Cinisuddi Fresh Cini News 

ಶುರುವಾಯ್ತು ಸಾಧುಕೋಕಿಲಾ-ಜಾನಿಲೀವರ್ ಕಾಮಿಡಿ ಕಿಕ್

ಕನ್ನಡನಾಡಿನ ಹಾಸ್ಯ ಚಕ್ರವರ್ತಿ ಸಾಧುಕೋಕಿಲಾ ಬಾಲಿವುಡ್‍ನ ಕಾಮಿಡಿ ಸುಲ್ತಾನ ಜಾನಿಲೀವರ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಗರ ಚಿತ್ರವು ಈ ಚಿತ್ರವು ಈ ವಾರ ಪ್ರೇಕ್ಷಕರಿಗೆ ಗರ ಹಿಡಿಸಲು ರಾಜ್ಯಾದಾದ್ಯಂತ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ.

ಕೆ.ಆರ್.ಮುರಳೀಕೃಷ್ಣ ಅವರು ನಿರ್ಮಿಸಿ, ನಿರ್ದೇಶಿಸಿರುವ ಗರ ಚಿತ್ರದಲ್ಲಿ ಆತ್ಮದ ಕಥೆ ಇದ್ದು, ವೃತ್ತಿಯಲ್ಲಿ ಹಲವು ವರ್ಷಗಳಿಂದ ಸ್ಯಾಂಡಲ್‍ವುಡ್‍ನಲಲ್ಲಿ ಗುರುತಿಸಿಕೊಂಡಿದ್ದಾರೆ, ಇವರ ಸಹೋದರ ಶಾಂತರಾಮ್ ಕೂಡ ಪ್ರಸಿದ್ಧ ನಿರ್ದೇಶಕರು.

ಆರ್.ಕೆ.ನಾರಾಯಣ ಅವರ ಸಣ್ಣ ಕಥೆಯನ್ನು ಆಧರಿಸಿ ಸಿದ್ಧವಾಗಿರುವ ಈ ಚಿತ್ರದ ಮೂಲಕ ಸುದ್ದಿ ವಾಚಕ ರೆಹಮಾನ್ ನಾಯಕನಟನಾಗಲು ಹೊರಟಿದ್ದು, ಇದರಲ್ಲಿ ಅವರಿಗೆ 3 ಶೇಡ್ ಇರುವ ಪಾತ್ರಘಿ. ನಾಯಕಿಯರಾಗಿ ನೇಹಾಪಾಟೀಲ್, ರಾಧಿಕಾಚೇತನ್ ಇದ್ದರೆ, ಹಾಸ್ಯದ ಹೊನಲು ಹರಿಸಲು ಸಾಧುಕೋಕಿಲಾ, ಜಾನಿಲೀವರ್ ಇರುವುದರಿಂದ ಇದೊಂದು ಹಿರಿಯರು ಹಾಗೂ ಹೊಸಬರ ಸಂಗಮದ ಚಿತ್ರವಾಗಿದೆ.

ಮೊನ್ನೆ ಗರ ಚಿತ್ರದ ಟ್ರೇಲರ್ ಮತ್ತು ಟೈಟಲ್ ಸಾಂಗ್ ಬಿಡುಗಡೆ ಆಯಿತು. ಈ ವೇಳೆ ಮಾತನಾಡಿದ ನಿರ್ದೇಶಕ ಮುರಳೀಕೃಷ್ಣ ಅವರು, ನಾನು ಕೇವಲ ದುಡ್ಡು ಮಾಡುವ ದೃಷ್ಟಿಯಿಂದ ಗರ ಚಿತ್ರವನ್ನು ಮಾಡಿಲ್ಲ. ಈ ಹಿಂದೆ ನಾನು ಅಂಬರೀಷ್ ಅಭಿನಯದ ಕರ್ಣನ ಸಂಪತ್ತು ಚಿತ್ರವನ್ನು ಇದೇ ಮನೋಭಾವದಿಂದ ಮಾಡಿದ್ದೆ. ಇಂಥಹ ಚಿತ್ರಗಳು ಜನರಿಗೆ ತಲುಪಬೇಕು.

