Cinisuddi Fresh Cini News 

ಗಣೇಶ್ ಬರ್ತ್‍ಡೇಗೆ ಕೊರೋನಾ ಬ್ರೇಕ್ !

ಮಾರಕ ಕೊರೋನಾ ವೈರಸ್ ಭೀತಿ ಕನ್ನಡ ಚಿತ್ರರಂಗಕ್ಕೆ ಇನ್ನಿಲ್ಲದಂತೆ ಕಾಡುತ್ತಿದ್ದು, ಇದೀಗ ಸ್ಯಾಂಡಲ್‍ವುಡ್ ಸ್ಟಾರ್ ನಟರ ಬರ್ತ್ ಡೇ ಆಚರಣೆಗೂ ಸಹ ಕೋವಿಡ್-19 ವೈರಸ್ ಬ್ರೇಕ್ ಹಾಕಿದೆ.

ಹೌದು, ಕೊರೋನ ವೈರಸ್ ಸೋಂಕು ಭೀತಿಯಿಂದಾಗಿ ಹಲವು ಸ್ಟಾರ್ ನಟರು ಈ ವರ್ಷ ತಮ್ಮ ಬರ್ತ್ ಡೇಯನ್ನು ಆಚರಿಸುತ್ತಿಲ್ಲ. ಇದೀಗ ಗಣೇಶ್ ಕೂಡಾ ಇದೇ ಹಾದಿಯಲ್ಲಿ ನಡೆದಿದ್ದಾರೆ.

ಜುಲೈ 4ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬವಿದ್ದು, ಅಂದು ಯಾವುದೇ ರೀತಿಯ ಸಂಭ್ರಮ ಆಚರಣೆ ಇರುವುದಿಲ್ಲ ಎಂದು ನಟ ಗಣೇಶ್ ಅವರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಗಣೇಶ್, ‘ಪ್ರೀತಿಯ ಸ್ನೇಹಿತರೇ, ಕೋವಿಡ್ 19ನಿಂದಾಗಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ನೇರವಾಗಿ ನಿಮ್ಮನ್ನು ಭೇಟಿಮಾಡಿ ಆಚರಿಸಲಾಗುತ್ತಿಲ್ಲ.. ಕ್ಷಮೆಯಿರಲಿ..

ನಿಮ್ಮ ಪ್ರೀತಿ, ಹಾರೈಕೆ ಶುಭಾಶಯ ಸದಾ ನನ್ನ ಜೊತೆಯಿರಲಿ.. ಎಲ್ಲರಿಗೂ ಒಳ್ಳೆಯದಾಗಲಿ.. ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ಬರೆದುಕೊಂಡಿದ್ದಾರೆ.

Related posts