Cinisuddi Fresh Cini News Tv / Serial 

ವೀಕೆಂಡ್ ವಿಥ್ ರಮೇಶ್ ಜೊತೆ ಡಾ. ವೀರೇಂದ್ರ ಹೆಗ್ಗಡೆ-ಗೋಲ್ಡನ್ ಸ್ಟಾರ್ ಗಣೇಶ್

ಜೀ಼ ಕನ್ನಡ ಜೀ಼ ಎಂಟರ್ಪ್ರೈಸಸ್ ಲಿಮಿಟೆಡ್ನ(ಜೀ಼ಲ್) ಕನ್ನಡದ ಸಾಮಾನ್ಯ ಮನರಂಜನಾ ಚಾನೆಲ್ ಆಗಿದೆ. ಮೇ 2006ರಲ್ಲಿ ಪ್ರಾರಂಭವಾದ ಜೀ಼ ಕನ್ನಡ ಜನಪ್ರಿಯ ಮನರಂಜನೆಯ ಆದ್ಯತೆಯಾಗಿದ್ದು ವಿಶ್ವದಾದ್ಯಂತ ಕನ್ನಡ ವೀಕ್ಷಕರನ್ನು ರಂಜಿಸುವ ಅಸಂಖ್ಯ ಕಾರ್ಯಕ್ರಮಗಳನ್ನು ನೀಡುತ್ತಿದೆ.

ಚಲನಚಿತ್ರಗಳು, ಧಾರಾವಾಹಿಗಳು ಗೇಮ್ಶೋಗಳು, ಟಾಕ್ ಶೋಗಳು ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳಿಂದ ಈ ಚಾನೆಲ್ ಬಹು ಪ್ರಕಾರಗಳ ಕೊಡುಗೆಗಳನ್ನು ನೀಡುತ್ತಿದೆ ಮತ್ತು ಮನರಂಜನೆಯ ಪ್ರಮುಖ ತಾಣವಾಗಿ ಅಪಾರ ಮೆಚ್ಚುಗೆ ಪಡೆದಿದೆ.

ಜೀ಼ ಕನ್ನಡ ಹಲವು ಬ್ಲಾಕ್ಬಸ್ಟರ್ ಕಾರ್ಯಕ್ರಮಗಳಾದ ವೀಕೆಂಡ್ ವಿಥ್ ರಮೇಶ್, ಸ ರೆ ಗ ಮ ಪ, ಮತ್ತು ಡ್ರಾಮಾ ಜೂನಿಯರ್ಸ್ ಮುಂತಾದವುಗಳನ್ನು ಸೃಷ್ಟಿಸಿದ್ದು ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುತ್ತವೆ. ಕಂಟೆಂಟ್ ಮತ್ತು ಕಾರ್ಯಕ್ರಮದ ಆಯ್ಕೆಯ ಸಮತೋಲಿತ ಮಿಶ್ರಣವಾದ ಜೀ಼ ಕನ್ನಡ ಕರ್ನಾಟಕದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಇಸಿಗಳಲ್ಲಿ ಒಂದಾಗಿದೆ.

ಜೀ಼ ಕನ್ನಡ ಎಲ್ಲ ಕೇಬಲ್ ಮತ್ತು ಡಿಜಿಟಲ್ ಪ್ಲಾಟ್ಫಾರಂಗಳಲ್ಲಿ ಉತ್ತಮ ಸಂಪರ್ಕ ಹೊಂದಿದೆ. ಈ ಚಾನೆಲ್ ಜೀ಼ಲ್ ಡಿಜಿಟಲ್ ಮತ್ತು ಮೊಬೈಲ್ ಮನರಂಜನೆಯ ಪ್ಲಾಟ್ಫಾರಂ ಜೀ಼5ನಲ್ಲಿ ಕೂಡಾ ಲಭ್ಯವಿದ್ದು ನೀವು ನಿಮ್ಮ ಅಚ್ಚುಮೆಚ್ಚಿನ ಜೀ಼ ಕನ್ನಡ ಶೋಗಳನ್ನು ತಪ್ಪಿಸಿಕೊಳ್ಳದಂತೆ ದೃಢಪಡಿಸುತ್ತದೆ.

