Cinisuddi Fresh Cini News 

ನಿದ್ರೆಯಿಂದ ಎಡವಟ್ ಆಗಿದ್ರೆ ವಿಡಿಯೋ ಕಳಿಸಿ… ಜಂಟಲ್ ಮನ್ ಜತೆ ಸಿನಿಮಾ ನೋಡಿ…

ಇಲ್ಲಿದೆ ನೋಡ್ರಪ್ಪ… ಸಿನಿಮಾ ಪ್ರೇಮಿಗಳಿಗೆ ಒಂದು ಭರ್ಜರಿ ಅವಕಾಶ. ಸಾಮಾನ್ಯವಾಗಿ ಒಬ್ಬ ಮನುಷ್ಯ ದಿನಕ್ಕೆ 6 ರಿಂದ 8 ಗಂಟೆ ನಿದ್ದೆ ಮಾಡ್ತಾನೆ. ಇದು ಸಾಲಲ್ಲ ಅನ್ನುತ್ತ ಹೆಚ್ಚಿನ ಸಮಯ ನಿದ್ದೆ ಮಾಡೋದು ಒಂದು ರೀತಿ ಕಾಯಿಲೆನೇ…

ಈಗ ಇಂಥದ್ದೇ ಒಬ್ಬ ಜಂಟಲ್ ಮನ್ ಕುಂಭಕರ್ಣನಾಗಿ ನಿದ್ರೆಗೆ ಹೆಚ್ಚು ಸಮಯ ಕೊಡೋ ವ್ಯಕ್ತಿಯ ಕುರಿತ ಒಂದು ಸಿನಿಮಾ ಸಿದ್ಧವಾಗಿದೆ. ಜಿ ಸಿನಿಮಾಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಗುರು ದೇಶಪಾಂಡೆ ಯವರ ನಿರ್ಮಾಣದ ಜಡೇಶ್ ಕುಮಾರ್ ಹಂಪಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ “ಜಂಟಲ್ ‍ಮನ್” ಚಿತ್ರವನ್ನು ಪ್ರಜ್ವಲ್ ದೇವರಾಜ್ ಜೊತೆಗೆ ನೋಡುವ ಅವಕಾಶ ನಿಮಗಾಗಿ ಕಾದಿದೆ. ಅವಕಾಶಕ್ಕಾಗಿ ನೀವು ಮಾಡಬೇಕಿರವುದು ಇಷ್ಟೆ…

ನೀವು ಸಿಕ್ಕಾಪಟ್ಟೆ ನಿದ್ದೆ ಮಾಡಿ ಯಾವುದಾದರು ಎಡವಟ್ಟು ಮಾಡಿಕೊಂಡಿದ್ದರೆ ಆ ಸನ್ನಿವೇಶವನ್ನು ವಿಡಿಯೋ ಮಾಡಿ #ಜಂಟಲ್‍ಮ್ಯಾನ್ # ನಿದ್ದೆಎಡವಟ್ಟು ಗೆ ಟ್ಯಾಗ್ ಮಾಡಿ ನಮಗೆ ಶೇರ್ ಮಾಡಿ ಪ್ರಜ್ವಲ್ ದೇವರಾಜ್ ಜೊತೆಗೆ ಜಂಟಲ್ ಮ್ಯಾನ್ ಸಿನೆಮಾ ನೋಡುವ ಅವಕಾಶ ಪಡೆಯಿರಿ. ಈ ಚಿತ್ರದ ನಟಿ ನಿಶ್ವಿಕಾ ನಾಯ್ಡು ಅವರನ್ನು ನೋಡುವ ಅವಕಾಶವೂ ಸಿಗಲಿದೆಯಂತೆ. ಹೊಸ ವರ್ಷದ ಜನವರಿಯಲ್ಲಿ ಬಿಡುಗಡೆಗೆ ಸಿದ್ಧವಿರುವ ಈ ಚಿತ್ರವನ್ನು ನೋಡುವ ಅವಕಾಶ ನಿಮ್ಮದಾಗಲಿದೆ.

Share This With Your Friends

Related posts