Cinisuddi Fresh Cini News 

ಶೀಘ್ರದಲ್ಲೇ “ಗಿಮಿಕ್” ಮಾಡಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

ಸಾಮಿ ಪಿಕ್ಚರ್ಸ್ ಲಾಂಛನದಡಿಯಲ್ಲಿ ಶ್ರೀ ದೀಪಕ್ ನಿರ್ಮಿಸುತ್ತಿರುವ “ಗಿಮಿಕ್ “ಚಿತ್ರಕ್ಕೆ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ಮಾತಿನ ಮರುಲೇಪನ ಕಾರ್ಯ ಮುಕ್ತಾಯಗೊಂಡಿತು.

ಚಿತ್ರಕ್ಕೆ ಇದೀಗ ರಿರಿಕಾರ್ಡಿಂಗ್‍ ಕಾರ್ಯ ಆರಂಭಗೊಂಡಿದ್ದು, ಅತಿ ಶೀಘ್ರದಲ್ಲೇ ಚಿತ್ರವುತೆರೆಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರಕ್ಕೆ ನಂಜುಂಡ ಸಂಭಾಷಣೆ, ಕವಿರಾಜ್ ಸಾಹಿತ್ಯ, ಅರ್ಜುನ್‍ಜನ್ಯಾ, ಸಂಗೀತ ವಿಘ್ನೇಶ್‍ಛಾಯಾಗ್ರಹಣ, ಸುರೇಶ್‍ಕಲೆ, ಮುರಳಿ, ನೃತ್ಯ, ಸುರೇಶ್‍ಅರಸ್ ಸಂಕಲನ, ನಾರಾಯಣ್ ನಿರ್ದೇಶನ ಸಹಕಾರ, ರಾಮಣ್ಣ ನಿರ್ಮಾಣ, ನಿರ್ವಹಣೆಯಿದ್ದುಚಿತ್ರವನ್ನು ಸಂಗೊಳ್ಳಿ ರಾಯಣ್ಣ, ಮುನಿರತ್ನಕುರುಕ್ಷೇತ್ರ ಹೆಸರಾಂತ ಚಿತ್ರಗಳನ್ನು ನಿರ್ದೇಶಿಸಿದ ನಾಗಣ್ಣ ನಿರ್ದೇಶಿಸುತ್ತಿದ್ದಾರೆ.

ತಾರಾಗಣದಲ್ಲಿ ಗಣೇಶ್, ರೋನಿಕಾ ಸಿಂಗ್, ಸುಂದರರಾಜ್, ಶೋಭರಾಜ್, ಮಂಡ್ಯರಮೇಶ್, ಚಿ. ಗುರುದತ್, ರವಿಶಂಕರ್‍ಗೌಡ, ಸಂಗೀತಾ, ಶ್ವೇತಾ ಮುಂತಾದವರಿದ್ದಾರೆ.

Share This With Your Friends

Related posts