Cinisuddi Fresh Cini News 

“ಗಾಜನೂರು” ಚಿತ್ರ ತಂಡಕ್ಕೆ ಶುಭ ಕೋರಿದ ಎಡಿಜಿಪಿ ಭಾಸ್ಕರ್ ರಾವ್

ಜನವರಿ 15 ಸುಗ್ಗಿ ಹಬ್ಬ ಸಂಕ್ರಾಂತಿ . ಈ ಹಬ್ಬದ ಸಂಭ್ರಮದಲ್ಲೇ ಜನವರಿ 16 ರಂದು “ಗಾಜನೂರು” ಎಂಬ ನೂತನ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ.ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕೀರ್ತಿ ಅವರು ಕಥೆ, ಚಿತ್ರಕಥೆ ಬರೆದಿದ್ದು, ವಿಜಯ್ ನಿರ್ದೇಶಿಸುತ್ತಿದ್ದಾರೆ.

ಎಸ್.ಮೋಹನ್, ನಂದಕಿಶೋರ್ ಮುಂತಾದ ಖ್ಯಾತ ನಿರ್ದೇಶಕರ ಬಳಿ ಸಹನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ವಿಜಯ್ ಅವರ ನಿರ್ದೇಶನದ ಮೊದಲ ಚಿತ್ರ ಗಾಜನೂರು. ಮೂಲತಃ ಗುಲಬರ್ಗಾವರಾದ ಅವಿನಾಶ್ ತಮ್ಮ ಕೃತಿಕಾರಾಮ್ ಮೂವೀಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಇದು ಅವರ ನಿರ್ಮಾಣದ ಚೊಚ್ಚಲ ಚಿತ್ರ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀಧರ್. ವಿ .ಸಂಭ್ರಮ್ ಸಂಗೀತ ನೀಡುತ್ತಿದ್ದಾರೆ. ತನ್ವಿಕ್ ಛಾಯಾಗ್ರಹಣ, ಅಮಿತ್ ಜಾವಾಳ್ಕರ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಕ್ರಾಂತಿಕುಮಾರ್ ಸಂಭಾಷಣೆ ಬರೆಯುತ್ತಿದ್ದಾರೆ.

ತೀರ್ಥಹಳ್ಳಿ, ಬೆಂಗಳೂರಿನಲ್ಲಿ 35 ದಿನಗಳ ಚಿತ್ರೀಕರಣ ನಡೆಯಲಿದೆ.‌ ಅವತಾರ್, ರವಿಶಂಕರ್, ತಬಲಾನಣಿ, ಕುರಿ ಪ್ರತಾಪ್, ಗೋಪಾಲಕೃಷ್ಣ ದೇಶಪಾಂಡೆ, ಬಾಬು ಹಿರಣ್ಣಯ್ಯ, ತರಂಗ ವಿಶ್ವ, ವಾಣಿ, ಸಂತು ಮುಂತಾದವರು ಈ ಚಿತ್ರದ ‌ತಾರಾ ಬಳಗದಲ್ಲಿದ್ದಾರೆ.

ಇತ್ತೀಚೆಗೆ ಚಿತ್ರತಂಡದ ಸದಸ್ಯರು ಎ ಡಿ ಜಿ ಪಿ ಭಾಸ್ಕರ್ ರಾವ್ ಅವರನ್ನು ಭೇಟಯಾಗಿ ಚಿತ್ರ ಆರಂಭ ವಿಷಯ ತಿಳಿಸಿ ಆಶೀರ್ವಾದ ಪಡೆದರು. ಇನ್ನು ಈ ಚಿತ್ರ ತಂಡವು ಅದ್ದೂರಿ ಯಾಗಿ ಮುಹೂರ್ತವನ್ನು ನಡೆಸಲು ತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Related posts