Cinisuddi Fresh Cini News 

ಕಂಠೀರವ ಸ್ಟುಡಿಯೋದಲ್ಲಿ “ಗಾಜನೂರು” ಚಿತ್ರಕ್ಕೆ ಚಾಲನೆ

ಚಂದನವನದಲ್ಲಿ ಈಗ ಚಿತ್ರ ಚಟುವಟಿಕೆಗಳು ರಾರಾಜಿಸುತ್ತಿದ್ದು , ಕೊರೋನಾ ಹಾವಳಿಯಿಂದ ಕಂಗೆಟ್ಟಿದ್ದ ಚಿತ್ರರಂಗ ಈಗ ಚಿತ್ರಗಳ ಮುಹೂರ್ತ , ಚಿತ್ರೀಕರಣ , ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಿರಂತರವಾಗಿ ಸಾಗುತ್ತದೆ. ಆ ಹಾದಿಯಲ್ಲಿ ಅನುಭವಿ ಹಾಗೂ ಯುವ ಪಡೆಗಳ ಬಳಗ ಸೇರಿಕೊಂಡು ಅದ್ದೂರಿಯಾಗಿ ಕಂಠೀರವ ಸ್ಟುಡಿಯೋದಲ್ಲಿ “ಗಾಜನೂರು” ಎಂಬ ಚಿತ್ರದ ಮುಹೂರ್ತವನ್ನು ಆಚರಿಸಿಕೊಂಡಿದೆ. ಈ ಗಾಜನೂರು ಶೀರ್ಷಿಕೆ ಕೇಳಿದಾಕ್ಷಣ ನೆನಪಿಗೆ ಬರೋದು ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟೂರು , ಆದರೆ ಅಣ್ಣಾವ್ರ ಹುಟ್ಟೂರಿನ ಗಾಜನೂರಿಗೆ ಯಾವುದೇ ಸಂಬಂಧವಿಲ್ಲವoತೆ.

ಕೃತಿಕಾ ರಾಮ್ ಮೂವೀಸ್ ಲಾಂಛನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಅವಿನಾಶ್ ಕಲಬುರಗಿ ಬಂಡವಾಳ ಹೂಡುತ್ತಿದ್ದು , ಯುವ ನಿರ್ದೇಶಕ ವಿಜಯ್ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ.

ಈ ಚಿತ್ರದ ಅದ್ದೂರಿ ಮುಹೂರ್ತದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚೇಂಬರ್ ಅಧ್ಯಕ್ಷ ಜೈರಾಜ್, ಕರಿಸುಬ್ಬು ಸೇರಿ ಹಲವಾರು ಗಣ್ಯರು ಆಗಮಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ಇನ್ನು ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿಜಯ್ ಮಾತನಾಡುತ್ತಾ ಈ ಸಿನಿಮಾಕ್ಕೂ ಅಣ್ಣಾವ್ರಿಗೂ ಯಾವುದೇ ಸಂಬಂಧವಿಲ್ಲ. ಇದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಗಾಜನೂರಿನಲ್ಲಿ ನಡೆದ ನೈ ಘಟನೆ ಆಧರಿತ ಕಥೆ. ಪೊಲೀಸ್ ಠಾಣೆಯೊಂದರಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿರುತ್ತದೆ.

ಅದರ ಹಿನ್ನೆಲೆಯಲ್ಲಿ ತನಿಖೆಯ ಹಾದಿಯಲ್ಲಿ ಸಿನಿಮಾ ಸಾಗಲಿದೆ. ಗಾಜನೂರು, ಚಿಕ್ಕಮಗಳೂರು, ಬೆಂಗಳೂರಿನಲ್ಲಿ 40 ದಿನ ಚಿತ್ರೀಕರಣ ಮಾಡಲಿದ್ದೇವೆ. ಫೆಬ್ರವರಿ ಮೊದಲ ವಾರದಲ್ಲಿ ಶೂಟಿಂಗ್ ಶುರುವಾಗಲಿದೆ. ವಿದೇಶದಲ್ಲಿಯೂ ಹಾಡಿನ ಚಿತ್ರೀಕರಣ ಮಾಡುವ ಪ್ಲಾನ್ ಇದೆ ಎಂದರು ನಿರ್ದೇಶಕರು.