ಜೀ಼ ಪ್ರೈಮ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಿ, ಅದರಲ್ಲಿ ಜೀ಼ ಕನ್ನಡ ಮತ್ತು ಜೀ಼ ಪಿಚ್ಚರ್ ಕೇವಲ 19 ರೂ.ಗಳಲ್ಲಿ ನಿಮ್ಮ ಇಡೀ ಕುಟುಂಬದ ದೈನಂದಿನ ಮನರಂಜನೆಯ ಅಗತ್ಯಗಳನ್ನು ಪೂರೈಸುತ್ತದೆ. ಮತ್ತಷ್ಟು ವಿವರಗಳಿಗೆ ದಯವಿಟ್ಟು ನಿಮ್ಮ ಡಿಟಿಎಚ್ ಅಥವಾ ಕೇಬಲ್ ಆಪರೇಟರ್ ಸಂಪರ್ಕಿಸಿ.

ಜೀ಼ ಕನ್ನಡದ ಖ್ಯಾತ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಪ್ರೇಕ್ಷಕರ ಮನೆ ಮನ ಗೆದ್ದ ಶೋ. ಮೋಸ್ಟ್ ಹ್ಯಾಂಡ್ಸಮ್ ಹೀರೋ ರಮೇಶ್ ಅರವಿಂದ್ ಈ ಶೋವನ್ನು ಹೋಸ್ಟ್ ಮಾಡುತ್ತಿದ್ದು, ಇದಕ್ಕೊಂದು ಘನತೆ ತಂದುಕೊಟ್ಟಿದ್ದಾರೆ. ವೀಕೆಂಡ್ ವಿಥ್ ರಮೇಶ್ ಈಗಾಗಲೇ ಹೆಸರು ಮಾಡಿ ಜನಾದರಣೆಯನ್ನು ಪಡೆದುಕೊಂಡಿದೆ.

ಪ್ರತಿ ಶನಿವಾರ ಹಾಗೂ ಭಾನುವಾರ ಬಂತು ಅಂದ್ರೆ ಸಾಕು ಕರ್ನಾಟಕದ ಬಹುತೇಕ ಮನೆಗಳಲ್ಲಿ ಕಣ್ಣಾಲಿಗಳು ಒದ್ದೆಯಾಗ್ತಿದ್ವು. ಮುಖದಲ್ಲಿ ಕಿರುನಗೆಯೊಂದು ಮೂಡುತ್ತಿತ್ತು. ಸಾಧನೆ ಮೆಟ್ಟಿಲೇರಬೇಕೆನ್ನೋ ಆಶಯವನ್ನೊತ್ತ ಅನೇಕರಿಗೆ ಸ್ಪೂರ್ತಿ ಸಿಗುತ್ತಿದ್ದಿದ್ದೇ ವಾರಾಂತ್ಯಕ್ಕೆ.

ಅಷ್ಟರ ಮಟ್ಟಿಗೆ ಜನರ ಮನಸಿನ ಮೇಲೆ ಪ್ರಭಾವ ಬೀರುತ್ತಿದ್ದ ಕಾರ್ಯಕ್ರಮವೇ ವೀಕೆಂಡ್ ವಿಥ್ ರಮೇಶ್. ಡಾ. ವೀರೇಂದ್ರ ಹೆಗ್ಗಡೆ ಅವರ ಸ್ಪೂರ್ತಿದಾಯಕ ಕಥೆಯನ್ನು ಕರುನಾಡ ಮುಂದೆ ತೆರೆದಿಟ್ಟ ವಿಕೆಂಡ್ ವಿತ್ ರಮೇಶ್ ಸೂಪರ್ ಸಂಚಿಕೆ ಮತ್ತೊಮ್ಮೆ ನಿಮಗಾಗಿ. ಡಾ. ವೀರೇಂದ್ರ ಹೆಗ್ಗಡೆ ಪ್ರಸಿದ್ಧ ಧರ್ಮಸ್ಥಳ ಕ್ಷೇತ್ರದಲ್ಲಿರುವ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳು ಇವರು ಯಾರಿಗೆ ಗೊತ್ತಿಲ್ಲ ಹೇಳಿ .

ಇವರು ನಮ್ಮ ಕನ್ನಡ ನಾಡಿಗೆ ಅಷ್ಟೇ ಅಲ್ಲ ಇಡೀ ದೇಶಕ್ಕೆ ಹೆಮ್ಮೆ ಎಂದರೆ ತಪ್ಪಾಗುವುದಿಲ್ಲ. ವೀರೇಂದ್ರ ಹೆಗ್ಗಡೆಯವರು ನವೆಂಬರ್ 25, 1948 ರಂದು ಜನಿಸಿದರು. ಅವರು 22 ವರ್ಷದವರಿರುವಾಗಲೆ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಯಾದರು.

ಸ್ವತಃ ಜೈನರಾಗಿ ಹಿಂದೂ ದೇವಸ್ಥಾನದ ಧರ್ಮದರ್ಶಿಯಾಗಿ ಕಾರ್ಯ ನಿರ್ವಹಿಸುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ ಎಂದು ಹೆಸರು ಬರುವಂತೆ ಮಾಡಿದ್ದಾರೆ.

