Bollywood Cini Gossips Cinisuddi Fresh Cini News 

ಫೋಟೋಗ್ರಾಫರ್ ಜೊತೆ ಫ್ರೀಡಾ ಪಿಂಟೋ ಎಂಗೇಜ್‍ಮೆಂಟ್

ಬಿ-ಟೌನ್‍ನಲ್ಲಿ ವಿದೇಶಿ ತರುಣರ ಜೊತೆ ನಟಿಯರ ನಂಟು ಹೊಸದೇನಲ್ಲ. ಇಂಥ ಅನೇಕ ಪ್ರೇಮ ಪ್ರಸಂಗಗಳು ಹ್ಯಾಪಿ ಎಂಡಿಂಗ್ ಆಗಿವೆ. ಕೆಲವು ಮುರಿದು ಬಿದ್ದಿವೆ. ಪ್ರಿಯಾಂಕಾ ಚೋಪ್ರಾ-ನಿಕ್ ಜೋನ್ಸ್, ಪ್ರೀತಿ ಜಿಂಟಾ-ಜೀನ್ ಗುಡ್‍ಎನಫ್, ಇಲಿಯಾನ ಡಿಕ್ರೂಜ್-ಆಂಡ್ರ್ಯೂ ನೀಬೋನ್ (ಬ್ರೇಕ್ ಅಪ್ ಆಗಿದೆ), ಶ್ರೇಯ ಶರಣ್-ಆಂಡ್ರೀ ಕೋಸ್‍ಚೀವ್, ಲೀಸಾ ರೈ- ಜಾಸನ್ ಡೆಹ್ನಿ ಇತ್ಯಾದಿ

ಈಗ ಈ ಸಾಲಿಗೆ ಮತ್ತೊಂದು ಸೇರ್ಪಡೆ ಸ್ಲಮ್ ಡಾಗ್ ಮಿಲೇನಿಯರ್ ಖ್ಯಾತಿ ನಟಿ ಫ್ರೀಡಾ ಪಿಂಟೋ. ಫೋಟೋಗ್ರಾಫರ್ ಕೊರಿ ಟ್ರಾನ್ ಜೊತೆ ಈಕೆಯ ಎಂಗೇಜ್‍ಮೆಂಟ್ ಆಗಿದೆ. ಈ ವಿಷಯವನ್ನು ಫ್ರೀಡಾ, ಇನ್‍ಸ್ಟಾಗ್ರಾಂ ಮೂಲಕ ಖಚಿತಪಡಿಸಿದ್ದಾಳೆ. ಅಲ್ಲದೇ ಇವರಿಬ್ಬರ ಫೋಟೋಗಳೂ ಸಹ ವೈರಲ್ ಆಗಿವೆ.

ಜೀವನಕ್ಕೆ ಈಗ ಒಂದು ಅರ್ಥ ಬಂದಿದೆ. ಪ್ರೀತಿ-ಪ್ರೇಮಕ್ಕೂ ಒಂದು ಅರ್ಥ ಲಭಿಸಿದೆ. ನನ್ನ ಜೀವನದಲ್ಲಿ ಕೊರಿ ಟ್ರಾನ್ ಪ್ರವೇಶಿಸುವ ಮೂಲಕ ನನ್ನ ಜೀವನಕ್ಕೂ ಹೊಸ ಅರ್ಥ ಬಂದಿದೆ ಎಂದು ಈ ಸಹಜ ಸುಂದರಿ ಹೇಳಿಕೊಂಡಿದ್ದಾಳೆ.

ಹಿಂದಿ ಸಿನಿಮಾ ಜೊತೆಗೆ ಬ್ರಿಟನ್ ಮತ್ತು ಅಮೆರಿಕನ್ ಚಿತ್ರಗಳಲ್ಲೂ ನಟಿಸುತ್ತಿರುವ ಫ್ರೀಡಾಗೆ ಎರಡು ವರ್ಷಗಳ ಹಿಂದೆ ಫೋಟೋಗ್ರಾಫರ್ ಟ್ರಾನ್ ಪರಿಚಯವಾಗಿತ್ತು. ಈ ಪರಿಚಯ ಗಾಢ ಸ್ನೇಹಕ್ಕೆ, ಗಾಢ ಸ್ನೇಹ ಅಗಲಿರಲಾದ ಪ್ರೀತಿಗೆ. ಅಗಲಿರಲಾಗದ ಪ್ರೀತಿ ಬಿಡಿಸಲಾಗದ ಮದುವೆ ಬಂಧದವರೆಗೂ ತಲುಪಿದೆ. ಈ ಜೋಡಿಗೆ ಬಾಲಿವುಡ್‍ನ ನಿರ್ದೇಶಕರು, ನಿರ್ಮಾಪಕರು, ನಟ-ನಟಿಯರು ಶುಭ ಕೋರಿದ್ದಾರೆ.

ಫ್ರೀಡಾ ಫಿಂಟೊ 2018ರಲ್ಲಿ ನಟಿಸಿದ್ದ ಲವ್ ಸೋನಿಯಾ ಮತ್ತು ಮೌಗ್ಲಿ : ಲೆಜೆಂಡ್ ಆಫ್ ಸಿ ಜಂಗಲ್ ಸೂಪರ್ ಹಿಟ್ ಆಗಿ ಅನೇಕ ಪ್ರಶಸ್ತಿ-ಪುರಸ್ಕಾರ ಗಳನ್ನು ಗಳಿಸಿತ್ತು. ಈ ಪ್ರತಿಭಾನ್ವಿತೆ ಅಭಿಯನದ ಇನ್ನೂ ಮೂರು ಹಾಲಿವುಡ್ ಸಿನಿಮಾಗಳು ತೆರೆಕಾಣಲಿವೆ.

ನೀಡ್ಲ್ ಇನ್ ಎ ಟೈಮ್‍ಸ್ಟಾಕ್, ಲವ್ ವೆಡ್ಡಿಂಗ್ ರಿಪೀಟ್ ಮತ್ತು ಹಿಲ್‍ಬಿಲ್ಲಿ ಎಲಿಗಿ ಚಿತ್ರಗಳ ಶೂಟಿಂಗ್ ಪೂರ್ಣಗೊಂಡಿದ್ದು, ಪೋ ಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ.

Related posts