Cinisuddi Fresh Cini News 

ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದ ಸರ್ಕಾರ

ಕೊರೋನಾ ಹಾವಳಿಯಿಂದ ಇಡೀ ಸಿನಿಮಾ ಜಗತ್ತೇ ಕತ್ತಲೆಯಲ್ಲಿ ಮುಳುಗಿತ್ತು. ಚಿತ್ರೋದ್ಯಮದ ಬಹಳಷ್ಟು ಪ್ರಮುಖರು ಚಿತ್ರೀಕರಣಕ್ಕೆ ಹಾಗೂ ಚಿತ್ರ ಚಟುವಟಿಕೆಗಳಿಗೆ ಅನುಮತಿ ನೀಡಿ ಎಂದು ಸರಕಾರದ ಬಳಿ ಹಲವು ಬಾರಿ ಬೇಡಿಕೆ ಇಟ್ಟಿದ್ದರು.

ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಇದು ಕಷ್ಟ ಸಾಧ್ಯ ಎಂಬ ಮಾತು ಕೇಳಿಬಂದಿದ್ದು , ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಕಿರುತೆರೆ ಚಿತ್ರೀಕರಣಕ್ಕೆ ಜೊತೆಗೆ ಚಲನಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೂ ಅನುಮತಿ ನೀಡಿದ್ದು , ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಕೆಲಸ ಮಾಡಬೇಕು ಎಂದಿತ್ತು. ಆದರೆ ಚಲನಚಿತ್ರ ಚಿತ್ರೀಕರಣ ಮಾತ್ರ ಸ್ಥಗಿತವಾಗಿತ್ತು.

ಆದರೆ ಇದೀಗ ಚಿತ್ರೋದ್ಯಮದ ಪ್ರಮುಖರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಸದ್ಯ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಅದು ಈಗ ಅರ್ಧಕ್ಕೆ ನಿಂತಿರುವ ಚಿತ್ರಗಳ ಚಿತ್ರೀಕರಣ ಮಾಡುವುದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಚಿತ್ರಗಳ ಚಿತ್ರೀಕರಣಕ್ಕೂ ಹಾಗೂ ಚಿತ್ರಮಂದಿರಗಳ ತೆರವಿಗೂ ಅನುಕೂಲವಾಗಲಿದೆ ಎಂಬ ಮಾತು ಕೇಳಿಬಂದಿದೆ.

ಇದು ನಿಜವಾಗಿಯೂ ಒಂದು ಉತ್ತಮ ಬೆಳವಣಿಗೆಯಾಗಿದೆ. ಸರ್ಕಾರ ಕೊಟ್ಟಿರುವ ಈ ತೀರ್ಮಾನ ಅದೆಷ್ಟು ಚಿತ್ರೋದ್ಯಮದ ಮಂದಿಗೆ ಮರಳುಗಾಡಿನಲ್ಲಿ ನೀರು ಸಿಕ್ಕಂತಾಗಿದೆ.

ಸಿನಿಮಾನೇ ಉಸಿರು, ಸಿನಿಮಾ ಬಿಟ್ಟು ಬೇರೆ ವೃತ್ತಿ ತಿಳಿಯದ ಬಹಳಷ್ಟು ಕಾರ್ಮಿಕರಿಗೆ ಅನುಕೂಲವಾಗು ವುದಂತೂ ಸತ್ಯ. ಮುಂದಿನ ದಿನಗಳಲ್ಲಿ ಎಲ್ಲವೂ ಸುಲಲಿತವಾಗಿ ಚಿತ್ರೋದ್ಯಮ ಚಿತ್ರ ಚಟುವಟಿಗಳ ನಡೆದಲ್ಲಿ ಎಂಬುದೇ ನಮ್ಮ ಆಶಯ.

Share This With Your Friends

Related posts