ಅದೇ ರೀತಿ ಚಿತ್ರದ ನಾಯಕ ಅವತಾರ್ ಈಗಾಗಲೇ ಕನ್ನಡ, ತೆಲುಗು, ತಮಿಳು, ತುಳು ಸೇರಿ ಒಟ್ಟು ಏಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಗಾಜನೂರು ಚಿತ್ರದಲ್ಲಿಯೂ ನಾಯಕನಾಗಿದ್ದಾರೆ. ಈ ವರೆಗೂ ಏಳೆಂಟು ಸಿನಿಮಾ ಮಾಡಿದ್ದೇನೆ. ಆದರೆ, ಯಾವುದೂ ಅಷ್ಟಾಗಿ ಹೆಸರು ತಂದುಕೊಡಲಿಲ್ಲ. ಎರಡು ವರ್ಷ ಸುಮ್ಮನೆ ಇದ್ದೆ.

ಒಳ್ಳೇ ಕಥೆಗಾಗಿ ಕಾಯುತ್ತಿದ್ದೆ. ಇದೀಗ ಆ ಸಮಯ ಗಾಜನೂರು ಮೂಲಕ ಬಂದಿದೆ. ಅದ್ದೂರಿಯಾಗಿಯೇ ಮುಹೂರ್ತ ನೆರೆವೇರಿದೆ. ನಾನಿಲ್ಲಿ ಒಬ್ಬ ನಾರ್ಮಲ್ ಹುಡುಗನಾಗಿ ಕಾಣಿಸಿಕೊಳ್ಳಲಿದ್ದೇನೆ. ನಾನು ಹೋಗುವ ಊರೊಂದರಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಆ ಘಟನೆಯ ಹಿನ್ನೆಲೆಯಲ್ಲಿ ನನ್ನ ಪಾತ್ರ ತೆರೆದುಕೊಳ್ಳಲಿದೆ.

ಪಾತ್ರಕ್ಕಾಗಿ ಡಾನ್ಸ್ ಮತ್ತು ಆ್ಯಕ್ಱನ್ ಸಹ ಕಲಿಯುತ್ತಿದ್ದೇನೆ ಎಂದರು ಅವತಾರ್. ಇನ್ನು ಚಿತ್ರದ ನಾಯಕಿಯಾಗಿ ಸೋನಲ್ ಮೊಂತೆರೋ ಆಯ್ಕೆ ಯಾಗಿದ್ದಾರೆ. ಕಳೆದ ಒಂದು ವಾರದಿಂದ ಈಚೆಗೆ ನಾಯಕಿಯ ಆಯ್ಕೆ ಅಂತಿಮವಾಗಿದೆ. ಈಗಷ್ಟೇ ಈ ತಂಡಕ್ಕೆ ಸೇರ್ಪಡೆಯಾಗಿದ್ದೇನೆ. ಒಳ್ಳೇ ಪಾತ್ರವೇ ಸಿಕ್ಕಿದೆ.

ಶೀಘ್ರದಲ್ಲಿ ಶೂಟಿಂಗ್ ನಲ್ಲಿಯೂ ಪಾಲ್ಗೊಳ್ಳಲಿದ್ದೇನೆ ಎಂದರು ಸೋನಲ್. ಚಿತ್ರದ ಮುಖ್ಯ ಪಾತ್ರದಲ್ಲಿ ಹಾಸ್ಯ ನಟ ತಬಲಾ ನಾಣಿ ಸಹ ನಟಿಸುತ್ತಿದ್ದಾರೆ. ನನ್ನದು ವಿಭಿನ್ನ ಪಾತ್ರ ಬಹಳಷ್ಟು ಟ್ವಿಸ್ಟ್ ಗಳು ಈ ಚಿತ್ರದಲ್ಲಿ ಇರುತ್ತದೆ. ನಗಿಸಲು ದೊಡ್ದ ತಂಡವೇ ಕಾಣುತ್ತದೆ ಎನ್ನುತ್ತಾ ಹೊಸ ಟೀಮ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ, ಯುವ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದರು.

