಯ ಹಾಗೂ ಸಂಗೀತ ಗಮನಾರ್ಹವಾಗಿದೆ. ಛಾಯಾಗ್ರಹಣ ಕೆಲಸ ಮತ್ತಷ್ಟು ಚುರುಕಾಗಬೇಕಿತ್ತು. ಒಟ್ಟಾರೆ ಇಡೀ ಸಿನಿಮಾ ಮನರಂಜನೆಯ ರಸದೌತಣ ನೀಡುವುದರಲ್ಲಿ ಹೆಜ್ಜೆ ಇಟ್ಟಿದೆ. ಎಲ್ಲರೂ ಒಮ್ಮೆ ಹೋಗಿ ಗುಲಾಲ್ ಡಾಟ್ ಕಾಮ್ ಅನ್ನು ಒಮ್ಮೆ ವೀಕ್ಷಿಸಬಹುದು.

Related posts