Cinisuddi Fresh Cini News Tv / Serial 

Aug 04th 11:11AM ಗೆ “ಗತವೈಭವ” ಹೀರೋಯಿನ್ ಅನೌನ್ಸ್ ಮೆಂಟ್.

ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂನಲ್ಲಿ ಸಿನಿ ಪ್ರಿಯರಿಗಾಗಿ ವಿಭಿನ್ನ ರೀತಿಯಲ್ಲಿ “ಗತವೈಭವ” ಚಿತ್ರದ ನಾಯಕಿ ಯಾರೆಂದು ತಿಳಿಸಿದ್ದಾರೆ ನಿರ್ದೇಶಕ ಸಿಂಪಲ್ ಸುನಿ. ತಮ್ಮ ಪ್ರಥಮ ಚಿತ್ರದಿಂದ ಇಲ್ಲಿವರೆಗೂ ಒಂದಲ್ಲ ಒಂದು ವಿಶೇಷ ರೀತಿಯಲ್ಲಿ ಗಮನ ಸೆಳೆಯುತ್ತಿರುವ ಸಿಂಪಲ್ ಸುನಿ ಈ ಬಾರಿ “ಗತವೈಭವ” ಚಿತ್ರದ ಟೈಟಲ್ ಹಾಗೂ ನಾಯಕನ ಇಂಟ್ರೊಡಕ್ಷನ್ ನಲ್ಲೂ ಕೂಡ ಬಹಳಷ್ಟು ಸದ್ದನ್ನ ಮಾಡಿದ್ರು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸೋಷಿಯಲ್ ಮೀಡಿಯಾದಲ್ಲಿ ನಾಯಕಿ ಯಾರೆಂದು ತಿಳಿಸಲು ಮತ್ತೊಬ್ಬ ಗ್ಲಾಮರಸ್ ಬೆಡಗಿ ಆಶಿಕಾ ರಂಗನಾಥ್ ಮೂಲಕ ಆಗಸ್ಟ್ 04ರಂದು ಬೆಳಿಗ್ಗೆ 11:11ಕ್ಕೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಲಿದ್ದಾರೆ. ಈ ಗತವೈಭವ ಚಿತ್ರವು ಪೀರಿಯಾಡಿಕ್ ಆಕ್ಷನ್ ಡ್ರಾಮಾ ಚಿತ್ರವಾಗಿದೆಯಂತೆ. ಕೆರಿಬಿಯನ್ ನೈಟ್ಸ್ ಹಾಗೂ ಬಿಲ್ಲು ಬಾಣ ಹಿಡಿದಿರುವ ಮಾದರಿಯ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ ಗಮನ ಸೆಳೆಯುತ್ತಿದೆ.

ಸುನಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ದೀಪಕ್ ತಿಮ್ಮಪ್ಪ ಮತ್ತು ಸಿಂಪಲ್ ಸುನಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಮೂಲಕ ದುಷ್ಯಂತ್ ಚಂದನವನಕ್ಕೆ ಭರವಸೆಯ ಪ್ರತಿಭೆಯಾಗಿ ಹೊರ ಬರಲಿದ್ದಾರೆ. ಈ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ ಸಂಯೋಜಿಸಲಿದ್ದು , ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಆಶಿಕ್ ಕುಸುಗೊಳ್ಳಿ ಸಂಕಲನ ಮಾಡಲಿದ್ದಾರೆ. ಸದ್ಯ ಹೀರೋಯಿನ್ ಯಾರು ಎಂದು ಚಿತ್ರತಂಡ ಹೇಳಲಿದ್ದು, ಮುಂದಿನ ದಿನಗಳಲ್ಲಿ ಚಿತ್ರತಂಡ ಹೆಚ್ಚಿನ ಮಾಹಿತಿ ನೀಡಲಿದೆ.

Related posts