ಇನ್ನುಳಿದಂತೆ ರವಿಶಂಕರ್, ಕುರಿ ಪ್ರತಾಪ್, ತರಂಗ್ ವಿಶ್ವ ಕಾಮಿಡಿ ಆರ್ಟಿಸ್ಟ್ ಸಂಗಮ ಈ ಸಿನಿಮಾದಲ್ಲಿ ಆಗಲಿರುವುದು ವಿಶೇಷ. ಚಿತ್ರದ ನಿರ್ಮಾಪಕ ಅವಿನಾಶ್ ಮಾತನಾಡುತ್ತಾ ಇದು ನಮ್ಮ ಮೊದಲ ನಿರ್ಮಾಣದ ಸಿನಿಮಾ. ನಾನು ಮೂಲತಃ ಕಲಬುರಗಿಯವನು ಕೇಟರಿಂಗ್ ನಮ್ಮ ಉದ್ಯಮ , ಸಿನಿಮಾ ಮಾಡಬೇಕೆಂಬ ಕ್ರೇಝ್ ಮೊದಲಿಂದಲೂ ಇತ್ತು. ಅದನ್ನೀಗ ನೆರವೇರಿಸಿಕೊಂಡಿದ್ದೇನೆ.

ಒಟ್ಟು ಎರಡೂವರೆ ಕೋಟಿ ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗಲಿದೆ. ವಿದೇಶದಲ್ಲಿಯೂ ಶೂಟ್ ಮಾಡುವ ಯೋಜನೆ ಇದೆ ಎಂದರು. ಇನ್ನು ಚಿತ್ರಕ್ಕೆ ಕಥೆ , ಚಿತ್ರಕತೆ ಬರೆದಿರುವ ಕೀರ್ತಿ ಮಾತನಾಡಿ ಈ ಕಥೆ ಒಂದು ವರ್ಷದ ಹಿಂದೆಯೇ ಕಥೆ ಹೇಳಿದ್ದೆ. ಅದೇ ಸಿನಿಮಾ ಮಾಡೋಣ ಎಂದು ಹೇಳಿದ್ದರು. ಇದೀಗ ಗಾಜನೂರು ಸಿನಿಮಾ ಸೆಟ್ಟೇರಿದೆ, ಈ ಚಿತ್ರದ ಶೀರ್ಷಿಕೆಗೂ ಅಣ್ಣಾವ್ರಿಗೆ ಯಾವುದೇ ಸಂಬಂಧವಿಲ್ಲ ಎಂದರು.

ಈ ಚಿತ್ರಕ್ಕೆ ಶ್ರೀಧರ್. ವಿ. ಸಂಭ್ರಮ್ ಸಂಗೀತ ನೀಡಲಿದ್ದು, ತನ್ವಿಕ್ ಛಾಯಾಗ್ರಹಣ, ಅಮಿತ್ ಜಾವಲ್ಕರ್ ಸಂಕಲನ, ಕಥೆ, ಚಿತ್ರಕಥೆ ಕೀರ್ತಿ, ಭೂಷಣ್ ನೃತ್ಯ ನಿರ್ದೇಶನ, ಕ್ರಾಂತಿ ಕುಮಾರ್ ಸಂಭಾಷಣೆ ಬರೆದಿದ್ದಾರೆ. ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಟಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಹೆಚ್ಚಿನ ವಿಚಾರವನ್ನು ತಂಡ ನೀಡಲಿದೆಯಂತೆ.

Related posts