Cinisuddi Fresh Cini News 

“ಗ್ರಾಮಾಯಣ” ಚಿತ್ರ ನಿರ್ಮಾಪಕ ಎನ್.ಎಲ್.ಎನ್ ಮೂರ್ತಿ ಕೊರೋನಾ ಬಲಿ..!

ಎಲ್ಲೆಡೆ ಕೊರೋನಾ ಹಾವಳಿ ನರ್ತನ ಮಾಡುತ್ತಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರರಂಗವೂ ಕೂಡ ಸ್ತಬ್ಧವಾಗಿದೆ. ಇದರ ನಡುವೆ ಗ್ರಾಮಾಯಣ ಚಿತ್ರ ನಿರ್ಮಾಪಕ 39 ವರ್ಷದ ಎನ್.ಎಲ್. ಎನ್ ಮೂರ್ತಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡ ಮೊದಲ ಕೊರೋನಾ ಸಾವು ಇದಾಗಿದೆ.

ನಿರ್ಮಾಪಕ ಎನ್.ಎಲ್.ಎನ್ ಮೂರ್ತಿಯವರನ್ನು ಬಿ.ಜಿ.ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಮೂರ್ತಿಯವರಿಗೆ ಅವರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬಳಿಕ ಮಾಡಿದ ಕೊರೋನಾ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಪತ್ತೆಯಾಗಿದ್ದು,ಈಗ ಎಲ್ಲರಲ್ಲೂ ಆತಂಕ ಮೂಡಿದೆಯoತೆ. ಕೆಲವು ದಿನಗಳ ಹಿಂದೆಯಷ್ಟೇ ಅವರ ತಾಯಿಯೂ ಕೂಡ ಕೊರೊನಾ ವೈರಸ್ ನಿಂದಾಗಿ ಮೃತಪಟ್ಟಿದ್ದು , ಇದು ಎನ್. ಎಲ್. ಎನ್ ಮೂರ್ತಿ ಅವರಿಗೂ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ.

Gramayana Movie Producer

ಯುವ ನಟ ವಿನಯ್ ರಾಜ್ ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರವನ್ನು ನಿರ್ಮಿಸುತ್ತಿರುವ ಈ ನಿರ್ಮಾಪಕನ ಸಾವಿನಿಂದ ಚಿತ್ರತಂಡ ಕಂಗಾಲಾಗಿದೆ. ಇಡೀ ಚಿತ್ರೋದ್ಯಮ ಹಾಗೂ ನಿರ್ಮಾಪಕರ ಆತ್ಮೀಯರು ಎನ್.ಎಲ್.ಎನ್ ಮೂರ್ತಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

Share This With Your Friends

Related posts