Cinisuddi Fresh Cini News 

ಈ ವಾರ ಬೆಳ್ಳಿ ಪರದೆ ಮೇಲೆ ಓಪನ್ ಆಗಲಿದೆ ‘ಗಿಫ್ಟ್ ಬಾಕ್ಸ್’

ಹಳ್ಳಿಚಿತ್ರ ಮೈಸೂರು ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಗಿಫ್ಟ್‍ಬಾಕ್ಸ್ ಚಿತ್ರವು ಈವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ. ಒಬ್ಬ ಮಾನವ ಕಳ್ಳ ಸಾಗಾಣಿಕೆ ಮಾಡುವ ವ್ಯಕ್ತಿ ಆತನ ವಯಕ್ತಿಕ ಜೀವನದಲ್ಲಿ ಏನಾಗುತ್ತದೆ ಎಂದು ಹೇಳುವ ಸೈಕಲಾಜಿಕಲ್, ಥ್ರಿಲ್ಲರ್ ಕಥೆ ಹೇಳುವ ಈ ಚಿತ್ರವನ್ನು ರಘು ಎಸ್.ಪಿ. ಕಥೆ, ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಈ ಚಿತ್ರಕ್ಕೆ ವಾಸುಧೀಕ್ಷಿತ್ ಸಂಗೀತ, ರಾಘವೇಂದ್ರ ಎಂ.ಬಿ. ಛಾಯಾಗ್ರಹಣ, ರಾಘವೇಂದ್ರ ಬಿ.ಆರ್. ರಘು ಎಸ್.ಪಿ ಸಾಹಿತ್ಯ, ಗುರುಸ್ವಾಮಿ ಟಿ ಸಂಕಲನವಿದೆ. ರಿತ್ವಿಕ್ ಮಠದ್, ಅಮಿತ್ ಕುಲಾಲ್, ದೀಪ್ತಿ ಮೋಹನ್, ಮುರಳಿ ಗುಂಡಣ್ಣ, ಶಿವಾಜಿರಾವ್ ಜಾದವ್, ಪ್ರಸಾದ್ ಹುಣಸೂರ್, ಪ್ರೊ|| ಲಕ್ಷ್ಮಿ ಚಂದ್ರಶೇಖರ್, ಇಂದಿರಾ ನಾಯರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

Share This With Your Friends

Related posts