ಕನ್ನಡದಲ್ಲಿ ಹಲವಾರು ಉತ್ತಮ ಕಥೆಗಳಿವೆ. ಬಂದ ಉತ್ತರಗಳನ್ನು ಸಮೀಕರಣ ಮಾಡಿದಾಗ ಹುಟ್ಟಿz್ದÉೀ ಗರ ಸಿನಿಮಾ ಕಥೆ. ಛಾಯಾಗ್ರಾಹಕ ವೇಣುನನ್ನಲ್ಲಿರುವ ಭಾವನೆಗಳನ್ನು ಸ್ಕ್ರೀನ್ ಮೇಲೆ ಮೂಡಿಸಿದಾಗ ಎಲ್ಲ ಕಲಾವಿದರ ಜೊತೆ ಕೆಲಸ ಮಾಡಿದ್ದು ಫ್ಯಾಮಿಲಿ ಅಟ್ಯಾಚಮೆಂಟ್ ಮೂಡಿಸಿದೆ ಎಂದು ಹೇಳಿದರು.

ನಟ ರೆಹಮಾನ್ ಮಾತನಾಡಿ, ನಾನು ಸುದ್ದಿ ವಾಚಕನಾಗಿ ಕೆಲಸ ಸೇರಿದಾಗ ತುಂಬಾ ಭಯವಾಗಿತ್ತು, ಆದರೆ ನಂತರ ಉತ್ತಮ ನ್ಯೂಸ್ ರೀಡರ್ ಆದೆ, ಹಾಗೆಯೇ ಚಿತ್ರರಂಗವು ನನಗೆ ಹೊಸದು, ಅದರಲ್ಲೂ ನಾನು ನಟಿಸುತ್ತಿರುವ ಮೊದಲ ಚಿತ್ರದಲ್ಲೇ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದು ತುಂಬಾ ಛಾಲೆಂಜ್ ಆಗಿತ್ತು ಪ್ರೇಕ್ಷಕರನ್ನು ನನ್ನ ಪ್ರಯತ್ನಕ್ಕೆ ಉತ್ತಮ ಅಂಕಗಳನ್ನು ನೀಡುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.

ನಟಿ ಪ್ರಿಯಾಂಕಾ ಕೂಡ ತಮ್ಮ ಪಾತ್ರದ ಬಗ್ಗೆ ಒಂದೆರಡು ಸಾಲಿನಲ್ಲಿ ಹಂಚಿಕೊಂಡರು. ಸಂಗೀತ ನಿರ್ದೇಶಕ ಸಾಗರ ಗುರುರಾಜ ಮಾತಾನಾಡಿ, ಗುಂಗುಂ ಗರ ಎಂಬ ಟೈಟಲ್ ಸಾಂಗ್‍ನ್ನು ಚಿತ್ರದ ಪ್ರಮೋಷನ್‍ಗಾಗಿ ಮಾಡಿದ್ದು ತುಂಬಾ ಸೊಗಸಾಗಿ ಮೂಡಿಬಂದಿದೆ. ಗರ ಚಿತ್ರದ ಕಥೆಯು ಅಷ್ಟೇ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.

ಹಿರಿಯ ನಟ ಮನದೀಪರಾಯ್ ಮಾತನಾಡಿ ಶಾಂತಾರಾಂ ಹಾಗೂ ಮುರಳಿಕೃಷ್ಣನನ್ನು ಹಳೇ ಸ್ನೇಹಿತರು, ನಮ್ಮಂತಹ ಹಳಬರನ್ನು ಗುರುತಿಸಿ ಅವಕಾಶ ನೀಡಿದ್ದಕ್ಕೆ ತುಂಬಾ ಸಂತೋಷವಾಯಿತು ಎಂದರು.

ಹಿರಿಯ ನಟ ಎಂ.ಎಸ್.ಉಮೇಶ್ ಅವರ ಹುಟ್ಟುಹಬ್ಬವಿದ್ದರಿಂದ ಸ್ಟೇಜ್ ಮೇಲೆ ಅವರ ಜನ್ಮದಿನವನ್ನು ಆಚರಿಸಿಕೊಂಡರು. ತಂತ್ರಜ್ಞರಾದ ನಾಗಣ್ಣ, ಪೋಸ್ಟರ್ ವಿನ್ಯಾಸಕಾರ ತೇಜಸ್, ನವನಟಿ ವನಿತಾಮೃತ ಅವರನ್ನು ಪರಿಚಯಿಸಿದರು. ಗರ ಚಿತ್ರದ ಮೂಲಕ ನಾಯಕನಾಗಲು ಹೊರಟಿರುವ ರೆಹಮಾನ್ ಅವರಿಗೆ ಈ ಚಿತ್ರದ ಯಶಸ್ಸು ಮತ್ತಷ್ಟು ಅವಕಾಶಗಳನ್ನು ನೀಡುವಂತಾಗಲಿ.

Share This With Your Friends

Related posts