ಧರ್ಮಸ್ಥಳದ ಬೃಹತ್ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು. ಧರ್ಮಸ್ಥಳದಲ್ಲಿ ಇಲ್ಲಿಯವರೆಗು 21 ತಲೆಮಾರುಗಳ ಹೆಗ್ಗಡೆ ಕುಟುಂಬವು ಧಾರ್ಮಿಕ ಚಟುವಟಿಕೆಗಳಿಗೆ ತೊಡಗಿಸಿಕೊಂಡಿದ್ದಾರೆ. ಇವರುಗಳಲ್ಲಿ ಶ್ರೀ ಮಂಜಯ್ಯ ಹೆಗ್ಗಡೆ ಹಾಗು ಶ್ರೀ ರತ್ನವರ್ಮ ಹೆಗ್ಗಡೆಯವರ ಕಾಲದಲ್ಲಿ ಧರ್ಮಸ್ಥಳವು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಮೂಡಿತು.

ಇವರುಗಳ ಕಾಲದಲ್ಲಿ ರಸ್ತೆಗಳು, ಅತಿಥಿ ಗೃಹಗಳು, ಭೋಜನಾ ಶಾಲೆಗಳು, ಮದುವೆ ಮಂಟಪಗಳು ಹಾಗೂ ಇನ್ನು ಹಲವು ಅಭಿವೃದ್ಧಿ ಕಾರ್ಯಗಳು ಕಾರ್ಯರೂಪಕ್ಕೆ ಬಂದವು. ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟವನ್ನು ಹೆಗ್ಗಡೆ ಕುಟುಂಬವು ಅಚುಕಟ್ಟಾಗಿ ನಿಭಾಯಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ.

ಜೀ಼ ಕನ್ನಡದ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಆಗಮಿಸಿದ್ದರು. ಅವರ ಮಗಳು ಶ್ರದ್ಧಾ ಅಪ್ಪನೊಂದಿಗಿನ ಬಾಲ್ಯದ ನೆನಪುಗಳನ್ನು ಮೆಲುಕ… ಅಪ್ಪ ಎಂದರೆ ನನಗೆ ಅವರು ಹೇಳುತ್ತಿದ್ದ ಕಥೆಗಳು ನೆನಪಾಗುತ್ತದೆ. ಸುಧಾ, ತರಂಗದ ಕಥೆಗಳನ್ನು ಹೇಳುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಅವರೇ ಕಲ್ಪಿಸಿಕೊಂಡು ಹೇಳುವ ಕಥೆಗಳು ಇನ್ನೂ ಖುಷಿಯಾಗುತ್ತಿತ್ತು.

ಯಾಕಂದ್ರೆ ಅದರಲ್ಲಿ ನಾನೇ ಹೀರೋಯಿನ್! ಎಂದು ಶ್ರದ್ಧಾ ಹೇಳಿದರು. ದೇವಲೋಕದಿಂದ ನಾರದ ಬರ್ತಾ ಇದ್ದ. ನಾನು ಕೆಳಗೆ ಆಟ ಆಡ್ತಾ ಇದ್ದೆ. ಬಂದು ಎತ್ತಿಕೊಂಡು ಹೋಗ್ತಾ ಇದ್ದ. ನಾವು ಮೋಡಗಳ ಮಧ್ಯೆ ಹೋಗುವಾಗ ಏನೇನೋ ಬದಲಾವಣೆಗಳಾಗುತ್ತಿದ್ದವು ಎಂದು ತಂದೆ ಹೇಳುತ್ತಿದ್ದ ಕಥೆಗಳನ್ನು ಮೆಲುಕು ಹಾಕಿದರು. ಈ ಕಥೆಗಳನ್ನು ಕೇಳು ನಾವು ಕಳೆದು ಹೋಗುವುದು ಖಚಿತ. ಖಾಸಗಿ ಮನರಂಜನಾ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಕಾಮಿಡಿ ಟೈಮ್’ ಕಾರ್ಯಕ್ರಮದಲ್ಲಿ ಪತ್ರ ಬರೆದವರಿಗೆ ಫೋನ್ ಮಾಡಿ, ಅವರ ಕಾಲೆಳೆದು, ಸಿಕ್ಕಾಪಟ್ಟೆ ಮನರಂಜನೆ ನೀಡುತ್ತಿದ್ದ ಗಣೇಶ್ ನಂತರ ಹೀರೋ ಆಗಿ, ‘ಗೋಲ್ಡನ್ ಸ್ಟಾರ್’ ಆಗಿ ಬೆಳೆದ ರೀತಿಯೇ ಅದ್ಭುತ.

