Cinisuddi Fresh Cini News 

ಗಣೇಶ್ ಬರ್ತ್ಡೇಗೆ `ಸಖತ್’ ರ‍್ಯಾಪ್ ಮೋಷನ್‍ ಪೋಸ್ಟರ್ ಬಿಡುಗಡೆ

ಗೋಲ್ಡನ್ ಸ್ಟಾರ್ ಗಣೇಶ್‍ರ ಹುಟ್ಟುಹಬ್ಬದ ಪ್ರಯುಕ್ತವಾಗಿ `ಸಖತ್’ ಚಿತ್ರತಂಡದಿಂದ ರ್ಯಾಪ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ಈಗ ವೈರಲ್ ಆಗಿ ಸಖತ್ ಸದ್ದನ್ನು ಮಾಡುತ್ತಿದೆ.

ಅಂದಹಾಗೆ ಗಣೇಶ್ ಅವರಿಗೆ ಸಿಂಪಲ್ ಸುನಿ ಅವರು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಫಾಲೋ ಮಾಡುವವರಿಗೆ ಒಂದು ವಿಷಯ ಚೆನ್ನಾಗಿ ಗೊತ್ತಿರುತ್ತದೆ. ವಿಶೇಷ ದಿನಗಳಲ್ಲಿ ಸುನಿ ಶುಭಾಶಯ ಕೋರುವ ರೀತಿಯೇ ಭಿನ್ನವಾಗಿರುತ್ತದೆ.

ಸ್ಟಾರ್ ಕಲಾವಿದರ ಜನ್ಮದಿನ, ಹಬ್ಬ ಹರಿದಿನ, ಕ್ರಿಕೆಟ್ ಪಂದ್ಯ, ಸಿನಿಮಾ ಬಿಡುಗಡೆ ಹೀಗೆ ಏನೇ ಇದ್ದರೂ ಸುನಿ ವಿಶ್ ಮಾಡುವ ರೀತಿ ಡಿಫರೆಂಟ್ ಆಗಿಯೇ ಇರುತ್ತದೆ. ಪ್ರಸ್ತುತ ಅವರು `ಗೋಲ್ಡನ್ ಸ್ಟಾರ್’ ಗಣೇಶ್ ಜೊತೆಗೆ ಸಖತ್ ಸಿನಿಮಾ ಮಾಡುತ್ತಿದ್ದಾರೆ.

ಈ ಹಿಂದೆ `ಚಮಕ್’ ಸಿನಿಮಾ ಮೂಲಕ ಫ್ಯಾಮಿಲಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದ ಈ ನಟ-ನಿರ್ದೇಶಕನ ಜೋಡಿ ಈಗ ಸಖತ್ ಚಿತ್ರಕ್ಕಾಗಿ ಜೊತೆಯಾಗಿದೆ. ಎರಡನೇ ಬಾರಿಗೆ ಇಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಮೂಡಿಬರುತ್ತಿರುವುದರಿಂದ ಅಭಿಮಾನಿಗಳಿಗೂ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ.

ಸಖತ್ ಚಿತ್ರ ಘೋಷಣೆ ಮಾಡುವ ಸಂದರ್ಭದಲ್ಲಿ ಗಣೇಶ್ ಅವರ ಒಂದು ಪೋಸ್ಟರ್ ಬಿಡುಗಡೆ ಮಾಡಿದ್ದ ನಿರ್ದೇಶಕರು, ಈಗ ಗಣೇಶ್ ಜನ್ಮದಿನಕ್ಕೆ ರ್ಯಾಪ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಜೂಡಾ ಸ್ಯಾಂಡಿ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಿಶಾ ವೆಂಕಟ್ ಕೊಂನ್ನಕಿ ಮತ್ತು ಸುಪ್ರಿತ್‍ ನಿರ್ಮಾಣದಲ್ಲಿ`ಸಖತ್’ ಸಿನಿಮಾ ಮೂಡಿಬರುತ್ತಿದೆ.

ಗಣೇಶ್ ಜೋಡಿಯಾಗಿ ನಟಿ ಸುರಭಿ ಕಾಣಿಸಿಕೊಳ್ಳಲಿದ್ದಾರೆ. ಸಾಧು ಕೋಕಿಲ, ಕುರಿ ಪ್ರತಾಪ್. ರಘುರಾಮ್, ಧರ್ಮಣ್ಣ ಕಡೂರು ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ಪ್ರತಿ ವರ್ಷ ಜು.2ರಂದು ಗಣೇಶ್ ಮನೆ ಮುಂದೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಸೇರುತ್ತಿದ್ದರು.

ಮಹಿಳಾ ಅಭಿಮಾನಿಗಳು ಕೂಡ ಗಣೇಶ್ ನಿವಾಸಕ್ಕೆ ಬಂದು ಶುಭ ಕೋರುತ್ತಿದ್ದರು. ಒಟ್ಟಾರೆ ಸಂಭ್ರಮಾಚರಣೆ ಅದ್ದೂರಿಯಾಗಿಯೇ ಇರುತ್ತಿತ್ತು. ಆದರೆ ಈ ಬಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಿರುವುದರಿಂದ ಆ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ , ಗಾಳಿಪಟ-2, ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನು ನಿರ್ದೇಶಕ ಸಿಂಪಲ್ ಸುನಿ ಅವರು ಸಖತ್ ಸಿನಿಮಾದ ಜೊತೆ ಶರಣ್ ಅಭಿನಯದ ಅವತಾರಪುರುಷ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿ ಇದೆ. ಈಗ ಸಖತ್ ಸಿನಿಮಾದ ಪೋಸ್ಟರ್ ಹೆಚ್ಚು ಗಮನ ಸೆಳೆದಿದ್ದು, ಭಾರೀ ವೈರಲ್ ಆಗಿದೆ.

ಗಣೇಶ್ ಹುಟ್ಟುಹಬ್ಬದ ಅಂಗವಾಗಿ ಸುನಿ ಹಾಗೂ ಗಣೇಶ್‍ರ ಕಾಂಬಿನೇಷನ್‍ನ 3ನೇ ಚಿತ್ರವಾದ ರಾಯಗಢ ಚಿತ್ರದ ಪೋಸ್ಟರ್‍ ಅನ್ನು ಬಿಡುಗಡೆ ಮಾಡಲಾಯಿತು. ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ಡೇಗೆ ಬಹಳಷ್ಟು ನಿರ್ಮಾಪಕರು ನೂತನ ಚಿತ್ರಗಳ ಅನೌನ್ಸ್ ಮಾಡುವ ಮೂಲಕ ಸಿಹಿ ಸುದ್ದಿಯನ್ನು ನೀಡಿದ್ದಾರೆ.

 

Share This With Your Friends

Related posts