ಅಷ್ಟಕ್ಕೂ, ‘ಕಾಮಿಡಿ ಟೈಮ್’ ಕಾರ್ಯಕ್ರಮ ನಡೆಸಿಕೊಡುವ ಅವಕಾಶ ಮೊದಲು ಸಿಕ್ಕಿದ್ದು ರವಿಶಂಕರ್ ರವರಿಗೆ.! ಆದ್ರೆ, ಧಾರಾವಾಹಿಗಳಲ್ಲಿ ರವಿಶಂಕರ್ ಬಿಜಿ ಇದ್ದ ಕಾರಣ, ‘ಕಾಮಿಡಿ ಟೈಮ್’ ಪ್ರೋಗ್ರಾಂಗೆ ಗಣೇಶ್ ಹೆಸರನ್ನ ಸೂಚಿಸಿದ್ರಂತೆ ರವಿಶಂಕರ್ ಗೌಡ. ಇಷ್ಟವಿಲ್ಲದೇ, ‘ಕಾಮಿಡಿ ಟೈಮ್’ ಪ್ರೋಗ್ರಾಂ ಒಪ್ಪಿಕೊಂಡ ಗಣೇಶ್ ಗೆ ನಂತರ ಸಿಕ್ಕಿದ್ದು ಜನಪ್ರಿಯತೆ ಎಂಬ ವರದಾನ.

”ಕಾಮಿಡಿ ಟೈಮ್’ ಗಣೇಶ್ ನ ಹೀರೋ ಮಾಡ್ತಿದ್ದೀರಾ. ತಲೆ ಕೆಟ್ಟಿದ್ಯಾ ನಿಮಗೆ.? ಹೀಗಂತ, ಅನೇಕ ಜನ ‘ಚೆಲ್ಲಾಟ’ ಸಿನಿಮಾ ಮಾಡಲು ಮುಂದಾಗಿದ್ದ ನಿರ್ಮಾಪಕರನ್ನ ಕೇಳಿದ್ದರಂತೆ. ಅಲ್ಲಿಯವರೆಗೂ, ಕನ್ನಡ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಪೋಷಿಸುತ್ತಾ ಬಂದಿದ್ದ ಗಣೇಶ್, ‘ಕಾಮಿಡಿ ಟೈಮ್’ ಪ್ರೋಗ್ರಾಂನಲ್ಲಿ ಪ್ರಾಂಕ್ ಕಾಲ್ ಗಳನ್ನು ಮಾಡಿ ಜನರನ್ನು ರಂಜಿಸುತ್ತಿದ್ದರು.

ಗಣೇಶ್ ರವರನ್ನ ಹೀರೋ ಮಾಡಬೇಕು ಎಂದು ನಿರ್ಮಾಪಕರೊಬ್ಬರು ಮುಂದೆ ಬಂದಾಗ, ನೆಗೆಟಿವ್ ಕಾಮೆಂಟ್ ಗಳೇ ಹೆಚ್ಚಾಗಿ ಕೇಳಿಬಂದಿದ್ದವು. ತಮ್ಮ ‘ಕಾಮಿಡಿ ಟೈಮ್’ ದಿನಗಳ ಬಗ್ಗೆ ನಟ ಗಣೇಶ್ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಹೇಳಿದಿಷ್ಟು. ಗಣೇಶ್ ಹೀರೋ ಆದ ರೋಮಾಂಚಕ ಕಥೆಯನ್ನ ಇದೇ ಭಾನುವಾರ ವಿಕೆಂಡ್ ವಿತ್ ರಮೇಶ್ ಶೋನ ಮರುಪ್ರಸಾರದಲ್ಲಿ ನೋಡಿ ನಿಮ್ಮ ಲಾಕ್ ಡೌನ್ ಸಮಯವನ್ನ ಎಂಜಾಯ್ ಮಾಡಿ.

ಮೇ 2 2020ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಡಾ. ವೀರೇಂದ್ರ ಹೆಗ್ಗಡೆ ಎಪಿಸೋಡ್, ಭಾನುವಾರ ಮಧ್ಯಾಹ್ನ 1 ಗಂಟೆಗೆ ಗೋಲ್ಡನ್ ಸ್ಟಾರ್ ಗಣೇಶ್ ಎಪಿಸೋಡ್ ಪ್ರಸಾರವಾಗಲಿದೆ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ನೋಡಿ ಕುಟುಂಬದ ಜೊತೆ ನೋಡಿ ಆನಂದಿಸಿ.

Related posts